ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, May 29, 2008

ನೀನೊಮ್ಮೆ.....


ನೀನೊಮ್ಮೆ.....


ಇವಳೆನ್ನ ಮನದಾಕೆ,ಹಸಿ ಮರಳ ಸುರಿದಾಳ

ನಸುನಗುತ ನಿಂತವಗೆ ಹುಸಿಕೋಪ...!

ಕದತಟ್ಟಿ ಕರೆವಾಕೆ,ಮನಮುಟ್ಟಿ ನಿಂತಾಳ

ತುಸುನಗುತ ಬಂದವಗೆ ಬಿಸಿ ಶಾಖ...

ಗಲ್ಲಾನ ಹಿಡಿದಾಕೆ,ಕಲ್ಲಾಗಿ ನಿಂತಾಳ

ಕಸುವರಿತು ಬಂದವಗೆ ಕಹಿಯೂಟ...

ಮನಸನ್ನ ಕೊಟ್ಟಾಕೆ,ಮನೆಯೊಳಗೆ ಅತ್ತಾಳ

ಕನಸರಿತು ಇದ್ದವಗೆ,ಮುಂಗೋಪ...

ಕರೆದಾಗ ಬಂದಾಕೆ,ನಡುಕಟ್ಟಿ ಕುಂತಾಳ

ನಡೆಯರಿತ ನಂಬಿಕೆಗೆ ಹಿಡಿಶಾಪ..!


ಇವಳೆನ್ನ...........

nakkante ಅಳುತಾಳ,ಅತ್ತಂತೆ ನಗುತಾಳ

ಕೈಬೀಸಿ ಕರೆದವಗೆ ಆಘಾತ...

ತುಸು ನೋಡಿ ನಡೆದಾಳ,ಕಸಬುರುಕೆ ತಂದಾಳ

ಖುಸಿ ನೋಟ ಬೀರಿದವಗೆ ಸಂಕೋಚ

ಕನಸಲ್ಲೆ ನಡುಗ್ಯಾಳ,ಹೊಸ ಆಸೆ ಹೊತ್ತಾಳ

ಸಿಹಿ ನೆನಪ ಕೊಟ್ಟವಗೆ ಹುಡಿಕನಸು

ಇರುವಲ್ಲೆ ಮರಿತಾಳ,ಹೋದಲ್ಲೆ ನಲಿತಾಳ

ಮನೆ ಆಸೆ ಕಂಡವಗೆ ಆಲಾಪ

ಓಡೋಡಿ ಬರುತಾಳ,ಹೊಸ ಆಶೆ ತರುತಾಳ

ನಿನ್ನೆಯಲಿ ಇದ್ದವಗೆ ಹೊಸನೋಟ

ಏನೆಲ್ಲಾ ಮಾಡ್ಯಾಳ,ಸರಿಯೆಂದು ಕುಳಿತಾಳ

ಮನಬಿಚ್ಚಿ ಕುಂತವಗೆ ಕಾರ್ನೊಟ


ಇವಳೆನ್ನ..........

ಏನಾದ್ರೆ ಏನಾಯ್ತು,ನೀನೆನ್ನ ಮನದನ್ನೆ

ಕಣ್ಮುಚ್ಚಿ ಬಾ ಒಮ್ಮೆ ಕೆನ್ನೆ ಕೊಟ್ಟು..

ಏನಿದ್ದರೆನಂತೆ,ಇದ್ದದ್ದೆ ಈ ಸಂತೆ...

ಬಳಿ ಬಂದು ನಿಂತು ಬಿಡು ಮನಸ ಇಟ್ಟು

ನೀನಂತು ನನ ಕಂದ,ಎಷ್ಟಿದ್ದರೇನಂತೆ..

ಕೊಟ್ಟುಬಿಡು ನೀನೊಮ್ಮೆ ಬಾಹುಬಂಧ..

ಮರೆತಿಡು ಹಿಡಿಕೋಪ,ಬಾ ಒಮ್ಮೆ ಮನದನ್ನೆ

ರಾಶಿಯೊಳು ಆಡೋಣ ಬದುಕಿನಾಟ........

ಮನದಿನಿಯ,ದಿನು