ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, August 28, 2008

ನನ್ನದೆನ್ನುವ ಭರದಲ್ಲಿ.........


ನನ್ನದೆನ್ನುವ ಭರದಲ್ಲಿ.........


ಕಳೆದುಹೋದ ಮುದ್ದುಮುಖ
ಬೈಗುಳ ತಿಂದ ಚೆಂಡಿನಾಟ
ಸುಸ್ತೇ ಗೊತ್ತಾಗಿರದ ರಗೋಲಿ
ತುಂತುರು ಮಳೆಯ ಮಂಥನ
ಗೊತ್ತು ಗೊತ್ತೇ ಆಗದ ಹೊತ್ತಿನಾಟ
ಎಲ್ಲರೊಳಗೊಂದು ಎಳೆಬಿಸಿಲ ಉತ್ಸಾಹ.....

ಕಳೆದುಕೊಂಡ ರಂಗೋಲಿ ಹೊಳಪು
ಬೆಂಬಲದ ಸಲುಗೆ ಜೊತೆ ಬೆಸುಗೆ
ತನ್ನದೆನ್ನುವ ಭರವಿಲ್ಲ,ಸ್ವ- ನನದಲ್ಲ!
ನಾಳಿನೊಳು ಅರಿವಿರದ,
ಇಂದಿನೊಳು ಬಿಡುವಿರದ
ವಿಶ್ರಾಂತ,ವಿಪ್ಲವ ಭಾವ.........

ಮುದ್ದು ಮuಖವೇರಿದ ಹುಲ್ಲು
ಗರಿಗೆದರಿದ ಭಾವ.,ಸ್ಥಳ ನಿರೀಕ್ಶೆ
ರಾಗ-ವೈರಾಗ,ಸತ್ಯ-ಅಸತ್ಯ
ಗೊಂದಲದ ಬಿಂಬವಿರೆ,ಶೂನ್ಯ
ಸ್ವ-ಪ್ರತಿಷ್ಟೆಯ ಪ್ರತಿಬಿಂಬ
ಸ್ವಾತಂತ್ರ್ಯ.....ಬಂದನ?????

ಒಳಿತಿನೊಳು ಬಲವಿಲ್ಲ
ಬಲವಿರೆ ಒಳಿತಿಲ್ಲ
ವರ್ತಮಾನದ ಮೊತ್ತ,ಗಣಿಸಿಲ್ಲ
ಕಾಲದೊಳು ಪಡೆದಂತೆ....
ಗಣಿಕೆಯೊಳು........
ಬದುಕೊಂದು ವ್ಯವಕಲನ.........

ದಿನು

ಮನದನ್ನೆ.......


ಮನದನ್ನೆ.......


ಮೌನದೊಳಗಡೆ ಮಾತನಾಡುವ
ಭಾವ ಬಂದುವೇ ಸ್ವಾಗತ
ಪ್ರೇಮ ವೀಣಿಯ ಮೀಟ ಬಯಸುವ
ಹಗಲು ಕನಸಿಗೆ ಸ್ವಾಗತ
ಮನದ ಗೋಡೆಯ ಕೆದಕಿ ಕೇಳುವ
ಮೋಹ ದರ್ಪಕೆ ಸ್ವಾಗತ
ಬಂಧ ಭಾವದ ಬಂದಿಯೊಂದಿಗೆ
ಸುಪ್ತ ಸರಸಕೆ ಸ್ವಾಗತ...

ಅರಿತು ಅರಿಯದೆ ಕಳೆವ ದಿನದಲಿ
ಹುಚ್ಚು ಮನಸಿನ ಕಚಗುಳಿ
ನಮ್ಮದೆನ್ನುವ ಸ್ವಪ್ನ ಲೋಕಕೆ
ನಿನ್ನ ಕನಸೇ ಬಳುವಳಿ
ಮ್ರದುಲ ಸ್ಪರ್ಶ,ತಪ್ತ ಮೌನ
ಪ್ರೇಮ-ಕಾಮದ ಓಕುಳಿ

ಬೆಳೆವ ಸೂರ್ಯ,ಮರಳೊ ಚಂದ್ರ
ಬೀಸೊ ಗಾಳಿಯ ರಿಂಗಣ
ಎಲ್ಲಿ ಹೋದೆ, ಯಾವ ಬೀದಿಗೆ
ನಿಲ್ಲ ಬಯಸಲೆ ಕಂಪನ?
ಬಂದೆ ಬರುವೆ ಭಾವ ಮಡಿಲಿಗೆ
ಇರಲಿ ಕಲ್ಪನೆ,ಜೊತೆ ಚುಂಬನ......

ನಿನ್ನ,ದಿನು

Monday, August 11, 2008

ಹೆಣ್ಣು ಸಲಿಲ......

ಹೆಣ್ಣು ಸಲಿಲ......

ಗುಡಿ ಗರ್ಭದ ಸೊಗಸಲ್ಲಿ
ಬದುಕ ಮೂಲದ ಬೆಳಕು
ತೊಡೆವುಸಿರ ಸೊಬಗಲ್ಲಿ
ಸುಪ್ತ ಪರಿಧಿಯ ಹೊಸಕು,
ಜಡ ಮೂಲಕೆ ಬಲವಾಗು
ಬೆಳವಣಿಗೆಯ ಉಸಿರಾಗು
ಕೊಡು ಜೀವ,ಅದೇ ಭಾವ
ಹೆಣ್ಣೀ ನೀನಾಗು ಮಾತಾ.........

ನುಡಿಗಳಿಗೆ ಅಡಿಯಾಗು
ಗುಡಿಸಲಿನ ನಗೆಯಾಗು
ಬೆರಳ ಸಂಧಿನ ಗೆರೆಯ
ಇತಿಹಾಸ ನಿನದಾಯ್ತು!!
ಬಿದ್ದ ಕ್ಷ್ಣಣದಲಿ ಎದ್ದು
ಮುದ್ದಿನ ನೆನಪಾಯ್ತು
ಏಳಬಯಸುವ ಮೊಳಕೆ
ಕೈಯೆತ್ತು ಒಮ್ಮೆ ಪಕ್ಕ
ಹೆಣ್ಣೀ ನೀನಾಗು ಅಕ್ಕ.........

ಎದ್ದಿರುವ ಉಸುಕಲ್ಲಿ
ಮೆದ್ದಬಯಸುವ ಭಾವ
ಗಂಭೀರ ಸೆಲೆಯಲ್ಲಿ
ಜೀವ-ಸತ್ಯ ಮೇವ!
ಬಂದೊಮ್ಮೆ ಅಪ್ಪಿಬಿಡು
ಕಣ್ಮುಚ್ಚಿ ಓಡಿಬಿಡು
ಉಸಿರ ನೆಲೆ ಬದಿಗಿಟ್ಟು
ಕೆಳಮಾಡೊ ಒಳ ಅಂಗಿ
ಹೆಣ್ಣೀ ನೀನಾಗು ತಂಗಿ..........
ಇರುಳ ಕನಸು,ಹಗಲ ಕಸುವು
ಮುಕ್ತ ಭಾವಕೆ ತತ್ವ
ಇದ್ದ ಭಕ್ತಿಗೆ ಸತ್ವ.....
ಕನಸ ಕಚಗುಳಿ
ಹೊಸತೆನ್ನುವ ಜಗಕೆ
ತುಂತುರು ಮಳೆ
ಹರಿದಂತೆ ಹರಿವ
ಬೆರೆತಂತೆ ಬೆರೆವ
ಇಲ್ಲದಿರೆ ಇನ್ನಿಲ್ಲ
ವ್ಯಕ್ತವಾಕ್ಯವು ಸಲ್ಲ
ಬಿಟ್ಟ ಮನಸಿನ ಕೆಳದಿ
ಹೆಣ್ಣೀ ನೀನಾಗು ಮಡದಿ.........
ಗುಂಗುರು ಕೂದಲ ಗೆರೆ
ಸಂಧಿಯೊಳಗೆ ಕನಸ ಸೆರೆ
ನಡೆಯೋ ಹೆಜ್ಜೆಯ ಗಣನೆ
ತಿಳಿ ಹೇಳಲೊಲ್ಲದ ಕಲ್ಪನೆ
ಬಿಟ್ಟರೂ ಬಿಡಲಾಗದ ಸ್ಥಿತಿ
ಹೆಣ್ಣೀ ನೀನಾಗು ಗೆಳತಿ..........
ಅದೆ ನೋಡು ಹೆಣ್ಣು ನೀ ಸಲಿಲ
ಬಂಧನದ ಗೂಡೊಳಗೆ ತಳಮಳ
ಹೊದ್ದುಬಿಡು ನಿನ್ನ ಅಕ್ಕರೆಯ ಹೊದಿಕೆ
ನಿನ್ನದೀ ಧರೆ,ಯಾಕಿಷ್ಟು ಹೋಲಿಕೆ?
ನಿನ್ನಿರುಳ ಗರ್ಭದಲಿ ನನ್ನೀ ಹೊಂದಿಕೆ....

ದಿನು

ವರ್ಷ ಸ್ಪಂದನ...


ವರ್ಷ ಸ್ಪಂದನ...

ಮಳೆಯೆಂದರೆ......
ಬೆವೆತುಸಿರಿಗೆ ಸಿಂಚನ
ಸಂಧಿಯೊಳಗಿನ ರಿಂಗಣ
ಭಾವದ ಹನಿ ಚಿಲಿ ಪಿಲಿ
ಗಬ್ಬೆದ್ದ ಸ್ತರಕೆ ಮೋಕ್ಷ
ಕನಸು ಕಾಯಕದ ಮೊಳಕೆ
ಕಾಲ ಚಕ್ರದ ಗಾಲಿ
ಮಿಂಚಿನೊಳಗಿನ ತಂಪುಹಾಡು
ಕವಿಯಕ್ಷರ- ಪಗಡೆ
ಪ್ರೇಮದೊಳು ತುಸು ತಿಲ್ಲಾನ
ನಿರ್ಲಿಪ್ತತತೆಗೆ ಕಾಲ ಬದಲಾವಣಿ!!!!

ಮಳೆಯಿಂದ...........
ನೆಲ-ಬಾಳು ಹಸಿರಾಯ್ತು,
ಸೋರಿನೊಳು ನಗು ಉಕ್ಕಿ
ಹೊರದೇಹ ತಂಪಾಯ್ತು,ಕಣ್ಣು ಕೆಂಪಾಯ್ತು
ಹೊರಸೂಸೊ ಹನಿಹನಿ,
ಮನದೊಳು ಇಬ್ಬನಿ
ಮಂದಿಯೊಳು ಚಡಪಡಿಕೆ,ಇನ್ನೆಲ್ಲೋ ಗುದ್ದಾಟ
ಕುಸಿದ ಸೌಧ,ಮುಳುಗೊ ದೇಹದ ಬಯಕೆ
ಜರಿಸಾರಿ,ನಿಲುವಂಗಿ;ಮಡಚಿಟ್ಟ ಪುಸ್ತಕ
ಬದುಕಿನೊಳು ಭಾವ,ಭಾವ ಬದುಕಲ್ಲ
ಕಿಂಡಿಯೊಳಗಿನ ಹನಿ ಕೂಡ ದೊಡ್ಡ ಹಳ್ಳ!!!

ಓ ಮಳೆಯೇ.....
ಹೊಯ್ದು ಬಿಡು ಕೊಳೆತೊಳೆಯೇ..
ನೀನಾಗು ಕೈ ನೀಡೊ ಕರಸಿಂಚನ
ಕೊಳೆಯ ಮೂಲ ತಲುಪಲಿ ನೀರಬಳುಕು
ಬೆವೆತ ದೇಹದ ಉಸಿರಾಗು
ಕನಸ ಬೆಳೆಯುವ ಮನದ ಕಸುವಾಗು
ಹುಯ್ಯೋ ಹುಯ್ದು ಬಿಡು
ಕಣ್ಣೀರು ಕಾಣದಷ್ಟು
ಇತಿಹಾಸ ಉಳಿಯದಷ್ಟು!?

ರಚನೆ: ದಿನು

Friday, August 8, 2008

ನೆನಪಾಗುತಿದೆ.......


ನೆನಪಾಗುತಿದೆ.......


ಅದೇ ಹಳೆರಸ್ತೆಯ ಗುಳಿಹಾಡು
ಕೆನ್ನೆ ಮುದ್ದಿಸುತಿದ್ದ ಕೈಗಳು
ಮಣ್ಣ ಮದ್ಯೆ ರಂಗಾಗುತಿದ್ದ ಬಿಳಿಅಂಗಿ
ಕೆಂಪು ರಿಬ್ಬನ್ ಮದ್ಯೆ ತೇಲುತಿದ್ದ ಜುಟ್ಟು
ಒಂಟಿ ಕೊಡೆಯಡಿಯ ಮೈಶಾಖ
ಸಂತೆಯಿಂದ ಅಪ್ಪ ತರುತಿದ್ದ ಕಡಲೆ
ನಗು ತರಿಸುತಿದ್ದ ತೆರೆದ ಚಡ್ಡಿ
ಕೈಚುಚ್ಚಿ ಓಡುತಿದ್ದ ಮುದ್ದು ಹುಡುಗಿ
ಗಂಜಿ ನಡುವಿನ ಅನ್ನದಗಳು
ಮೊದಲ ಜಾತ್ರೆಯ ತೊಟ್ಟಿಲಾಟ
ತೊದಲು ತೊದಲಿ ಗೆದ್ದ ಆಶುಭಾಷಣ
ಸ್ವಾತಂತ್ರ್ಯ ದಿನ ಸಿಗುತಿದ್ದ ಮುಷ್ಟಿಯಷ್ಟು ಸಿಹಿ
ಅಮ್ಮನ ಕೈಗಿಟ್ಟು ಕುಣಿದ ಬಹುಮಾನದ ಲೋಟ
ಹಾಡಲೆತ್ನಿಸಿ ನಕ್ಕ ಮುಗ್ದ ದನಿ
ಪುಸ್ತಕದಡಿ ಇತಿಹಾಸವಾದ ಪ್ರೇಮಪತ್ರ
ಪುಟಗಳ ನಡುವಿರುತಿದ್ದ ನವಿಲುಗರಿ
ಅಳಿದಿಳಿದ ಅಜ್ಜನಂಗಡಿಯ ಶುಂಠಿ ಚಾಕಲೇಟ್
ಕಳೆದಂತೆ ಮಳೆಯಾದ ಕಣ್ಣೀರು
ನೋವಲ್ಲಿ ನಲಿವಾಗುತಿದ್ದ ಅಪ್ಪನಪ್ಪುಗೆ
ಚಕ್ರಕ್ಕೆ ಕಲ್ಲಿಡುತಿದ್ದ ದೀಪಾಲಿ ಬಸ್ಸು
ಚಿಕ್ಕಪ್ಪ ತಂದಿಟ್ಟ ಮೊದಲ ಪ್ಯಾಂಟು
ಪೇಪರ್ ನಲ್ಲಿ ಮೂಡಿದ್ದ ಕಪ್ಪು-ಬಿಳುಪು ಪೋಟೊ
ಎಲ್ಲವೂ ನೆನಪಾಗುತಿದೆ................................
ಬದುಕು ಸತ್ವ ಪಡೆದಂತೆ.ಎಲ್ಲೊ ಕಳೆದಂತೆ
ಇತಿಹಾಸ ಬದುಕಾಗಿ,ಬದುಕು ಇತಿಹಾಸವಾದಂತೆ
ಕನಸು ನನಸಾಗಿ ಇನ್ನೆಲ್ಲೋ ಸವಿದಂತೆ
ಸತ್ಯ,ಕಹಿಸತ್ಯ....ಬದುಕು ಬರಿ ನೆನಪ ಕಂತೆ....?
ರಚನೆ: ದಿನು
ಅರ್ಪಣಿ: ಬಾಲ್ಯ ಬದುಕಾದ ಎಲ್ಲ ಮನಸುಗಳಿಗೆ......

ಒಂದರೊಳಗೊಂದು........


ಒಂದರೊಳಗೊಂದು........


ಮುಸ್ಟಿಯೊಳಗಿನ ಮರಳು
ಬಿಟ್ಟ ಗಳಿಗೆ.......
ಅಂಟಿದ ಅವಶೇಸ
ತಿಳಿ ಹೇಳುವ ಗತ ಕರ್ತ್ಯ

ಮುಸ್ಟಿಯೊಳಗಿನ ನೀರು
ಬಿಟ್ಟ ಗಳಿಗೆ......
ಸ್ವಾನುಭವದ ಛಾಯೆ
ಅಗಮ್ಯ ಅವಶೇಸ
ಅನುಭವದೊಳಿತು ಗತಕರ್ತ್ಯ..

ಪ್ರೀತಿ ಮರಳು....ಬಿಡಲೊಲ್ಲದು
ಕಳೆದ ಮನಸಿಗೆ...
ಪ್ರಕರ ಭಾವದ ಶೇಸ
ಹೊರಕಾಣುವ ಬಿಂಬ
ಭಾವ ಪ್ರತಿಬಿಂಬ
ಜಗ ನೋಡುವ ಹೊಳಪು....

ಸ್ನೇಹ ನೀರು....ಬಿಡಲೊಲ್ಲದು
ಮಂದ ಭಾವದ ಶೇಸ..
ಹೊರಕಾಣದು ಜಗಕೆ
ಅನುಭವವಿರೆ ಮನಕೆ
ಬಿಟ್ಟರು ಬಿಡಲಾಗದ ಹೊದಿಕೆ...

ದಿನು

Thursday, August 7, 2008

ಯಾಕೆ ಗೆಳತಿ....??


ಯಾಕೆ ಗೆಳತಿ....??

ಒಂದು ಮಾತು ಹೇಳಲಿಲ್ಲ
ಬಿದ್ದ ದನಿಯು ಗೊತ್ತೇ ಇಲ್ಲ
ಕಸುವು ಕದಡಿ,ಸ್ವಪ್ನ ಭಾವ
ಯಾಕೆ ಗೆಳತಿ ಮಾತೇ ಇಲ್ಲ??

ಸ್ನೇಹ ಎಂಬ ಚಿತ್ತಾರಕೆ
ಬಣ್ಣ ಬಳಿದು ರೂಪ ಕೊಟ್ಟೇ
ಬಣ್ಣ ಕದಡಿ ರೂಪ ಬದಲು
ಕರೆದರೆಷ್ಟು?? ಭಾವ ತೊದಲು!!!

ಗೀಚಿ ಹೋದ ಪದಗಳೆಷ್ಟೋ
ಹರಟೆ ಮಾತ ದ್ವಂದ್ವವೆಷ್ಟೋ
ಸ್ನೇಹದೊಲುಮೆ ನಿನದೆ ಗಾನ
ರಾಗ ಸುಳಿಯೇ ನೀನೇ ಮೌನ!!

ದೂರವಾಣಿ ದೂರವಾಯ್ತು
ಪತ್ರ ಕೂಡ ಕಾಣದಾಯ್ತು
ನೆನಪು ನೂರು, ನೋವು ಜೋರು
ಎಲ್ಲೋ ಸೆಳೆತ,ಅದುವೆ ಮಿಳಿತ

ಒಟ್ಟು ತಿಂದ ಮಂಚೂರಿ
ನೀನೆ ಇರದ ಮನಸ ಉರಿ,
yaake, ಏನು...ಪ್ರಶ್ನೆ ಹೇಗೆ??
ಮಾತೇ ಇರದಿರಲದೆಂತು ಹಗೆ??

ನೋಡಬೇಕು ನಿನ್ನ ಒಮ್ಮೆ
ಬೈಯಬೇಕು ಹೀಗೆ ಸುಮ್ನೆ
ಏನೇ ಇರಲಿ ಬದುಕ ಸ್ಪುರಣ
ಹೇಳಿ ಹೋಗು ವಿದಾಯ ಕಾರಣ??
dinu