ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Wednesday, September 23, 2009

ಸ್ನಾನಕ್ಕಿಂತ ಮೊದಲು ಸುಂದರವಾಗಿ ಕಾಣೋ ಹಾಗೆ!!


ಬದುಕಿನ ಕೆಲವೊಂದು ಸತ್ಯಗಳೇ ಹೀಗೆ......!

ಎಷ್ಟು ಬಾರಿ ಕೇಳಿದ್ದೇವೆ...ಸತ್ಯವನ್ನು ನುಡಿಯಬೇಕು, ನೇರ ನಡೆ-ನುಡಿಯುಳ್ಳ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ನಂಬಿಗಸ್ಥ ವ್ಯವಹಾರವಿರಬೇಕು...there should be a models like Gandhi......ಆದರೆ....?. ಯಾವತ್ತಾದ್ರೂ 100% ಸತ್ಯವನ್ನು follow ಮಾಡಬಲ್ಲ, ಮನಸಿಗೆ ತಪ್ಪು ಕಾಣಿಸಿದ್ದನ್ನ ನೇರವಾಗಿ ಹೇಳಬಲ್ಲ ವ್ಯಕ್ತಿತ್ವ ಬೆಳೆಸಿಕೊಂಡವರು ಆಪ್ತರಾಗಿ ಈ ಸಮಾಜದಲ್ಲಿ ಏಳಿಗೆ ಹೊಂದೋಕೆ ಸಾದ್ಯಾನಾ?....ಕೊನೇ ಪಕ್ಷ ಬದುಕಿನ ಪಥದಲ್ಲಿ upto date valued ಮನುಷ್ಯ ಅನ್ಯರಿಗಿಂತ ಬೇಗನೆ ಆಪ್ತರಾಗೋಕೆ ಸಾದ್ಯಾನಾ?....ನಿಜವಾಗಿ ಯೋಚಿಸಿದ್ರೆ ಇದು ಒಂತರಾ ಸ್ನಾನಕ್ಕಿಂತ ಮೊದಲು ಸುಂದರವಾಗಿ ಕಾಣೊ ಹಾಗೆ!, ತುರಿಕೆಯುಳ್ಳ ಗಾಯವನ್ನು ಪದೇ ಪದೇ ತುರಿಸುವಾಗ ಸಿಗುವ ಸುಖದ ಹಾಗೆ. ಒಪ್ಪಿಕೊಳ್ಳೋಕೆ ಕಷ್ಟ...ಆದರೂ ವಿಷಯ ಮಾತ್ರ ಸ್ಪಷ್ಟ. ಹಾಗಾಗಿ ಮನುಷ್ಯ ಪೂರ್ಣ ಪ್ರಮಾಣದಲ್ಲಿ detergent clean ಆಗಿ ಇದ್ದಾಗ, ಅನ್ಯರಿಗೆ ಒಳ್ಳೆಯವನಾಗಿ ಕಾಣಿಸುವುದಕ್ಕಿಂತ, ಬದುಕಿನ ಕನ್ನಡಿ ಮುಂದೆ ನಿಂತಾಗ ಅಲ್ಪ ಸ್ವಲ್ಪ ಆಚೀಚೆ ಮಾಡಬಲ್ಲ so called SMART ಮನುಷ್ಯ ಮಾತ್ರ ಈ ಸಮಾಜದಲ್ಲಿ accept ಆಗಬಲ್ಲ. ಕಡೇ ಪಕ್ಷ 100% ಸತ್ಯ, ನಂಬಿಕೆ maintain ಮಾಡೋವರಿಗಿಂತ ಉತ್ತಮ!

ಎಷ್ಟೋ ಬಾರಿ ಅಂದುಕೊಳ್ಳುತ್ತೇನೆ....ಅನ್ನಿಸಿದ್ದನ್ನ ನೇರವಾಗಿ ಹೇಳಲೇಬಾರದು, ಕಲೆ ಕಾಣಿಸಿದರೂ ಬೆಲೆ ಇದೆ ಎನ್ನುವಂತೆ ವರ್ತಿಸಬೇಕು, ಸುಂದರವಾಗಿ ಕಾಣಿಸದಿದ್ದರೂ ಗೆಳತಿ, ’How I look today?' ಎಂದಾಗ ’you look like angel' ಅನ್ನಬೇಕು, ಕೈಯಲ್ಲಿ ಅಧಿಕಾರ ಇದ್ದವರು ತಪ್ಪು ಮಾಡಿದರೂ ನೋಡದಂತೆ ಸುಮ್ಮನಿರಬೇಕು, ......ಹೀಗೆ ಹಲವು. ಆದರೂ ಸಾದ್ಯವಾಗುತ್ತಿಲ್ಲ!. ಸುಂದರವಾಗಿ ಕಾಣದ ವಸ್ತುವಿಗೆ looks great ಅನ್ನೋ ಅಭ್ಯಾಸ ಬಂದೇ ಇಲ್ಲ....ಇದರಿಂದಾಗೇ ನನಗೆ ಪೋಟೊ ಕಳಿಸುವವರ ಸಂಖ್ಯೆ ಕಡಿಮೆಯಾಗಿರಬಹುದು!. ಎಷ್ಟೇ ಆಪ್ತರಿದ್ದರೂ ತಪ್ಪಿಗೆ ತಪ್ಪು ಎಂದು ಖಂಡಿಸಿದ್ದರಿಂದಲೇ ಸಂಬಂದಗಳ ನಡುವೆ ಮೌನದ ಅಂತರ ಜಾಸ್ತಿಯಾಗತೊಡಗಿದೆ. Senior ಅಂದುಕೊಂಡವರ ಹುಂಬು ಜ್ನಾನಕ್ಕೆ, ಅವರು ತಿಳಿ ಹೇಳುವ ನಿರ್ಧಾರಕ್ಕೆ ಪ್ರತಿಭಟಿಸಿ ಅವರ ದ್ರಷ್ಟಿಯಲ್ಲಿ ಒಂತರಾ biased target ಆದ ಅನುಭವಗಳು ಹಲವು. ಇದು ನನ್ನೊಬ್ಬನ ಬದುಕಿನ ಸತ್ಯವಲ್ಲ. ಬಹುಶ: ಬಹುತೇಕ ಎಲ್ಲರ ಬದುಕಿನಲ್ಲೂ ನಡೆದಿರಬಹುದಾದ ಅಂಶಗಳು. ಸಾಮಾಜಿಕವಾಗಿ ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳಬೇಕಾದರೆ ಎರಡು ಮಾರ್ಗ ಸ್ಪಷ್ಟ, ಅನ್ನಿಸಿದ್ದನ್ನ ಹೇಳದೆ ಮೌನವಾಗಿ ಇರುವಂತದ್ದು......ಇಲ್ಲವಾದಲ್ಲಿ ಅನ್ನಿಸಿದ್ದನ್ನ ಬಿಟ್ಟು ಬಣ್ಣ ಹಚ್ಚಿ ಮಾತನಾಡುವಂತದ್ದು. ಎರಡೂ ಸಾದ್ಯವಾಗದಿದ್ದಲ್ಲಿ ನನ್ನ ತರಹ ನಿಷ್ಠುರ ಹುಡುಗ ಅನ್ನೋ ಬಿರುದು ಪಡೆಯಕೊಳ್ಳಬೇಕಾದೀತು!!.

ನಿಷ್ಠುರವಾದ ಸತ್ಯದ ಪರಿಧಿಯಲ್ಲಿ ಒಳಿತಿನ ಅಂಶವಾದರೂ, ದೈನಂದಿನ ಬದುಕಿನಲ್ಲಿ 'SMART' ಅನ್ನಿಸಿಕೊಳ್ಳಲಾಗದು. ಅನುಭವದ ನೆಲೆಯಲ್ಲಿ, ಇಂದಿನ ಸಂಬಂದಗಳ ನಡುವೆ ನಿಷ್ಠುರ ಸತ್ಯಕ್ಕಿಂತ, ಸಿಹಿ ಸುಳ್ಳು ಆಪ್ತವೆನಿಸುತ್ತೆ. ನೇರ ನಡವಳಿಕೆಯಿಂದ ಕೊನೆಗೆ self-comfort ಕೂಡ ಸಿಗದು ಅನ್ನೋವಂತಾ ಸ್ಥಿತಿ ನಿರ್ಮಾಣವಾಗುತ್ತೆ. ಯಾವತ್ತಾದ್ರು ನಮ್ಮವರು ಅಂದುಕೊಂಡವರಿಗಾಗುವ ಬೇಸರ, ಗೌರವ ಕೊಡುವ ವ್ಯಕ್ತಿಗಳಿಗಾಗುವ ಮುನಿಸು ಮನಸಿಗೆ ಸಂತೋಷ ಕೊಡೋಕೆ ಸಾದ್ಯಾನಾ?...ಆದರೊಂದು ಮಾತು, ಸ್ನಾನಕ್ಕಿಂತ ಮೊದಲಿನ ಸೌಂದರ್ಯ ಹೆಚ್ಚು ಹೊತ್ತು ಉಳಿಯದು, ಅಂತೆಯೇ ವಾಸ್ತವದ ಮೇಲ್ಮೈ ಹೊದಿಕೆ ಹೆಚ್ಚು ದಿನ ಸಂಬಂದವನ್ನು ನಿರ್ಮಿಸದು. ಹಾಗಾಗಿ ಸುಳ್ಳು ಇನ್ನೊಬ್ಬರನ್ನ ನೋಯಿಸದಿರಲಿ, ಹೊಗಳಿಕೆ ಇನ್ನೊಬ್ಬರ ಕಾರ್ಯ ಪಥವನ್ನು divert ಮಾಡದಿರಲಿ, ಸಮಜಾಯಿಸುವ ಮಾತು ಕಾರ್ಯ ತತ್ಪರತೆಗೆ ಅಡ್ಡಿಯಾಗದಿರಲಿ......ಅಷ್ಟಕ್ಕೂ ನಮ್ಮ ಮನಸಿಗೆ ಹತ್ತಿರವಾದವರ ದುರ್ಬಲತೆ ನಾವು ಕೇಳದೆ diplomatic ಆಗಿದ್ರೆ ಅದನ್ನ ಹೇಳೊದಾದ್ರೂ ಯಾರು? ......ಇಷ್ಟೆಲ್ಲ ಗೊಂದಲ ನಡುವೆ ಎಲ್ಲವನ್ನ ನಿಭಾಯಿಸಬಲ್ಲ ’SMART' ವ್ಯಕ್ತಿತ್ವ ನಮ್ಮದಾಗಿರಲಿ!
ದಿನು:)

Thursday, September 10, 2009

ಹುಚ್ಚಿನಲ್ಲಿ ಸತ್ಯವಿದೆ ಗೊತ್ತಾ?!ಒಂದೇ ಸವನೆ ಒಟ ಒಟ ಮಾತು, ನಾಲಗೆಯಂಚಿನಲ್ಲಿ ಅದರುತ್ತಿದ್ದ ತುಂತುರು, ಏನೋ ಕಳೆದಂತೆ ವ್ಯಕ್ತವಾಗುತ್ತಿದ್ದ ಮರೀಚಿಕೆ......ಭೂತ ತಪ್ಪಿಸಿಕೊಂಡಂತೆ ಹಿಂದಕ್ಕೆ ಓಡುವ, ಭವಿಷ್ಯವನ್ನು ಬಾಚಿಕೊಳ್ಳುವ ತವಕದಲ್ಲಿರುವಂತೆ ಮುಂದಕ್ಕೆ ಓಡುವ ಆ ಮನುಷ್ಯನಿಗೆ ಭೂತ-ಭವಿಷ್ಯಗಳ ಕಲ್ಪನೆ ಇರಲಿಕ್ಕಿಲ್ಲ. ಹರಿದ ಬಟ್ಟೆಯಲ್ಲಿ ಆಚೀಚೆ ಓಡಾಡುತ್ತಿದ್ದ ಅರೆ ಹುಚ್ಚನನ್ನು ಕಂಡಾಗ ಮನದಲ್ಲಿ ತುಡಿದ ಮಾತುಗಳಿವು.
ಹುಚ್ಚು...ಹಲವು ಬಗೆಯದ್ದು!. ವೈಜ್ನಾನಿಕ ಭಾಷೆಯಲ್ಲಿ ಇದು psychotic disorder. (like organic brain syndromes, schizophrenia, bipolar disorder etc). ಮಾನವೀಯ ಭೂಮಿಕೆಯಲ್ಲಿ ಕರುಣಾಜನಕ ಸ್ಥಿತಿ......ಇನ್ನು ಆಡುಭಾಷೆಯನ್ನಾಡುವ ಬಾಯಿಗಳಲ್ಲಿ ಮನುಷ್ಯನ ಪಾಪಕ್ಕೆ ದೇವರು ಕೊಟ್ಟ ಶಾಪ!. ಆದರೆ....ಒಂದು ಮಾತು.....ಯಾವ ಇತಿಹಾಸದಲ್ಲೂ, ವೈದಿಕತೆಯಲ್ಲೂ ಮನುಷ್ಯನ ಪಾಪಕ್ಕಾಗಿ ಹುಚ್ಚನಾಗು ಎನ್ನುವ ಶಾಪ ಕೊಟ್ಟ ನಿದರ್ಶನಗಳಿಲ್ಲ...ಹಾಗಾಗಿ ಈ ಬಗೆಯ ಆಡು ಮಾತುಗಳು ಮನುಷ್ಯನ ಇನ್ನೊಂದು ಬಗೆಯ ಹುಚ್ಚಿಗೆ ಸೇರುವಂತದ್ದು !. ಆದರೆ ನನ್ನ ಈ ಬರಹ ವೈಜ್ನಾನಿಕ ಪರಿದಿಯನ್ನ ಮೀರಿದ ಹುಚ್ಚು...ಯಾಕೆ ಇದು ಕಾಣಿಸಿಕೊಳ್ಳುತ್ತೆ ಎಂದು ಹೇಳಲಾಗದ ಹುಚ್ಚು
ಬಹುಷ: ಬದುಕಿನ ದಿಶೆಯಲ್ಲಿ ಸತ್ಯದ ಹೊರಳಾಟ ನಾಲಗೆಯಲ್ಲಿ ತೊದಲುವ ಸ್ಥಿತಿ ಕೂಡ ಹುಚ್ಚು!. ಈ ಬಗೆಯ ಹುಚ್ಚು ಏನೋ ಬೇಕೆಂಬ ಅತೀವ ಹಂಬಲ, ಬಯಕೆ, ಆಶೆ, ಆಕಾಂಕ್ಷೆ, ಅಭಿಪ್ಸೆ, ಚಪಲ ..........ಹೀಗೆ ಹಲವು ಬಗೆಯಲ್ಲಿ ವ್ಯಾಪಿಸಿಕೊಳ್ಳುತ್ತೆ. ಇದು ಒಂತರಾ..ಒಂದು ಸಿಗರೇಟಿಗೋಸ್ಕರ ನಾಲ್ಕೈದು ಮೈಲಿ ನಡೆದು ಸೇದಲೇ ಬೇಕೆನ್ನುವ ಮನ:ಸ್ಥಿತಿ !. ಮನೆಯಡುಗೆ ಬಿಟ್ಟು ಹೊರಗಡೆ ತಿನ್ನಬೇಕೆನಿಸುವ ಹುಚ್ಚು ಮನಸು, ಗಂಟೆಗಟ್ಟಲೆ ಮಾತನಾಡಿದರೂ ಮತ್ತೆ ಮನಸಿಗೆ ಬೇಸರ ಮಾಡಿಕೊಳ್ಳುವ ಪ್ರಿಯತಮ/ಮೆ, ಮನೆ ಮಕ್ಕಳು ಅಳುತ್ತಿದ್ದರೂ ದುಡಿದ ದುಡ್ಡಿನಲ್ಲಿ ಮದ್ಯ ಕುಡಿಯಬೇಕೆನ್ನಿಸುವ ಚಟ, ಬದುಕನ್ನೇ ಮರೆತು ಏನೇನೋ ಸಾಧಿಸಹೊರಟ ಎಷ್ಟೋ ಮನಸುಗಳು............ಇವೆಲ್ಲ ಅರ್ಥವಿಲ್ಲದ ವರ್ತನೆಗಳಲ್ಲ. ಅನುಕರಣಿ ಸಹ ಅಲ್ಲ. ಇದನ್ನು ಕೇಳುವ ಭರದಲ್ಲಿ ಅವನಿಗೆ/ಅವಳಿಗೆ ’ಹುಚ್ಚು’ ಅಷ್ಟೆ ಎನ್ನುವ ಮಾತು ಸಹ ಸಹಜ. ಆದರೆ ಇವೆಲ್ಲಾ ಸತ್ಯವಿಲ್ಲದ ಹುಚ್ಚುಗಳೇ?......ಉತ್ತರ ಜಟಿಲ!. ಸ್ಥೂಲ ಯೋಚನೆ ನಮ್ಮನ್ನು ದ್ವಂದ್ವ ಬಾವಕ್ಕೆ ತಳ್ಳಬಹುದು. ನಮ್ಮದಲ್ಲದ್ದನ್ನ ನಮ್ಮದು ಅಂದುಕೊಳ್ಳುವಂತದ್ದು, ನಮ್ಮದಾಗಿಹ ವಸ್ತು ಹತ್ತಿರವಿದ್ದಾಗ ಗಮನಿಸದೆ, ದೂರವಾದಾಗ ’miss' ಮಾಡಿ ಅಳುವಂತದ್ದು, ನಾಳಿನ ಬಗೆಗೆ ಅತಿಯಾದ ಯೋಚನೆ ಒಳಿತಲ್ಲ ಎಂದು ಎಷ್ಟು ಬಾರಿ ಯೋಚಿಸಿದರೂ, e-mail forward ಮಾಡಿದರೂ...ನನ್ನ ಉದ್ಯೋಗ ಖಾತ್ರಿಯೋ, ಅಲ್ಲವೋ ಎಂಬ ಬಗ್ಗೆ ಚಿಂತಿಸುವಂತದ್ದು....ಎಲ್ಲವೂ ಅರ್ಥವಿಲ್ಲದ ಹುಚ್ಚು ವರ್ತನೆಗಳಾ?.

ಕಾಣದ ದಿನಗಳ ಬಗೆಗೆ ಕನಸಿನ ಸೌಧ ಕಟ್ಟುವಂತದ್ದು ಕೂಡ ಸತ್ಯವುಳ್ಳ ಹುಚ್ಚು!. ಒಂದೆಡೆ ’we should dream'....ಇನ್ನೊಂದೆಡೆ, ’dream with limitations', ಹಾಸಿಗೆ ಇದ್ದಷ್ಟು ಕಾಲು ಚಾಚು......ooopsss....ದ್ವಂದ್ವ!. ಈ ದ್ವಂದ್ವಗಳೇ ನಮ್ಮನ್ನ ಹುಚ್ಚು ಬಾವನೆಗಳತ್ತ ಕೊಂಡೊಯ್ಯುವ ಅಂಶಗಳು. ದ್ವಂದ್ವ ಬಾವನೆ without frame ಸ್ಪಷ್ಟತೆಯಿಲ್ಲದ ಸತ್ಯ. ಸತ್ಯ ಇದ್ದರೂ ಸತ್ವ ಕೊಡಲಾಗದ ಸ್ಥಿತಿ. ಎಷ್ಟೋ ಬಾರಿ ನಾವು ಕೈಗೊಳ್ಳುವ ನಿರ್ದಾರಗಳು ಹುಚ್ಚು ಎನ್ನಿಸುವಂತದ್ದು ಸ್ಪಷ್ಟತೆಯ ಕೊರತೆಯಿಂದಾಗಿ. PUC ಮುಗಿಸಿದಾಗ ಪದವಿ ಕಾಲೇಜು ಸೇರುವ ಮೊದಲು professional and unprofessional ಕೋರ್ಸ್ ಗಳ ನಡುವೆ ದ್ವಂದ್ವ ಇರುತ್ತೆ. ಇಷ್ಟಿದ್ದೂ ಪದವಿ ಆಯ್ಕೆ ಮಾಡಿದ ಜನರನ್ನು ನೋಡಿ ಹುಚ್ಚು ಹುಡುಗ/ಗಿ...ಎಂಜಿನಿಯರಿಂಗ್ ಮಾಡಬಹುದಿತ್ತು ಎನ್ನುವಾಗ ಆ ಹುಡುಗನ(ಗಿಯ) ನಿರ್ಧಾರದಲ್ಲಿ ಸತ್ಯವಿದೆ ಅನ್ನಿಸಲ್ವಾ?. ಕೈ ತುಂಬಾ ಹಣ..ಕಾರು, ಮನೆ, ನೋಡೊಕೆ ಒಂದಷ್ಟು ರೂಪ ಎಲ್ಲಾನು ಇರೊ proposal ಬಿಟ್ಟು, ಪಕ್ಕದ್ಮನೆ ಮಂಜು ಜೊತೆ ಓಡಿ ಹೋದ್ಲು ಹುಚ್ಚು ಹುಡುಗಿ ಅನ್ನೋವಾಗ, ಆ ತೀವ್ರತೆಗೆ ಅವಳ ಪ್ರೀತಿ ಕಾರಣವಾಗಿತ್ತು, ಆ ಪ್ರೀತಿಯಲ್ಲಿ ಸತ್ಯವಿತ್ತು ಅನ್ನಿಸಲ್ವಾ?. ಕೈ ತುಂಬಾ ಹಣ ಮಾಡಬಹುದಿತ್ತು...ಅಮೇರಿಕದಲ್ಲಿದವ್ನು ಊರು ಕಡೆ ಬಂದು ಎಲ್ಲಾನು ಹಾಳು ಮಾಡ್ಕೊಂಡ್ರು ಎಂದು ಮೂದಲಿಸುವ ಹೆಂಡತಿಗೆ ಗಂಡನ patriotic-self comfort ಹುಚ್ಚು ಅನ್ನಿಸುತ್ತೆ...ಆದರೆ ಆ ಹುಚ್ಚಿನಲ್ಲಿ ಸತ್ಯ ಇಲ್ವಾ?. ಅಪ್ಪ-ಅಮ್ಮ ಎಷ್ಟೇ ಬೊಬ್ಬೆ ಹೊಡೆದರೂ, ಶಾರುಕ್ ಖಾನ್ ನಡೆ-ನುಡಿ ಅನುಸರಿಸುವ ಹುಡುಗನನ್ನು ಕಂಡಾಗ ಹುಚ್ಚು ಎನ್ನಿಸಿದರೂ, ಸತ್ಯವೆನಿಸಿದ ಒಂದು devotion ಇದೆ ಅನ್ನಿಸಲ್ವಾ?........ಹೀಗೆ ಎಷ್ಟೋ ಹುಚ್ಚು ವರ್ತನೆಗಳ ನಡುವೆ ಅಳಿಸಲಾಗದ, ಅರ್ಥವಾಗದ ಸತ್ಯವಿದೆ ಅನ್ನಿಸುತ್ತೆ. ಅಷ್ಟಕ್ಕೂ ಸಮಯ ಸಿಕ್ಕಾಗಲೆಲ್ಲಾ ಮನಸಿಗೆ ಬಂದದ್ದನ್ನು ಬರೆಯುವ ನನ್ನ ಹುಚ್ಚು ಬಾವನೆಗಳ ನಡುವೆ ನನಗೆಲ್ಲೋ ಸಂತ್ರಪ್ತಿಯ ಸತ್ಯವಿದೆ....ಒಂಟಿತನದ ಆಸರೆಯಿದೆ!. ಕೊನೆಗೊಂದು ಮಾತು,......there is sure truth behind my madness!!.

dinu :)