ಎಂದಿನಂತೆ ಇವತ್ತು ಅದೇ ಬೆಳಗು.......ಸ್ವಲ್ಪ ತಡವಾಗಿ ಎದ್ದೆನೇನೋ ಎಂಬ ಆತಂಕ, ಬೇಸರ :(...ಬಹುಶ: ಬೇಗ ಎದ್ದಿದ್ದರೆ ಛೇ ಇನ್ನು ಸ್ವಲ್ಪ ಮಲಗಬಹುದಿತ್ತು ಅನ್ನಿಸುತ್ತಿತ್ತೇನೋ ನಿನ್ನೇ ಮನಸಿಗೆ ಬಂದಂತೆ !....E ಬದುಕು , ಅದರ ಬಗೆಗಿನ ಯೋಚನೆಗಳು ಕೆಲವೊಮ್ಮೇ ವಿಚಿತ್ರ ಅನ್ನಿಸುವಷ್ಟು ವ್ಯಾಪಕ ರೂಪ ಕಂಡುಕೊಳ್ಳುತ್ತೆ....ಎಷ್ಟೋ ಬಾರಿ ಅರ್ಥವಾಗದಷ್ಟು! ಮನೆಯಿಂದ ಎಷ್ಟೋ ಸಾವಿರ ಮೈಲಿ ದೂರದಲ್ಲಿ ಕುಳಿತಾಗ ಮತ್ತೆ ಮತ್ತೆ ಕಾಡುವ ಮನೆ ಕಡೆಯ ನೆನಪು. ಕಣ್ಣು ಬಿಟ್ಟಿದ್ದು ಕಣ್ಮುಚ್ಚಿ ಓಡಾಡಿದ ಗದ್ದೆಯ ಬೈಲಿನ ಅಂಚುಗಳು, ಊರೇ ಅರಿಯದಿದ್ದರೂ ದೇಶದ ಬಗೆಗೆ ತಿಳಿದುಕೊಳ್ಳುವ ತವಕದಲ್ಲಿ ಪೇಟೆಗೆ ಓಡಿಬಂದು ಓದುತ್ತಿದ್ದ ದಿನ ಪತ್ರಿಕೆ......ಇವತ್ತು ಮಾಯಾಪೆಟ್ಟಿಗೆ ಮುಂದೆ ಕುಳಿತಾಗ ಗಣಿಕೆಗೆ ಸಿಗದಷ್ಟು ವಿಷಯಾದರಿತ ಕೊಂಡಿಗಳಿದ್ದರೂ ಒಮ್ಮೊಮ್ಮೆ ಯಾವುದೂ ಬೇಡ ಎನ್ನುವ ನಿರ್ಲಿಪ್ತತೆ !. ಈ ಹುಚ್ಚು ಬದುಕಿನ ನಿರೀಕ್ಷೆಗಳಂದ್ರೆ ಇಷ್ಟೇನಾ? ...
ಇದ್ದಾಗ ಅನುಬವಿಸುವ ಪ್ರಜ್ನೆ ಮೂಡದೆ, ಇಲ್ಲದಿದ್ದಾಗ ಛೇ ಅನುಬವಿಸಬೇಕಿತ್ತು ಅಂದುಕೊಳ್ಳುವ, ಮತ್ತೇ ಮತ್ತೇ ಬೇಸರಿಸುವ ಮನಸ್ಸು.....ಹೆಂಚು ಮನೆಯ ಶಾಖದಡಿಯಲ್ಲಿ, ಅಷ್ಟೇನು ಬೆಳಕಿಲ್ಲದ ಅರೆ ಕತ್ತಲ ಕೋಣಿಯಲ್ಲಿ, ಆಕಾಶವೇ ಮನೆಯೆಂಬಂತಿದ್ದ ಬಯಲು ಗದ್ದೆಯಲ್ಲಿ, ಪರ್ವತದ ತುದಿಯಲ್ಲಿದ್ದಂತೆ ಭಾಸವಾಗುತ್ತಿದ್ದ ಉಪ್ಪರಿಗೆಯ ಕಿಟಕಿಯಲ್ಲಿ, ನೆರಳು ನೀಡಲು ಕಂಜೂಸು ಮಾಡುತ್ತಿದ್ದ ಹುಣಸೆ ಮರದಡಿಯಲ್ಲಿ, ಶಾಲೆಗೆ ಹೋಗುವಾಗ ಸಿಗುತ್ತಿದ್ದ ಸಣ್ಣ ನಾಲೆಯ ಸಂಕದಲ್ಲಿ, ಕಲ್ಲಿಟ್ಟು ನೋಯಿಸುತ್ತಿದ್ದ ಮಾವಿನ ಮರದ ಕೊಂಬೆಯಲ್ಲಿ, 50 ಪೈಸೆ ಕಡಲೆ ತಿನ್ನುತ್ತಿದ್ದ ಅಂಗಡಿಯ ಜಗುಲಿಯಲ್ಲಿ, ಬಸ್ ಹತ್ತಲು ಕಾಯುತ್ತಿದ್ದ ಬಸ್ ನಿಲ್ದಾಣದ ಕಟ್ಟೆಯಲ್ಲಿ, ಮನಸು ಬಂದಾಗ ಜೋಲು ಹಾಕುತಿದ್ದ ಬೊರ್ವೆಲ್ ಬಾಲದಲ್ಲಿ (handle)....... ಮನಸ ಅಂಚನ್ನು ಹಾದು ಹೋಗುತ್ತಿದ್ದ, ಒಮ್ಮೊಮ್ಮೇ ಮನಸಲ್ಲೇ ಉಳಿದು ಕಾಡುತ್ತಿದ್ದ ಅದೆಷ್ಟೋ ಕನಸುಗಳು ಇಂದಿನ ನಿರೀಕ್ಷೆಗಳಾ ? ಅನ್ನುವಷ್ಟು ಪ್ರಶ್ನೆ ಮೂಡಿಸುತ್ತೆ...ಅಷ್ಟಕ್ಕೂ ಕನಸು ಕಾಣುತ್ತಿದ್ದ ಅದೇ ಮನಸ್ಸು ಇಂದು, ಕಣ್ಣು ಕುಕ್ಕುವ ಪ್ರಪಂಚದ ಒಂದು ಪ್ರಖ್ಯಾತ ನಗರದ ಉನ್ನತ ಮಟ್ಟದ ಆಸ್ಪತ್ರೆಯ ಪ್ರಯೋಗಾಲಯದಲ್ಲಿದ್ದಾಗ, air cooler ಅಡಿಯಲ್ಲಿ ತಂಪಾಗಿ ಮಲಗುವ ಸಂತ್ರಪ್ತ ಮನೆಯಲ್ಲಿ, ಬಣ್ಣಬಣ್ಣದ ಹುಡುಗಿಯರ ಮದ್ಯೆ ಕ್ರತಕ ಕಾರಂಜಿಗಳ ಮುಸುಕಲ್ಲಿ, ಗುರಿ ಮುಟ್ಟುವ ತವಕದಲ್ಲಿ ಒಂದೇ ಸವನೆ ಓಡಾಡುವ ಮೆಟ್ರೋ ರೈಲುಗಳ ನಿಲ್ದಾಣದ ಬೆಂಚಿನಲ್ಲಿ, ಬೇಡವೆನಿಸಿದರೂ ಕೇಳಲೇ ಬೇಕೆಂಬಂತೆ ಕಿವಿಗೆ ತಟ್ಟುವ ಪಾಶ್ಚಾತ್ಯ ಸಂಗೀತದ ನಡುವೆ, ಇತಿಹಾಸದ ಪುನರಾವರ್ತನೆ ಆದಂತೆ ಭಾಸವಾಗುವ ಮಿನಿ ಉಡುಗೆ ಸಂಸ್ಕ್ತತಿಯ ಬಿಕಿನಿ ಸನ್ನಿವೇಶದ high heel ಪರಿಸರದಲ್ಲಿ, ಏನು ಬೇಡವೆಂಬಂತೆ ಕಾಡುವ ಸ್ತಿತಿ ಕಂಡಾಗ, ಅನುಬವಿಸುವಾಗ ಮತ್ತದುವೆ ಪಶ್ನೆ.......ನಿರೀಕ್ಷೆಗಳಂದ್ರೆ ಇಷ್ಟೇನಾ?
ಬಹುಷ: ಕನಸುಗಳು ತಮ್ಮ ವ್ಯಾಪ್ತಿಯನ್ನ ಕಂಡುಕೊಳ್ಳುವಂತದ್ದು ಅನಿವಾರ್ಯತೆಯ ಅಂಚಿನಲ್ಲಿ, ದೌರ್ಬಲ್ಯದ ಮೆಟ್ಟಿಲಲ್ಲಿ !...ಅದಕ್ಕೇ ಇರಬೇಕು...ಇದ್ದಾಗ ಬೇಕೆನಿಸದೆ ಇಲ್ಲದಿದ್ದಾಗ ಮತ್ತೆ ಮತ್ತೆ ಬೇಕು ಅನ್ನಿಸುವಂತದ್ದು.... ಮನೆ ಮದುವೆಯಲ್ಲಿ ಹಸಿವೆ ಇಲ್ಲದಿರುವಂತೆ !. ಹಾಗಾಗಿ ಇಷ್ಟೆಲ್ಲಾ ಜಿಜ್ನಾಸೆಗಳ ನಡುವಲ್ಲಿ ಒಂದಂತು ಸ್ಪಷ್ಟ..... ನಿರೀಕ್ಷೆಗಳು...ನಿನ್ನೆ ಮತ್ತು ನಾಳೆ.... ಇತಿಹಾಸ ಹಾಗು ಭವಿಷ್ಯ..... ನೆನಪು ಮತ್ತು ಕನಸು.......ಹೀಗಾಗಿ ಇಂದಿನೊಳು ನಿರೀಕ್ಷೆಗಳನ್ನ ಬೆರೆಸಿ ಗೊಂದಲ ನಿರ್ಮಾಣ ಮಾಡಿಕೊಳ್ಳುವುದಕ್ಕಿಂತ ನಿರೀಕ್ಷೆಗಳಂದ್ರೆ ಇಷ್ಟೇನಾ ಅಂದುಕೊಳ್ಳುವಂತದ್ದು ಒಳಿತು ಅನ್ಸುತ್ತೆ ಅಲ್ವಾ??