ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Sunday, March 14, 2010

ಅವನು ಕುಣಿಯುತ್ತಿರಬೇಕಾದರೆ, ಕೊಳಲು ಅಳುತ್ತಿತ್ತು!


(ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಖಾಯಂ ಕಾಲಂ ಬರೆಯುತ್ತಿದ್ದ ಸಂದರ್ಭದಲ್ಲಿ ಬರೆದಿದ್ದ ಒಂದು ಬರಹ.....ಕಾಲಂ ಶೀರ್ಷಿಕೆ : ಸಿಂಗಲ್ ವಿಷ್ಯ)

ಅದು ಹೊಸ ಮನೆಯ ಪ್ರವೇಶಕ್ಕಾಗಿ ಕಾದಿದ್ದ ರಾತ್ರಿ......
ಕತ್ತಲಿಗೆ ಸವಾಲಾಗುವಂತಿದ್ದ ಬೆಳಕು, ಬೇರೆ ಬೇರೆ ಕಡೆಗಳಲ್ಲಿ ವ್ಯತ್ಯಾಸ ಗುರುತಿಸುವಂತಿದ್ದ ಕಾರ್ಯಗಳು, ನೂರಕ್ಕೂ ಅಧಿಕ ಜನ. ಆ ಸಂದರ್ಭದ ಖುಷಿಯಲ್ಲಿ ಯಾವುದೋ ಅವ್ಯಕ್ತ ಅನುಭವ ಅನುಭವಿಸುತ್ತಿರುವವರ ಒಂದು ಗುಂಪು. ಆ ರಾತ್ರಿ ನಾನು ಅಲ್ಲಿದ್ದ ಹೆಚ್ಚಿನ ಹೊತ್ತು ಆ ವ್ಯಕ್ತಿ ಕುಣಿಯುತ್ತಲೇ ಇದ್ದ!. ಅದು ಅವನ ಕಲ್ಪನೆ.....ಒಂಟಿ ಕಾಲು ಮೇಲೆತ್ತಿದರೆ ಇನ್ನೊಂದರಲ್ಲಿ ನಿಲ್ಲುವ ಸ್ಥಿತಿಯಲ್ಲಿ ಅವನಿರಲಿಲ್ಲ. ಬಾಯಿ ತೊದಲುತ್ತಿತ್ತು. ಅವನದೇ ಸಿಳ್ಳೆ, ತೊದಲುವ ಯಾವ್ಯಾವುದೋ ಪ್ರೇರಕ ಮಾತುಗಳು, ಜೊತೆಗೆ ಹಿಮ್ಮೇಳ.....ಹೀಗೆ ಅವನದೇ ಆದ ವಾತಾವರಣ. ಕೈಯಲ್ಲೊಂದೊ ಕೊಳಲು...ಸುತ್ತ ಮುತ್ತ ಪೈಬರ್ ಕುರ್ಚಿ ಬಳಸಿ ಕುಳಿತ್ತಿದ್ದ ಜನ....ಒಮ್ಮೊಮ್ಮೆ ಬಳುಕುತ್ತಾ ನಮಸ್ಕಾರ ಮಾಡುತ್ತಿದ್ದ. ತನ್ನ ದೇಹದ ನಿಯಂತ್ರಣವಿಲ್ಲದ ಸ್ಥಿತಿಯಲ್ಲೂ ದೇಹದ ಮೇಲ್ಭಾಗ ಕುಣಿಸುತ್ತಿದ್ದ....ಜೊತೆಗೆ ಕಾಲು ಸಹ ಕುಣಿಯುತ್ತಿದೆ ಎಂಬ ಭ್ರಮೆಯಲ್ಲಿದ್ದ!.....

ನನಗಾಗ ಪ್ರಶ್ನೆಯಾದದ್ದು ಅವನ ಸ್ಥಿತಿಯನ್ನು ನೋಡಿ ಅದರಲ್ಲೇ ಸಂತೋಷ ಪಡುವ ಜನರ ಮನಸ್ಥಿತಿ. ಅವನನ್ನು ಆ ಸ್ಥಿತಿಗೆ ತಳ್ಳಿದ ವಸ್ತುವನ್ನೇ ಮತ್ತೆ ಮತ್ತೆ ನೀಡಿ ಕುಣಿಯಲು encouragement ಬೇರೆ! ಅವನ ಕುಣಿತಕ್ಕೆ, ಅವನ ಹಿಮ್ಮೇಳಕ್ಕೆ, ಅವನ ಕೊಳಲಿನಿಂದ ಹೊರಡುವ ಸ್ವರಕ್ಕೆ....ಅದರದ್ದೇ ಆದ ಲಯವಿದೆ. ಅವನು ಸರಿಯಾದ ರೀತಿಯಲ್ಲಿ ಕುಣಿದರೆ ಅದಕ್ಕೆ ಅದರದ್ದೆ ಆದ ಸೌಂದರ್ಯವಿದೆ. ದೇಹದ ಹಿಡಿತವಿಲ್ಲದಿದ್ದರೂ ಕೊಳಲಿನ ದನಿಗೆ ಹಿಡಿತವಿದೆ. ಆದರೆ......ಸ್ವರವನ್ನು, ಪ್ರತಿಭೆಯನ್ನು, ಸಂಪ್ರದಾಯವನ್ನು ಜನರು ಬಳಸಿಕೊಳ್ಳುವ ರೀತಿ, ಅದಕ್ಕೆ ಒದ್ದಿಕೊಂಡಿರುವ ಅವನ ಮನಸ್ಸು, ಕಲೆಗಾಗಿ ಮದ್ಯವನ್ನು ಮಾತ್ರ ಕೇಳುವ ಮನ:ಸ್ಥಿತಿ ಬೆಳೆಸಿಕೊಂಡ ಅವನ ಸಂಕುಚಿತ ಭಾವ...ಎಲ್ಲವೂ ನನಗೆ ಈ ಶತಮಾನದ ಸವಾಲುಗಳೆನಿಸುವಷ್ಟು ದೊಡ್ಡದಾಗಿ ಕಂಡವು. ಆದರೆ ಸತ್ಯ ಕೊಳಲಿಗೆ ಮಾತ್ರ ತಿಳಿದಿತ್ತು!. ಅವನು ಕುಣಿಯುವಾಗ ಕೊಳಲು ಅಳುತ್ತಿತ್ತು....!

ಅದೇನೆ ಇರಲಿ....ಕೆಲವು ಸಂಪ್ರದಾಯವನ್ನು ಬದುಕಿನ ಗಳಿಕೆಗಾಗಿ ಬಳಸಿಕೊಳ್ಳುತ್ತಿರುವ ಒಂದು ವರ್ಗ ಇನ್ನೂ ಆ ಹಳೆಯ ಮಾಮೂಲು ಮದ್ಯದ ಗುಂಗಿನಿಂದ ಹೊರಬರದಿರುವಂತದ್ದು ಅವರನ್ನು ಹೊಸ ಬೆಳವಣಿಗೆಯಿಂದ ದೂರವಿಟ್ಟಿದೆ. ಇದಕ್ಕೆ ಅನ್ಯರನ್ನು ದೂರುವ ಹಾಗಿಲ್ಲ. ಅವರಲ್ಲಿ ಕೇಳಿದರೂ, ಮಧ್ಯ ಕುಡಿದರಷ್ಟೆ ಕುಣಿಯಲು ಹುಮ್ಮಸ್ಸು ಬರುತ್ತೆ ಎನ್ನುವ ಉತ್ತರ ಸಿಗುತ್ತೆ. ಆದರೂ...ವಾಸ್ತವವಾಗಿ ವಿಚಾರಿಸಬೇಕಾದ ಅಂಶವೆಂದರೆ, ಇನ್ನೊಬ್ಬರ ದೌರ್ಬಲ್ಯಗಳನ್ನು ಮನರಂಜನೆಯ ಮೂಲವಾಗಿ ಬಳಸಿಕೊಳ್ಳುವ ಜನರ ಮನ:ಸ್ಥಿತಿ. ಅನ್ಯರು ತೊಂದರೆಗೊಳಗಾದಾಗ ಪಡುವ ತೊಳಲಾಟ, ಅನಿರೀಕ್ಷಿತ ಕೆಲವೊಂದು ವಿಚಾರಗಳಿಂದ ಮಾನಸಿಕ ಹಿಡಿತ ಕಳೆದುಕೊಳ್ಳುವ ಸ್ಥಿತಿಗಳನ್ನು ನೋಡುತ್ತಾ ನಗುವ ಜನರನ್ನು ಕಂಡಾಗ, ಸಂತಸ ಪಡಲು ಇದು ಒಂದು ಮಾರ್ಗವೇ? ಎನಿಸದಿರದು. ಯಾವ ನೈತಿಕ ನೆಲೆಯ ಸಂಪ್ರದಾಯವಿದು? ಅನ್ನಿಸದಿರದು. ಇದು ನಮ್ಮದೇ ಪ್ರಶ್ನೆ....ಉತ್ತರಿಸಬೇಕಾದವರೂ ನಾವೇ...! ಹಾದಿ ತಪ್ಪಿ, ಬದುಕಿನ ಬಗೆಗೆ ಸ್ಪಷ್ಟ ಕಲ್ಪನೆಯಿಲ್ಲದೆ, ತಾವು ಅನುಭವಿಸುತ್ತಿರುವ ಅಮಲು ಸುಖವೇ ಅಂತಿಮ ಎಂದರಿತ ಜನತೆಗೆ ಬುದ್ದಿ ಹೇಳಬೇಕಾದ ಅಗತ್ಯತೆ ನಮ್ಮ ಮುಂದಿದೆ. ಕುಡಿದ ಅಮಲಿನಲ್ಲಿ ಎಲ್ಲವನ್ನು ಮಾಡುತ್ತಾರೆಂಬ ಬರವಸೆಯಲ್ಲಿ, ಅದನ್ನೇ ಮಜಾ ಮಾಡುವ ಮಾರ್ಗವಾಗಿ ಬಳಸಿಕೊಳ್ಳುವುದನ್ನು atleast for humanity ಬಿಡುವಂತವರಾಗಬೇಕು. ನಮ್ಮ ದೌರ್ಬಲ್ಯಗಳನ್ನು ನಾವೇ ವ್ಯಂಗ್ಯದ ಮೂಲವಾಗಿಸಿಕೊಂಡಲ್ಲಿ ಮನುಷ್ಯ ಅನ್ನಿಸಿಕೊಳ್ಳುವುದಾದರೂ ಹೇಗೆ?. ಹೀಗಾಗಿ ಯಾವುದೋ ಒಂದು ಕಲ್ಪನೆಯಲ್ಲಿ ಎಡವಿದ ವರ್ಗವನ್ನು ಬುದ್ದಿ ಹೇಳಿ ಎಚ್ಚರಿಸಬೇಕಾದ್ದು, ಕಡೇ ಪಕ್ಷ ಪ್ರಯತ್ನಿಸಬೇಕಾದ್ದು ಮನುಷ್ಯತ್ವ ಅನ್ನಿಸೊಲ್ವಾ ಹೇಳಿ?...
ನಿಮ್ಮ,
ದಿನು

(ಚಿತ್ರ ಮೂಲ: ಗೂಗಲ್)

ಓ ಬೆಳಕೆ...


(ವಾರಪತ್ರಿಕೆ "ತರಂಗ"ದಲ್ಲಿ ಪ್ರಕಟಗೊಂಡಿದ್ದ ಕವನ.....)


ಅರ್ಧ ಗೋಡೆಯ ಮೇಲೆ

ಹಚ್ಚಿಟ್ಟ ಕಿರುದೀಪ

ಗಾಳಿಯೊಂದಿಗೆ ಸರಸ

ಎಣ್ಣಿಯೊಂದಿಗೆ ಬೆರಕೆ

ಯಾವ ದೇವರಿತ್ತ ಹರಕೆ?

ಬಿರುಗಾಳಿ ಬೇಕೇನು

ಕತ್ತಲ ಪೊರೆ ಬರಲು?

ಹಚ್ಚಿಟ್ಟ ಬೆಳಕಲ್ಲಿ ಅಸ್ಥಿತ್ವದ

ಹೋರಾಟ!

ಯಾಕಾಗಿ ಈ ಅಸ್ಥಿತ್ವ?

ಕಿರುಗಾಳಿ ಬಿರುಗಾಳಿ

ಏನಿರಲಿ ಎಂತಿರಲಿ

ಎಣ್ಣಿಯ ಬದುಕಿನರ್ಥದೀಪ ತಾನೆ?

ಸಾಯಬಹುದಹುದು ಬೆಳಕು

ನಿರ್ಮಿಸುವವರಾದು ಬದುಕು?

ಕಳೆದ ರಾತ್ರಿಯ ನೆನಪೇಕೆ

ಅಳಿದುಳಿದ ಹಗಲಿಗರ್ಥವಿಲ್ಲದ

ಮೇಲೆ!! ಹಾಂ

ಪ್ರಜ್ವಲಿಸು, ಎಣ್ಣಿಗರ್ಥವ ನೀಡು


ನಿಮ್ಮ

ದಿನು
(ಚಿತ್ರ ಮೂಲ: ಅಂತರ್ಜಾಲ)

Thursday, March 11, 2010

ಮರೆತು ಬಿಟ್ಟ ಸತ್ಯವನ್ನು ಹುಡುಕ ಹೊರಟು......?


(ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಖಾಯಂ ಕಾಲಂ ಬರೆಯುತ್ತಿದ್ದ ಸಂದರ್ಭದಲ್ಲಿ ಬರೆದಿದ್ದ ಒಂದು ಬರಹ.....ಕಾಲಂ ಶೀರ್ಷಿಕೆ : ಸಿಂಗಲ್ ವಿಷ್ಯ)
ದಿನಾಲೂ ಬದುಕಿನ ಕನ್ನಡಿ ಮುಂದೆ ನಿಂತಾಗಲೆಲ್ಲಾ ಮತ್ತದುವೇ ಪ್ರತಿಬಿಂಬ ನಮ್ಮನ್ನು ಅಣಕಿಸುತ್ತೆ. ಹಳೆಯ ನೆನಪುಗಳೇ ಮತ್ಯ್ಯಾಕೆ ಕಾಡುತ್ತವೆ ಎಂಬ ಪ್ರಶ್ನೆ ಪ್ರತಿದಿನವೂ ಕಾಡುತ್ತದೆಯಾದರೂ ಉತ್ತರ ಸಿಗೊಲ್ಲ. ಎಷ್ಟೋ ಅಗೋಚರ ಎಂಬಂತಿರುವ ಬದಲಾವಣಿ. ಮೂಲ ಅಸ್ಥಿಪಂಜರ ಮಾತ್ರ ಅದುವೇ. ಹೊರಗೆಲ್ಲ ಬಗೆ ಬಗೆಯ ಹೊದಿಕೆಗಳು. ಬೆಳಿಗ್ಗೆ ಎದ್ದು ಕಣ್ತೆರೆದ ಗಳಿಗೆಯಿಂದಲೂ ಹುಡುಕುತ್ತೇವೆ. ಅದೇ ರಾತ್ರಿ ಬಂದಾಗ ನಾಳೆ.....ಗಾಗಿ ಮುಂದೂಡಿ ಕಣ್ಮುಚ್ಚಿ ಮಲಗುತ್ತೇವೆ. ಅದುವೇ ಸತ್ಯವನ್ನು......

ಮರೆತು ಬಿಟ್ಟ ಸತ್ಯಕ್ಕಾಗಿ ಪ್ರತಿ ದಿನವೂ ಒಂದು ಗಳಿಗೆಯನ್ನಾದರೂ ವ್ಯಯಿಸಿಯೇ ವ್ಯಯಿಸುತ್ತೇವೆ. ಪ್ರತಿ ಬಾರಿ ವ್ಯಯಿಸಿದಾಗಲೂ waste ಅನ್ನಿಸುವ ಬದಲು ನಾಳೆಗಾದರೂ ಉತ್ತರ ಸಿಗುತ್ತೆ ಅನ್ನುವ ಆಶಾಭಾವ ತಾಳುತ್ತೇವೆ. ಆಗೆಲ್ಲಾ ನೆನಪಾಗುವಂತದ್ದು, ಛೀ! ನೀನು ಯಾಕಾದ್ರೂ ಹುಟ್ಟಿದ್ದಿ ಎಂಬ ಅಮ್ಮನ ಮೂದಲಿಕೆ, ನೆನಗೆ ನನ್ನ ಭಾವನೆಗಳೇ ಅರ್ಥವಾಗೊಲ್ಲ ನೀನು light ಕಂಬ ಎಂಬ ಸಂಗಾತಿಯ ಗೋಗೆರತ, ನಿನಗೆ sentiment ಅನ್ನೋದೇ ಇಲ್ಲ ಎನ್ನುವ ಸ್ನೇಹಿತರ ಮಾತು, ನೀನು sensitive ಆಗಿದ್ದು ಹೆಚ್ಚಾಯ್ತು ಎನ್ನುವ ಹತ್ತಿರದವರ ಬುದ್ದಿವಾದ, you should concentrate on your studies ಎಂಬ ಗುರುಗಳ ಗಂಭೀರ ಮಾತು, ಕೇವಲ ಕಡ್ಡಿ, ಪೆನ್ನು, ಪೆನ್ಸಿಲಿಗಾಗಿ ಜಗಳವಾಡುತ್ತಿದ್ದ ಗಳಿಗೆಗಳು........ಹೀಗೆ ಯಾವುದೋ ಒಂದು ಸ್ಥಿತಿಯತ್ತ ಮನಸು ವಾಲುತ್ತೆ. ಆಗ ನಾವ್ಯಕೆ ಎಲ್ಲರೂ ಆಗೊಲ್ಲ ಎನ್ನುವ ಮೂರ್ಖ ಪ್ರಶ್ನೆ ಕಾಡುತ್ತೆ. ಯಕಶ್ಚಿತ್ ದೇಹದಲ್ಲಿರುವ ಐರು ಬೆರಳುಗಳೇ ಸರಿಯಿಲ್ಲದಿರುವಾಗ ಯಾಕಾದ್ರೂ ಇಷ್ಟು ದೊಡ್ಡ ಯೋಚನೆ ಮಾಡುತ್ತೇವೆ ಅನ್ನಿಸುತ್ತೆ. ಆದರೂ ನಾವ್ಯಕೆ ಒಮ್ಮೆಲೇ ಭಾವನೆಗಳಲ್ಲಾದರೂ ಪ್ರೈಮರಿ ಶಾಲೆ ಮೇಷ್ಟ್ರು, ಎಲ್ಲರಿಗೊಪ್ಪುವ ಸ್ನೇಹಿತ, ಸಂಗಾತಿಗೊಪ್ಪುವ ಪ್ರೀಯತಮ, ಗುರುಗಳಿಗೊಪ್ಪುವ ವಿದ್ಯಾರ್ಥಿ, ಸಮಾಜಕ್ಕೊಪ್ಪುವ ವ್ಯಕ್ತಿಯಾಗಿ ಬಿಡೊಲ್ಲ ಅನ್ನಿಸುತ್ತೆ. ಇದು ಅಸಾದ್ಯವಲ್ಲ!!. ನಮ್ಮ ಭಾವನೆಗಳಿಗೋಸ್ಕರ ನಾವು ಬದುಕುವುದನ್ನು ಬಿಟ್ಟು ಬಿಡುವಂತವರಾಗಬೇಕು. Some what flexible ಎಂಬಂತಹ ಬದುಕು ಇದ್ದಾಗ ಎಲ್ಲವೂ ಒಮ್ಮೆಲೆ ಆಗೋಕೆ ಸಾಧ್ಯ!.

ಹೀಗಾಗಿ ಬದುಕು ಸುಂದರವಾಗಬೇಕಾದರೆ ನಮ್ಮ ನಡವಳಿಕೆಗಳ ಉತ್ಖನನ ದಿನವೂ ನಡೆಯಬೇಕು. ಆಗ ಸಿಗುವ ಅಮೂಲ್ಯ ವಸ್ತುಗಳನ್ನು ಭವಿಷ್ಯಕ್ಕಾಗಿ ಶೇಖರಿಸುವಂತವರಾಗಬೇಕು. ನಾವ್ಯಾವ ರೀತಿಯಲ್ಲಿ ಯೋಚಿಸಿದರೂ ಎಲ್ಲೋ ಒಂದೆಡೆ ನಮ್ಮದೇ ನೆಲೆಯಲ್ಲಿ ಯೋಚಿಸುತ್ತೇವಲ್ವಾ...ಅದು ದೊಡ್ಡ ತಪ್ಪು. ನಾವು ಏಕ ವ್ಯಕ್ತಿಗಳಾಗಿ ಒಂದೇ ಭಾವನೆಗಳಡಿ ಬಿದ್ದು ಬಿಡುತ್ತೇವಲ್ವಾ..ಅದುವೇ ನಮ್ಮನ್ನು ಎಲ್ಲರೂ ಆಗೋಕೆ ಬಿಡದಿರುವ ಅಂಶ. ಎಲ್ಲವನ್ನು ಮರೆತು ಬಿಟ್ಟವರಂತೆ, ಎಲ್ಲವನ್ನು ಪಡೆಯಬೇಕೆಂಬುವವರಂತೆ, ಎಲ್ಲದಕ್ಕೂ ಸ್ಪಂದಿಸುವವರಂತೆ, ಎಲ್ಲರನ್ನೂ ಮಾತನಾಡಿಸುವವರಂತೆ, ಎಲ್ಲ ಅಭಿಪ್ರಾಯಗಳನ್ನು ಮನ್ನಿಸುವಂತೆ ಒಂದೈದು ದಿನ ಇದ್ದು ಬಿಡೋಣ.... ಆಗ ನಾವು ನಾವಾಗಿರುವ ಬದಲು ಅವರಾಗಿ ಬಿಟ್ಟಿರುತ್ತೇವೆ ಅನ್ಸುತ್ತೆ ಅಲ್ವಾ?!. ಅದರಲ್ಲಿ ಏನೋ ಖುಷಿಯಿದೆ. ಸ್ವಂತಿಕೆಗೆ ಬೆಲೆಯಿದೆಯಾದರೂ ಅದರಲ್ಲಿ ಅಭಿಮಾನವಿದೆ. ಅಭಿಮಾನದ ಪ್ರಶ್ನೆ ಬಂದಾಗ ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಡುತ್ತೆ. ಆಗ ಒಂಥರಾ ನಿರ್ಬಂದ ಮನಸನ್ನು ತಟ್ಟುತ್ತೆ. ಆದರೆ ಎಲ್ಲವನ್ನು ಸ್ಥಿತಪ್ರಜ್ನರಾಗಿ ಸ್ವೀಕರಿಸಿದರೆ ....ಎಲ್ಲವೂ ಹೊಸದಾಗುವ ಬದಲು ಬರಿ ಬದಲಾವಣಿ ಅನ್ನಿಸುತ್ತೆ ಅಷ್ಟೆ. ಆದರೆ ಪ್ರತಿ ಬಾರಿ ನಾವು ಅವರಾಗಿ ಯೋಚಿಸುವಾಗ ಒಂದು ಮಾತು...ಅದು dependency ಆಗಬಾರದು. ಬದಲಾಗಿ ನಾವೇ ಸಂಪೂರ್ಣ ಅವರಾಗಿ ಬಿಡುವಂತದ್ದು. ಎಲ್ಲವನ್ನು, ಎಲ್ಲರನ್ನು ಒಂದೆಡೆ ಸೇರಿಸಿ ಬಿಡುತ್ತೆ. ಆಗ ನಾನು ಏಕಾಂಗಿ ಅನ್ನಿಸೋದೆ ಇಲ್ಲ. ಒಮ್ಮೆ ಒಂದಾಗಿದ್ದ ಸ್ಥಿತಿ ಇನ್ನೊಮ್ಮೆ ಇನ್ನೊಂದಾಗಿರುತ್ತೆ. ಒಂಥರಾ ಶೀಘ್ರ ಬದಲಾವಣಿ...!. ಹೀಗೆ ನಮ್ಮ ಬದಲಾವಣಿಗಳನ್ನು ನಾವೇ ನಿರ್ಮಿಸಿಕೊಂಡಾಗ ಪ್ರತಿಕ್ಷಣದ ಪರಿವರ್ತಕರು ನಾವೇ ಅನ್ನಿಸುವಷ್ಟು ನಿರಾಳತೆ. ಅಲ್ಲಿಯೂ ಅಸ್ಪಷ್ಟ ಕಾಡಿದರೆ ನಾವ್ಯಾಕೆ ಎಲ್ಲರ್ ಅಗೊಲ್ಲ ಎಂಬ ಪ್ರಶ್ನೆ ಬದಿಗಿಟ್ಟು ಕಡೇ ಪಕ್ಷ ನಾವು ನಾವಾಗಿಯಾದರೂ ಬದುಕುವಷ್ಟು ಸಹನಶೀಲರಾಗೋಣ ಅನ್ನಿಸುತ್ತೆ ಅಲ್ವಾ?...
nimma
dinu




Friday, January 22, 2010

ಕನಸಿನ ಹಾದಿಯ ತುಂಬೆಲ್ಲಾ ಒರಟು ಚಾದರ!


ಮುಂಜಾನೆಯ ಹೊಸ ಬೆಳಗಿನೊಂದಿಗೆ ಹೊಸ ಕನಸು ಜೀವ ತಳೆದರೆ, ಸಂಜೆಯ ನಸುಗತ್ತಲಲ್ಲಿ ಅಸ್ಥಿತ್ವ ಕಳೆದುಕೊಳ್ಳುವ ಸಂಭವಗಳೇ ಜಾಸ್ತಿ. ಪ್ರತಿ ಕ್ಷಣವೂ ಯೋಚನಾ ಲಹರಿಗೆ ಜಿಗಿಯಬಲ್ಲ ಸ್ವಾತಂತ್ರ್ಯವಿರುವ ಮನಸಿನ ಮಗ್ಗುಲಲ್ಲಿ ಕನಸು ಯಾಕೆ ಇಷ್ಟು ಬೇಗ absorb ಆಗುತ್ತೆ?. ಎಷ್ಟೋ ಬಾರಿ ಕನಸು absorb ಆಗಿರಬಹುದೋ ಅಥವಾ adsorb ಆಗಿರಬಹುದೋ ತಿಳಿಯದಷ್ಟು easy ಆಗಿ ಇತಿಹಾಸ ಸೇರುವ ಪರಿಯಾದರೂ ಏನು? ಕನಸು ಮತ್ತು ಕಲ್ಪನೆಗಿರುವ ವ್ಯತ್ಯಾಸವೇನು? ಕನಸು, ಬಯಕೆಗಳಿಗಿಂತ ಎಷ್ಟು ಬಿನ್ನ? ಕನಸೆಂದರೆ ಒಂದು ಬಗೆಯ ಬಯಕೆಯೇ? ಕನಸಿನ dimension ಎಷ್ಟು ವ್ಯಾಪಕತೆ ಹೊಂದಿರುತ್ತೆ? ಕನಸು ಕಾಣುವ ಮನಸಿಗಿರಬೇಕಾದ basic requirementsಗಳೇನು? ಹುಟ್ಟಿದ ಕನಸುಗಳೆಲ್ಲಾ ನನಸಾಗೋಕೆ ಸಾದ್ಯಾನಾ?......ಹೀಗೆ ಸಾಗಬಲ್ಲ ಹಲವಾರು ಪ್ರಶ್ನೆಗಳ ನಡುವೆ ಒಂದಂಶ ಸ್ಪಷ್ಟ. ಬದುಕಿಗೆ ಕನಸಿರಬೇಕು, ಆದರೆ ಬದುಕು ಕನಸಲ್ಲ!. ಯಾವಾಗ ನಾವು ಕನಸು (Dream) ಮತ್ತು ಕಲ್ಪನೆ (Imagination) ಗಳ ನಡುವೆ ವ್ಯತ್ಯಾಸವನ್ನು ಪರಿಗಣಿಸಲು ವಿಫಲರಾಗುತ್ತೇವೆಯೋ ಅಲ್ಲಿಯ ತನಕ ಸ್ಪಷ್ಟ ಕನಸುಗಳ ಹುಟ್ಟು ಕಷ್ಟ ಸಾದ್ಯ.

ಬದುಕಿನ ವ್ಯಾಪಕತೆಯಲ್ಲಿ ಉಳಿಯಬೇಕಾದ, ಅನುಭವದ ದ್ವಂದ್ವದಲ್ಲಿ ಅಸ್ಥಿತ್ವ ಕಾಪಾಡಿಕೊಳ್ಳಬೇಕಾದ, ಜಂಜಾಟದ ಝರಿಯಲ್ಲಿ ತನ್ನ ಪರಿಯನ್ನು ಬೆಳೆಸಿಕೊಳ್ಳಬೇಕಾದ ’Strong determination’ ಕನಸಿಗಿರಬೇಕು. ಕನಸು, ಬದುಕಿನ ಪ್ರತಿ ಪದರವನ್ನ, ನಡೆಯನ್ನ ವ್ಯಾಪಿಸಿದಾಗ ದಾರಿಯ ಒರಟುತನ ಹೆಚ್ಚಾಗುವ ಸಂಭವಗಳೇ ಹೆಚ್ಚು. ಕನಸಿನ ನನಸಿಗೆ ಎಲ್ಲೂ ಹೂವಿನ ಚಾದರವಿರುವ ಮಾರ್ಗ ಸಿಗದು. ವ್ಯವಸ್ಥೆಯ ವೈಪರಿತ್ಯ, ವೈಯಕ್ತಿಕ ಏರಿಳಿತ, ಸಾಮಾಜಿಕ ಅಸ್ಥಿರತೆ, ಭಾವನಾತ್ಮಕ ಗೊಂದಲ, distract ಮಾಡಬಲ್ಲ ಚಟುವಟಿಕೆಗಳು, ಗೊತ್ತೇ ಇಲ್ಲದಂತೆ ಹುಟ್ಟಿಕೊಳ್ಳಬಲ್ಲ ಘಟನೆಗಳು......ಕೊನೆಗೆ so called destiny effect..ಇವೆಲ್ಲವುಗಳನ್ನೂ ದಾಟಿ ಸಾಗಬಲ್ಲ, ಸಾಗಿ ಉಳಿಯಬಲ್ಲ ಕನಸಿಗೆ ಇವೆಲ್ಲಾ ದಾರಿಯ ತುಂಬಾ ಸಿಗುವ ಒರಟು ಚಾದರ.
ಚಿಕ್ಕವರಿದ್ದಾಗ ಇದ್ದ ಕನಸುಗಳು ಕಾಲನ ಕಬಳಿಕೆಯೊಂದಿಗೆ ಮಗ್ಗಲನ್ನು ಬದಲಿಸಿಕೊಳ್ಳಬಲ್ಲವು. ಸಮಯ ಕಳೆದಂತೆ ಶಿಥಿಲವಾಗಬಲ್ಲವು. ಅನುಭವದ ನೆಲೆಯಲ್ಲಿ ರೂಪ ಬದಲಿಸಿಕೊಳ್ಳವಲ್ಲವು. ನಾನು ಚಿಕ್ಕವನಿದ್ದಾಗ ಹುಟ್ಟಿದ್ದ ಕನಸುಗಳೆಲ್ಲವೂ ಈಗ ನನ್ನೊಳಗೆ ಉಳಿದಿಲ್ಲ. ಆಗಿದ್ದ ಹಲವು ಕನಸುಗಳಲ್ಲಿ ಈಗ ಉಳಿದದ್ದು ಕೆಲವೇ ಕೆಲವು. ಇದರೊಂದಿಗೆ ಹೊಸತಾಗಿ ಸೇರ್ಪಡೆಗೊಂಡ ಮತ್ತಷ್ಟು!. ಬಾಲ್ಯದ ಕೆಲವೊಂದು ಕನಸುಗಳು ಈಗಿನ ಕಲ್ಪನೆಗಳು!. ಕನಸು ಕೂಡ ಅಮರತ್ವ ಪಡೆದಿಲ್ಲ. ಅಮರತ್ವ ಪಡೆವ ಕನಸಿಗೆ ಗೆಲುವು ಬಲು ದೂರ. ವಾಸ್ತವದ ಕಲ್ಪನೆ ಕನಸಿನ ವ್ಯಾಪಕತೆಯನ್ನು ನಿರ್ಧರಿಸಬಲ್ಲುದು. ವಾಸ್ತವತೆಯನ್ನು ಮೀರಿದ ಕನಸು ಬದುಕಲ್ಲಿ ಒಂದೋ, ಎರಡೋ ಹುಟ್ಟಲು ಸಾದ್ಯ ಮತ್ತು ಕೆಲವರ ಬದುಕಿನಲ್ಲಿ ಘಟಿಸಲು ಸಾದ್ಯ. ಚಿಕ್ಕವನಿದ್ದಾಗ ಭಾರತದ ಪ್ರಧಾನಿಯಾಗಬೇಕೆಂಬ ಕನಸಿತ್ತು. ಕಾಲ ಕಳೆದಂತೆ ಅದು ಕಲ್ಪನೆಯಾಗಿ ಬದಲಾಗತೊಡಗಿತು!. ಇದು ನನಗೆ ಸಾದ್ಯವಿಲ್ಲವೆಂಬ ರಣಾತ್ಮಕತೆಯಿಂದಲ್ಲ...ಬದಲಾಗಿ ಅದು ನನ್ನ ಕನಸಾಗಲು suit ಅಲ್ಲ, ನನಗೆ ಅನ್ವಯ ಆಗೋದೆ ಇಲ್ಲ ಎನ್ನುವ ಮನಸಿನ ನಿರ್ಧಾರದ ಫಲ. ಎಷ್ಟೋ ಈ ಬಗೆಯ ವಿಚಾರಗಳು ಪ್ರತಿ ಮನಸಿನ ಒಳಗೆ ಹೋರಾಟ ಮಾಡುತ್ತಿರುತ್ತವೆ. ಹಾಗಾಗಿ ವಾಸ್ತವದ ಅರಿವು ಸಲೀಸಾಗಿ ಕನಸಿನ ಆಯುಷ್ಯ ನಿರ್ಧರಿಸಬಲ್ಲುದು.


ಕನಸಿನ output ನಿರ್ಧರಿಸಬಲ್ಲ ಮುಖ್ಯ ಅಂಶಗಳೆಂದರೆ, Planning, Application and Management. ಕನಸನ್ನು ಹುಟ್ಟಿಸುನ ತಾಕತ್ತು ಮನಸ್ಸಿಗಿರುತ್ತವೆಯಾದರೂ, ಆ ಬಗೆಗೆ ಸ್ಪಷ್ಟ ಚೌಕಟ್ಟು ಕೊಡಬಲ್ಲ ಶಕ್ತಿ ಇರುವಂತದ್ದು ಕಲ್ಪನೆಗೆ ಮಾತ್ರ. ಹಾಗಂತ ಎಲ್ಲ ಕಲ್ಪನೆಗಳು ಕನಸಲ್ಲ!. ಆದರೆ ಪ್ರತಿ ಕನಸಿಗೂ ಒಂದು ಕಲ್ಪನೆಯಿದೆ. ಹೀಗಾಗಿ ಪ್ರತಿ ಕನಸಿನ ಸ್ಪಷ್ಟತೆಯನ್ನು ಲೆಕ್ಕಾಚಾರ ಮಾಡಿ, ಅದರ ಯಶಸ್ಸಿಗೆ plan ಮಾಡುವ ಕಾಯಕ ಕನಸಿನ ಹುಟ್ಟಿನೊಂದಿಗೆ ಆರಂಭಗೊಳ್ಳಬೇಕು. ಕಲ್ಪಿಸಿದ ಹಾಗೂ ಕೈಗೊಂಡ ನಿರ್ದಾರಗಳನ್ನು sincere ಆಗಿ apply ಮಾಡಬಲ್ಲ smartness ಕನಸಿನ ಯಶಸ್ಸನ್ನು ಮುಖ್ಯವಾಗಿ ನಿರ್ಧರಿಸುತ್ತೆ. ಇನ್ನು ನಡು ದಾರಿಯಲ್ಲಿ ಬರುವ ಏರಿಳಿತಗಳ ನಡುವೆ ನಮ್ಮ ಕನಸನ್ನು manage ಮಾಡಬೇಕಾದ್ದು ಅನಿವಾರ್ಯ ಹಾಗೂ ಅವಶ್ಯಕತೆಯೂ ಹೌದು. ಕಾಲದೊಂದಿಗೆ ಕೆಲವೊಮ್ಮೆ ನಮ್ಮ ಕನಸಿನ ಮಜಲುಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಸಹಜ. ಈ ರೀತಿಯ ಸನ್ನಿವೇಶಗಳಲ್ಲಿ ಬದುಕಿನ, ಸಮಾಜದ ಎದುರು bold ಆಗಬೇಕಾದ್ದು ಅಗತ್ಯ. ಹಾಗಂತ ಕನಸುಗಳ ದಾರಿಯ ತುಂಬೆಲ್ಲಾ ಜಯವೊಂದೇ ಲಭಿಸದು. ಲೆಕ್ಕಾಚಾರ ಸುಲಭ ಸಾದ್ಯವಾಗದು. ಆ ತಿರುವಿನಲ್ಲಿ sacrification ಮತ್ತು consolation ಬಹು ಮುಖ್ಯ ಪಾತ್ರವಹಿಸುತ್ತೆ. ಅಂತೂ ಕನಸಿನ ಯಶಸ್ವಿ ಪಯಣದಲ್ಲಿ ನೂರಾರು ದಾರಿಗಳನ್ನು ಸವೆಸಬೇಕಾಗುತ್ತೆ.......ನೆನಪಿರಲಿ....ಕನಸು ಬೆಳ್ಳಿಗೆರೆಯಲ್ಲ....ಕೆತ್ತಿ ಬರೆಯಬೇಕಾದ ಶಿಲ್ಪಿಯ ಕಾಯಕ!.
ದಿನು

I witness biggest snowfall in Korea since 40 years!!!!

It was first working day of year 2010......whole seoul beautifully blanketed by white snow....it was fun, it was amaging.....it was thrilling.....apart from it.. was really chilling!. The day which witness biggest snowfall in Korea since 40 years!


It caused traffic chaos, made life little difficult by delaying or canceling scores of flights. According to the Korea Meteorological Administration, the snow that began falling early in the morning piled up around the nation's central regions with more than 25.2 centimeters accumulating in Seoul, by next day. It was the heaviest in 41 years and second heaviest since the nation started observing snowfall back in 1937. Usually, sa a low pressure system from the West Sea approaches the nation, heavy snowfall starts. When the center of the system passes the southern part of Chungcheong Province, the central regions will see more snowfall. Despite increased numbers of buses and subway trains, citizens experienced inconveniences as public transportation operated behind schedule and was more crowded than usual. Major roads in Seoul were slippery and snow-covered, disrupting traffic.

Seoul City dispatched a total of 3,590 workers for clearing snowdrifts and poured 2,381 tons of calcium chloride on major roads. However, work in most locations was hampered by continuing heavy snowfall, coupled with cold wind. By following the weather forecast, an emergency system was worked from early in the morning. At the Gimpo International Airport, on the outskirts of Seoul, all 42 flights, including two international flights to Japan, were cancelled in the morning. It was the first time that the airport has cancelled all the flights since a heavy snowfall in 2001. However, no cancellations were reported at Incheon International Airport, except for some 30 delays due to de-icing work.
However personally, it was natural greatness with infinite reasons. I enjoyed playing in snow, spent some time outside withstanding heavy cold with my guide and labmates, took few snaps.......gon back to my child age...so jumping, shouting........But Im not sure..weather nature heard abt my outburst of happyness............:). Any how it was amaging being a child infront of nature........!

Wednesday, November 18, 2009

Seeing North Korea from by far..........!

Last week I had a trip with my friends, along with an American scholar to the Odusan Unification Observatory just north to Seoul. The observatory is located on a hill that is out in attention of the confluence of both the Imjim and Han Rivers that creates the border with North Korea. ( you can see the view below)

The observatory does provide excellent views of North Korea, but not the real North Korea!. At the opposite bank of the river we could see the collective farm apartments those are just fake buildings, but no one actually lives in! ( Fake Village). It was clear after seeing that landscape through telescope on the top of the observatory. I could not see any sign of life on the opposite bank of the river i.e North Korea. Eventhough it was around 7PM, there was no electric light, as all the buildings stands in dark!.

But green shedded hills of North Korea stands apart by considering the beauty!. it was so wonderful, even sunset was awesome. Besides North Korea, we could see the beautiful rural area of north side of South Korea. If we look at the south from the observatory the steep peaks of Korea’s most visited National Park, Bukhan Mountain is easily visible.




Except the great views, inside there is an intresting museum, displays everyday items, cloth designs of North Korea and North Korean Toys. But it was surprising to see the model of North Korean classroom and apartment, that highlights the power of JI Kim and blind faith of North Korean civiliens towards their king. After hearing so many stories, my heart feel sad about North korean people. So when I came back from observatory, even now my heart beats for them!. God grace them.........oh...finally forgot to say....it was minus 5 that evening. totally chilled....yet warmed inside by seeing wonderful location. After that we had a nice dinner (korean traditional) at my friend Angela house. ( Thanks to her for guiding, driving, caring us....)












Sunday, November 15, 2009

ಸಂಶೋದನೆಯ ಹಾದಿಯಲ್ಲಿ ಮೊದಲ ಯಶಸ್ಸು.........

ಮೊನ್ನೆ ಮೊನ್ನೆ "Young Investigator 2009 Award" ಪಡೆದಾಗ ಮನದಲ್ಲಿ ಮೂಡಿದ ಪಿಸು ಮಾತುಗಳು;
ಇನ್ನೂ ವಿದ್ಯುತ್ ಬೆಳಕು ಕಾಣದ ಎಷ್ಟೋ ಮನೆಗಳಿರುವ ಹಳ್ಳಿಯಲ್ಲಿ ಬೆಳೆದು, ಅದೇ ಹಳ್ಳಿಯ ಪ್ರೈಮರೀ ಶಾಲೆಯಲ್ಲಿ ಬಾಲ್ಯದ ದಿನಗಳನ್ನು ಕಳೆದು, ಅಷ್ಟೇನೂ ಶಿಕ್ಷಣವಂತರಲ್ಲದ ಮುಗ್ದ ತಂದೆ ತಾಯಂದಿರ ಮಡಿಲಲ್ಲಿ ಎದ್ದು ನಿಂತ ನನ್ನ ಮನಸಿಗೆ ಉನ್ನತ ಅಧ್ಯಯನದ ಬಗೆಗೆ ಕಲ್ಪನೆ ಮಾಡಲು ಸಹ ಸುತ್ತಲಿನ ಪರಿಸರದ ಪ್ರೇರಣಿಗಳಿರಲಿಲ್ಲ. ಈ ಹೊತ್ತಿಗೂ ಸ್ನಾತಕೋತ್ತರ ಅಧ್ಯಯನ ಪೂರೈಸಿದ ಒಬ್ಬರನ್ನೂ ಗುರುತಿಸಗಾಗದ ಕೂಡ್ಲು ಎಂಬ ಹಳ್ಳಿಯಿಂದ ಬಂದ ನನಗೆ ಈ ಬೆಳವಣಿಗೆ ನಿಜಕ್ಕೂ ಸಂಭ್ರಮದ ಕ್ಷ್ಣಣ. BSc ಯಲ್ಲಿ ಗಳಿಸಿದ rank, TMA Pai Gold medal, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗಳಿಸುತ್ತಿದ್ದ ಪ್ರಶಸ್ತಿಗಳು ಕೊಟ್ಟ ಖುಷಿಗಿಂತ ಹೆಚ್ಚಿನ ಸಂಬ್ರಮ ಈ ಗಳಿಗೆಯದು. ಭಾರತದ ಮೂಲೆಯ ಹಳ್ಳಿಯಿಂದ ಸುಮಾರು 7000 Km ದೂರದ ಕೊರಿಯಾಕ್ಕೆ ಬಂದಾಗ ಮನದ ತುಂಬಾ ಬರಿ ಕನಸುಗಳು. ಆದರೆ ಆರಂಭದ ದಿನಗಳ ಕಠಿಣ ಪರಿಸ್ಥಿತಿ, ಸಾಮಾನ್ಯ ಜನರ ಜತೆಗೆ ಮಾತನಾಡಲಾಗದ ಸ್ಥಿತಿ (ಭಾಷಾ ವ್ಯತ್ಯಾಸದಿಂದಾಗಿ), ಸಂಸ್ಕ್ರತಿಯ ವ್ಯತ್ಯಾಸ, ಮೈಕೊರೆಯುವಷ್ಟು ಚಳಿ (ಚಳಿಗಾಲದ ಉಷ್ಣಾಂಶ -15 ಡಿಗ್ರೀ ಸೆಲ್ಸಿಯಸ್)........ಇವುಗಳ ಮದ್ಯೇ ಕನಸುಗಳು ಮುದುಡುವ ಭಯ. ಇನ್ನೊಂದೆಡೆ ನನ್ನನ್ನು ನಂಬಿ scholarship ಕೊಟ್ಟ ಕೊರಿಯಾ ದೇಶಕ್ಕೆ ಕೈ ಕೊಟ್ಟು ಮರಳಿ ಹೋಗಲಾರದ ಬಾವುಕ ಸ್ಥಿತಿ. ಆ ನಡುವೆ ಎಲ್ಲವನ್ನೂ ಮನದ ಮೂಲೆಗಿಟ್ಟು, ಸಂಶೋದನೆಯೊಂದೇ ನನ್ನ ಕಾಯಕ ಎಂದರಿತು ಮನಸ್ಸು ಗಟ್ಟಿ ಮಾಡಿ ಹೊಸತು ಅನ್ನಿಸಿದ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡ ಆ ನಿರ್ಧಾರದ ಫಲ ಇಂದು ಕಣ್ಮುಂದಿದೆ!. Cancer Imaging Tracers ಮೇಲಿನ ನನ್ನ ಕೆಲಸವನ್ನು ಗುರುತಿಸಿ, ಹೊಸ ವಿಚಾರವನ್ನು ಗಮನಿಸಿ ನನ್ನನ್ನು ಮೇಲಿನ ಪ್ರಶಸ್ತಿಗೆ ಗುರುತಿಇರುವುದು ನನ್ನ ಮನೋಭಲವನ್ನು ಇಮ್ಮಡಿಯಾಗಿಸಿದೆ. ಈ ಕ್ಷಣದಲ್ಲಿ, ನನ್ನ ಹೆತ್ತ್ತು ಪಾಲಿಸಿದವರಿಗೆ, ಹಾರೈಷಿದ ಹಿತೈಷಿಗಳಿಗೆ, ಬೆನ್ನು ತಟ್ಟಿದ ಮನಸುಗಳಿಗೆ, ಪರೋಕ್ಷವಾಗಿ ಜೊತೆ ಸಾಗಿ ಶಕ್ತಿ ನೀಡುತ್ತಿರುವ ದೇವರಿಗೆ ನಾನು ಕ್ರತಜ್ನ.
ಆ ಗಳಿಗೆಯ ಕೆಲವು ಕ್ಯಾಮರಾ ಕ್ಷಣಗಳು ಕೆಳಗಿವೆ.....