ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Monday, October 26, 2009

ಮನವಿ


ಬಾ ಮೌನವೇ ಬಾ.....ಬಾ....
ಬಂದೊಮ್ಮೆ ನನ್ನಪ್ಪು
ದನಿಯ ಆರ್ಭಟವನ್ನ
ಬಳಿ ಬಂದು ಹೊರದಬ್ಬು
ಓ ಮೌನವೇ ಬಾ.....ಬಾ,.......

ಕೇಳಿ ಕರೆದವರಿಲ್ಲ
ಕಂಡು ಕೊಂಡವರಿಲ್ಲ
ನಾನಂತು ಅರಿತವನಲ್ಲ
ಎಲ್ಲ ಸತ್ಯವ ಬಲ್ಲ
ಓ ಮೌನವೇ ಬಾ,.....ಬಾ.......

ಕಳೆದಂತ ಆ ಬಾಲ್ಯ
ಕಾಡುತಿಹ ಈ ವಿರಹ
ಕತ್ತಲಿನ ಹಣಿಬರಹ
ಕರೆದು ಓಡಿಸಬಲ್ಲ
ಓ ಮೌನವೇ ಬಾ......ಬಾ.......

ಸಂಗಾತಿ ಬಲು ದೂರ
ನೋವಂತು ತಲೆಬಾರ
ಕಳೆದಿರುವ ಕನಸುಗಳ
ಮರೆಮಾಚು ಬಾವಗಳ
ಓ ಮೌನವೇ ಬಾ.....ಬಾ......

ಬಂದೊಮ್ಮೆ ನನ್ನಪ್ಪು
ಬಾ ಮೌನವೇ ಬಾ....ಬಾ......

ದಿನು

ಪರಿಹಾರ


ಗೆಳತಿ ನಿನ್ನ ನೋವಿಗೆ, ಮೌನವೊಂದೆ ಸೂಕ್ತವೇ
ನೆನಪು ಮಾತ್ರ ಸಾಲದೆ, ಅದು ಕೂಡ ಸ್ವಂತವೇ
ಅಂದು ಕೊಟ್ಟ ಬಾವನೆ, ಇಂದು ಬರಿಯ ಕಲ್ಪನೆ
ನೋಡಿ ಹೋಗು ಸುಮ್ಮನೆ, ಯಾಕೆ ಬರಿಯ ಚಿಂತನೆ

........ಕಾದ ಹಗಲು, ಅಷ್ಟು ತೊದಲು
ಬಯಕೆ ತೋಟದ ಹಂದರ
ನೀನೆ ನಾನು, ನಾನೇ ನೀನು
ಎಂಬ ಬಾವನೆ ಸುಂದರ

ಕಂಡುಕೊಂಡ ಸತ್ಯಕೆ, ಯಾಕೆ ಬರಿಯ ಹೋಲಿಕೆ
ಕಳೆದು ಹೋದ ಕಾಣಿಕೆ, ಅದುವೆ ನೋವ ಹೊದಿಕೆ
ಕದ್ದು ಕಳೆವ ಗಳಿಗೆಯಲ್ಲಿ, ಎಲ್ಲ ಮಾತು ಶೂನ್ಯ
ಓಡಿ ಬಂದು ಅಪ್ಪು ಒಮ್ಮೆ, ಕೊನೆಗೆ ಅದುವೆ ಮಾನ್ಯ

.......ಅರಿತ ಒಗಟು, ಬರಿಯ ಕನಸು
ನಿನ್ನ ನೆನಪೇ ಜೀವನ
ನಾನು ಕುರುಡು, ನೀನು ಮೌನಿ
ಸತ್ಯ ಒಂದೇ ಚೇತನ !


ದಿನು