
ಮುಂಜಾನೆಯ ಹೊಸ ಬೆಳಗಿನೊಂದಿಗೆ ಹೊಸ ಕನಸು ಜೀವ ತಳೆದರೆ, ಸಂಜೆಯ ನಸುಗತ್ತಲಲ್ಲಿ ಅಸ್ಥಿತ್ವ ಕಳೆದುಕೊಳ್ಳುವ ಸಂಭವಗಳೇ ಜಾಸ್ತಿ. ಪ್ರತಿ ಕ್ಷಣವೂ ಯೋಚನಾ ಲಹರಿಗೆ ಜಿಗಿಯಬಲ್ಲ ಸ್ವಾತಂತ್ರ್ಯವಿರುವ ಮನಸಿನ ಮಗ್ಗುಲಲ್ಲಿ ಕನಸು ಯಾಕೆ ಇಷ್ಟು ಬೇಗ absorb ಆಗುತ್ತೆ?. ಎಷ್ಟೋ ಬಾರಿ ಕನಸು absorb ಆಗಿರಬಹುದೋ ಅಥವಾ adsorb ಆಗಿರಬಹುದೋ ತಿಳಿಯದಷ್ಟು easy ಆಗಿ ಇತಿಹಾಸ ಸೇರುವ ಪರಿಯಾದರೂ ಏನು? ಕನಸು ಮತ್ತು ಕಲ್ಪನೆಗಿರುವ ವ್ಯತ್ಯಾಸವೇನು? ಕನಸು, ಬಯಕೆಗಳಿಗಿಂತ ಎಷ್ಟು ಬಿನ್ನ? ಕನಸೆಂದರೆ ಒಂದು ಬಗೆಯ ಬಯಕೆಯೇ? ಕನಸಿನ dimension ಎಷ್ಟು ವ್ಯಾಪಕತೆ ಹೊಂದಿರುತ್ತೆ? ಕನಸು ಕಾಣುವ ಮನಸಿಗಿರಬೇಕಾದ basic requirementsಗಳೇನು? ಹುಟ್ಟಿದ ಕನಸುಗಳೆಲ್ಲಾ ನನಸಾಗೋಕೆ ಸಾದ್ಯಾನಾ?......ಹೀಗೆ ಸಾಗಬಲ್ಲ ಹಲವಾರು ಪ್ರಶ್ನೆಗಳ ನಡುವೆ ಒಂದಂಶ ಸ್ಪಷ್ಟ. ಬದುಕಿಗೆ ಕನಸಿರಬೇಕು, ಆದರೆ ಬದುಕು ಕನಸಲ್ಲ!. ಯಾವಾಗ ನಾವು ಕನಸು (Dream) ಮತ್ತು ಕಲ್ಪನೆ (Imagination) ಗಳ ನಡುವೆ ವ್ಯತ್ಯಾಸವನ್ನು ಪರಿಗಣಿಸಲು ವಿಫಲರಾಗುತ್ತೇವೆಯೋ ಅಲ್ಲಿಯ ತನಕ ಸ್ಪಷ್ಟ ಕನಸುಗಳ ಹುಟ್ಟು ಕಷ್ಟ ಸಾದ್ಯ.
ಬದುಕಿನ ವ್ಯಾಪಕತೆಯಲ್ಲಿ ಉಳಿಯಬೇಕಾದ, ಅನುಭವದ ದ್ವಂದ್ವದಲ್ಲಿ ಅಸ್ಥಿತ್ವ ಕಾಪಾಡಿಕೊಳ್ಳಬೇಕಾದ, ಜಂಜಾಟದ ಝರಿಯಲ್ಲಿ ತನ್ನ ಪರಿಯನ್ನು ಬೆಳೆಸಿಕೊಳ್ಳಬೇಕಾದ ’Strong determination’ ಕನಸಿಗಿರಬೇಕು. ಕನಸು, ಬದುಕಿನ ಪ್ರತಿ ಪದರವನ್ನ, ನಡೆಯನ್ನ ವ್ಯಾಪಿಸಿದಾಗ ದಾರಿಯ ಒರಟುತನ ಹೆಚ್ಚಾಗುವ ಸಂಭವಗಳೇ ಹೆಚ್ಚು. ಕನಸಿನ ನನಸಿಗೆ ಎಲ್ಲೂ ಹೂವಿನ ಚಾದರವಿರುವ ಮಾರ್ಗ ಸಿಗದು. ವ್ಯವಸ್ಥೆಯ ವೈಪರಿತ್ಯ, ವೈಯಕ್ತಿಕ ಏರಿಳಿತ, ಸಾಮಾಜಿಕ ಅಸ್ಥಿರತೆ, ಭಾವನಾತ್ಮಕ ಗೊಂದಲ, distract ಮಾಡಬಲ್ಲ ಚಟುವಟಿಕೆಗಳು, ಗೊತ್ತೇ ಇಲ್ಲದಂತೆ ಹುಟ್ಟಿಕೊಳ್ಳಬಲ್ಲ ಘಟನೆಗಳು......ಕೊನೆಗೆ so called destiny effect..ಇವೆಲ್ಲವುಗಳನ್ನೂ ದಾಟಿ ಸಾಗಬಲ್ಲ, ಸಾಗಿ ಉಳಿಯಬಲ್ಲ ಕನಸಿಗೆ ಇವೆಲ್ಲಾ ದಾರಿಯ ತುಂಬಾ ಸಿಗುವ ಒರಟು ಚಾದರ.
ಚಿಕ್ಕವರಿದ್ದಾಗ ಇದ್ದ ಕನಸುಗಳು ಕಾಲನ ಕಬಳಿಕೆಯೊಂದಿಗೆ ಮಗ್ಗಲನ್ನು ಬದಲಿಸಿಕೊಳ್ಳಬಲ್ಲವು. ಸಮಯ ಕಳೆದಂತೆ ಶಿಥಿಲವಾಗಬಲ್ಲವು. ಅನುಭವದ ನೆಲೆಯಲ್ಲಿ ರೂಪ ಬದಲಿಸಿಕೊಳ್ಳವಲ್ಲವು. ನಾನು ಚಿಕ್ಕವನಿದ್ದಾಗ ಹುಟ್ಟಿದ್ದ ಕನಸುಗಳೆಲ್ಲವೂ ಈಗ ನನ್ನೊಳಗೆ ಉಳಿದಿಲ್ಲ. ಆಗಿದ್ದ ಹಲವು ಕನಸುಗಳಲ್ಲಿ ಈಗ ಉಳಿದದ್ದು ಕೆಲವೇ ಕೆಲವು. ಇದರೊಂದಿಗೆ ಹೊಸತಾಗಿ ಸೇರ್ಪಡೆಗೊಂಡ ಮತ್ತಷ್ಟು!. ಬಾಲ್ಯದ ಕೆಲವೊಂದು ಕನಸುಗಳು ಈಗಿನ ಕಲ್ಪನೆಗಳು!. ಕನಸು ಕೂಡ ಅಮರತ್ವ ಪಡೆದಿಲ್ಲ. ಅಮರತ್ವ ಪಡೆವ ಕನಸಿಗೆ ಗೆಲುವು ಬಲು ದೂರ. ವಾಸ್ತವದ ಕಲ್ಪನೆ ಕನಸಿನ ವ್ಯಾಪಕತೆಯನ್ನು ನಿರ್ಧರಿಸಬಲ್ಲುದು. ವಾಸ್ತವತೆಯನ್ನು ಮೀರಿದ ಕನಸು ಬದುಕಲ್ಲಿ ಒಂದೋ, ಎರಡೋ ಹುಟ್ಟಲು ಸಾದ್ಯ ಮತ್ತು ಕೆಲವರ ಬದುಕಿನಲ್ಲಿ ಘಟಿಸಲು ಸಾದ್ಯ. ಚಿಕ್ಕವನಿದ್ದಾಗ ಭಾರತದ ಪ್ರಧಾನಿಯಾಗಬೇಕೆಂಬ ಕನಸಿತ್ತು. ಕಾಲ ಕಳೆದಂತೆ ಅದು ಕಲ್ಪನೆಯಾಗಿ ಬದಲಾಗತೊಡಗಿತು!. ಇದು ನನಗೆ ಸಾದ್ಯವಿಲ್ಲವೆಂಬ ರಣಾತ್ಮಕತೆಯಿಂದಲ್ಲ...ಬದಲಾಗಿ ಅದು ನನ್ನ ಕನಸಾಗಲು suit ಅಲ್ಲ, ನನಗೆ ಅನ್ವಯ ಆಗೋದೆ ಇಲ್ಲ ಎನ್ನುವ ಮನಸಿನ ನಿರ್ಧಾರದ ಫಲ. ಎಷ್ಟೋ ಈ ಬಗೆಯ ವಿಚಾರಗಳು ಪ್ರತಿ ಮನಸಿನ ಒಳಗೆ ಹೋರಾಟ ಮಾಡುತ್ತಿರುತ್ತವೆ. ಹಾಗಾಗಿ ವಾಸ್ತವದ ಅರಿವು ಸಲೀಸಾಗಿ ಕನಸಿನ ಆಯುಷ್ಯ ನಿರ್ಧರಿಸಬಲ್ಲುದು.
ಕನಸಿನ output ನಿರ್ಧರಿಸಬಲ್ಲ ಮುಖ್ಯ ಅಂಶಗಳೆಂದರೆ, Planning, Application and Management. ಕನಸನ್ನು ಹುಟ್ಟಿಸುನ ತಾಕತ್ತು ಮನಸ್ಸಿಗಿರುತ್ತವೆಯಾದರೂ, ಆ ಬಗೆಗೆ ಸ್ಪಷ್ಟ ಚೌಕಟ್ಟು ಕೊಡಬಲ್ಲ ಶಕ್ತಿ ಇರುವಂತದ್ದು ಕಲ್ಪನೆಗೆ ಮಾತ್ರ. ಹಾಗಂತ ಎಲ್ಲ ಕಲ್ಪನೆಗಳು ಕನಸಲ್ಲ!. ಆದರೆ ಪ್ರತಿ ಕನಸಿಗೂ ಒಂದು ಕಲ್ಪನೆಯಿದೆ. ಹೀಗಾಗಿ ಪ್ರತಿ ಕನಸಿನ ಸ್ಪಷ್ಟತೆಯನ್ನು ಲೆಕ್ಕಾಚಾರ ಮಾಡಿ, ಅದರ ಯಶಸ್ಸಿಗೆ plan ಮಾಡುವ ಕಾಯಕ ಕನಸಿನ ಹುಟ್ಟಿನೊಂದಿಗೆ ಆರಂಭಗೊಳ್ಳಬೇಕು. ಕಲ್ಪಿಸಿದ ಹಾಗೂ ಕೈಗೊಂಡ ನಿರ್ದಾರಗಳನ್ನು sincere ಆಗಿ apply ಮಾಡಬಲ್ಲ smartness ಕನಸಿನ ಯಶಸ್ಸನ್ನು ಮುಖ್ಯವಾಗಿ ನಿರ್ಧರಿಸುತ್ತೆ. ಇನ್ನು ನಡು ದಾರಿಯಲ್ಲಿ ಬರುವ ಏರಿಳಿತಗಳ ನಡುವೆ ನಮ್ಮ ಕನಸನ್ನು manage ಮಾಡಬೇಕಾದ್ದು ಅನಿವಾರ್ಯ ಹಾಗೂ ಅವಶ್ಯಕತೆಯೂ ಹೌದು. ಕಾಲದೊಂದಿಗೆ ಕೆಲವೊಮ್ಮೆ ನಮ್ಮ ಕನಸಿನ ಮಜಲುಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಸಹಜ. ಈ ರೀತಿಯ ಸನ್ನಿವೇಶಗಳಲ್ಲಿ ಬದುಕಿನ, ಸಮಾಜದ ಎದುರು bold ಆಗಬೇಕಾದ್ದು ಅಗತ್ಯ. ಹಾಗಂತ ಕನಸುಗಳ ದಾರಿಯ ತುಂಬೆಲ್ಲಾ ಜಯವೊಂದೇ ಲಭಿಸದು. ಲೆಕ್ಕಾಚಾರ ಸುಲಭ ಸಾದ್ಯವಾಗದು. ಆ ತಿರುವಿನಲ್ಲಿ sacrification ಮತ್ತು consolation ಬಹು ಮುಖ್ಯ ಪಾತ್ರವಹಿಸುತ್ತೆ. ಅಂತೂ ಕನಸಿನ ಯಶಸ್ವಿ ಪಯಣದಲ್ಲಿ ನೂರಾರು ದಾರಿಗಳನ್ನು ಸವೆಸಬೇಕಾಗುತ್ತೆ.......ನೆನಪಿರಲಿ....ಕನಸು ಬೆಳ್ಳಿಗೆರೆಯಲ್ಲ....ಕೆತ್ತಿ ಬರೆಯಬೇಕಾದ ಶಿಲ್ಪಿಯ ಕಾಯಕ!.
ದಿನು