ಮೊನ್ನೆ ಮೊನ್ನೆ "Young Investigator 2009 Award" ಪಡೆದಾಗ ಮನದಲ್ಲಿ ಮೂಡಿದ ಪಿಸು ಮಾತುಗಳು;
ಇನ್ನೂ ವಿದ್ಯುತ್ ಬೆಳಕು ಕಾಣದ ಎಷ್ಟೋ ಮನೆಗಳಿರುವ ಹಳ್ಳಿಯಲ್ಲಿ ಬೆಳೆದು, ಅದೇ ಹಳ್ಳಿಯ ಪ್ರೈಮರೀ ಶಾಲೆಯಲ್ಲಿ ಬಾಲ್ಯದ ದಿನಗಳನ್ನು ಕಳೆದು, ಅಷ್ಟೇನೂ ಶಿಕ್ಷಣವಂತರಲ್ಲದ ಮುಗ್ದ ತಂದೆ ತಾಯಂದಿರ ಮಡಿಲಲ್ಲಿ ಎದ್ದು ನಿಂತ ನನ್ನ ಮನಸಿಗೆ ಉನ್ನತ ಅಧ್ಯಯನದ ಬಗೆಗೆ ಕಲ್ಪನೆ ಮಾಡಲು ಸಹ ಸುತ್ತಲಿನ ಪರಿಸರದ ಪ್ರೇರಣಿಗಳಿರಲಿಲ್ಲ. ಈ ಹೊತ್ತಿಗೂ ಸ್ನಾತಕೋತ್ತರ ಅಧ್ಯಯನ ಪೂರೈಸಿದ ಒಬ್ಬರನ್ನೂ ಗುರುತಿಸಗಾಗದ ಕೂಡ್ಲು ಎಂಬ ಹಳ್ಳಿಯಿಂದ ಬಂದ ನನಗೆ ಈ ಬೆಳವಣಿಗೆ ನಿಜಕ್ಕೂ ಸಂಭ್ರಮದ ಕ್ಷ್ಣಣ. BSc ಯಲ್ಲಿ ಗಳಿಸಿದ rank, TMA Pai Gold medal, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗಳಿಸುತ್ತಿದ್ದ ಪ್ರಶಸ್ತಿಗಳು ಕೊಟ್ಟ ಖುಷಿಗಿಂತ ಹೆಚ್ಚಿನ ಸಂಬ್ರಮ ಈ ಗಳಿಗೆಯದು. ಭಾರತದ ಮೂಲೆಯ ಹಳ್ಳಿಯಿಂದ ಸುಮಾರು 7000 Km ದೂರದ ಕೊರಿಯಾಕ್ಕೆ ಬಂದಾಗ ಮನದ ತುಂಬಾ ಬರಿ ಕನಸುಗಳು. ಆದರೆ ಆರಂಭದ ದಿನಗಳ ಕಠಿಣ ಪರಿಸ್ಥಿತಿ, ಸಾಮಾನ್ಯ ಜನರ ಜತೆಗೆ ಮಾತನಾಡಲಾಗದ ಸ್ಥಿತಿ (ಭಾಷಾ ವ್ಯತ್ಯಾಸದಿಂದಾಗಿ), ಸಂಸ್ಕ್ರತಿಯ ವ್ಯತ್ಯಾಸ, ಮೈಕೊರೆಯುವಷ್ಟು ಚಳಿ (ಚಳಿಗಾಲದ ಉಷ್ಣಾಂಶ -15 ಡಿಗ್ರೀ ಸೆಲ್ಸಿಯಸ್)........ಇವುಗಳ ಮದ್ಯೇ ಕನಸುಗಳು ಮುದುಡುವ ಭಯ. ಇನ್ನೊಂದೆಡೆ ನನ್ನನ್ನು ನಂಬಿ scholarship ಕೊಟ್ಟ ಕೊರಿಯಾ ದೇಶಕ್ಕೆ ಕೈ ಕೊಟ್ಟು ಮರಳಿ ಹೋಗಲಾರದ ಬಾವುಕ ಸ್ಥಿತಿ. ಆ ನಡುವೆ ಎಲ್ಲವನ್ನೂ ಮನದ ಮೂಲೆಗಿಟ್ಟು, ಸಂಶೋದನೆಯೊಂದೇ ನನ್ನ ಕಾಯಕ ಎಂದರಿತು ಮನಸ್ಸು ಗಟ್ಟಿ ಮಾಡಿ ಹೊಸತು ಅನ್ನಿಸಿದ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡ ಆ ನಿರ್ಧಾರದ ಫಲ ಇಂದು ಕಣ್ಮುಂದಿದೆ!. Cancer Imaging Tracers ಮೇಲಿನ ನನ್ನ ಕೆಲಸವನ್ನು ಗುರುತಿಸಿ, ಹೊಸ ವಿಚಾರವನ್ನು ಗಮನಿಸಿ ನನ್ನನ್ನು ಮೇಲಿನ ಪ್ರಶಸ್ತಿಗೆ ಗುರುತಿಇರುವುದು ನನ್ನ ಮನೋಭಲವನ್ನು ಇಮ್ಮಡಿಯಾಗಿಸಿದೆ. ಈ ಕ್ಷಣದಲ್ಲಿ, ನನ್ನ ಹೆತ್ತ್ತು ಪಾಲಿಸಿದವರಿಗೆ, ಹಾರೈಷಿದ ಹಿತೈಷಿಗಳಿಗೆ, ಬೆನ್ನು ತಟ್ಟಿದ ಮನಸುಗಳಿಗೆ, ಪರೋಕ್ಷವಾಗಿ ಜೊತೆ ಸಾಗಿ ಶಕ್ತಿ ನೀಡುತ್ತಿರುವ ದೇವರಿಗೆ ನಾನು ಕ್ರತಜ್ನ.
ಆ ಗಳಿಗೆಯ ಕೆಲವು ಕ್ಯಾಮರಾ ಕ್ಷಣಗಳು ಕೆಳಗಿವೆ.....
7 comments:
le dinu....nice article
Dear Frnd,
Good to hear abt this feat…. You have been putting ur best effort and working hard all the time. I think this Award is just the beginning, there are lot more to come still..:)! Grt job my dear frnd…. Keep up the good work…. u will certainly reach the sky:).
You are the best of Best:)Always!!
Hoi ond vishya nim kannada matra Excellent..ell kalthadd??? salpa namgu heli kodi marayare:)
Chinni
ಹಾರ್ದಿಕ ಶುಭಾಶಯಗಳು.:) ತಾನು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇಟ್ಟು, ಅವಿರತವಾಗಿ ಶ್ರಮಿಸಿದವರಿಗೆ ಸಿಗುವ ಯಶಸ್ಸು ಚಿರ ತೃಪ್ತಿಯನ್ನು ನೀಡುತ್ತದೆ. ಅಂತಹ ಆನಂದಮಯ ಕ್ಷಣ ನಿಮ್ಮದಾಗಿದೆ. ತುಂಬಾ ಸಂತೋಷ.
ಮೆಡಿಕಲ್ ಫೀಲ್ಡ್ ನನ್ನ ಅಚ್ಚುಮೆಚ್ಚಿನ ತಾಣ. ನನಗೂ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಬಿ.ಎಸ್ಸಿ.ನಲ್ಲಿ CBZ ತೆಗೆದುಕೊಂಡು ಅಭ್ಯಸಿಸಿದೆ. ೮೫% ಕೂಡ ಬಂತು. ಆದರೆ ಮೈಕ್ರೋ ಬಯಾಲಜಿಯಲ್ಲಿ ಸಂಶೋಧನೆ ಮಾಡುವ ಕನಸು ಕನಸಾಗಿಯೇ ಉಳಿಯಿತು. ಬೇಸರ ಈಗಿಲ್ಲ. ಅದಕ್ಕಿಂತ ಹೆಚ್ಚಿನ ಮನಃಶಾಂತಿ ಕೊಡುವ ಸಾಹಿತ್ಯ ನನ್ನೊಂದಿಗೆ ಸದಾ ಇದ್ದೇ ಇದೆ. :)
ನೀವು ಕಾನ್ಸರ್ ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವುದನ್ನು ಓದಿ ತುಂಬಾ ಕುತೂಹಲವಾಗುತ್ತಿದೆ. ನಿಮ್ಮ ಅಧ್ಯಯನದ ಕುರಿತು ಕಿರು ಮಾಹಿತಿಯನ್ನು ತಿಳಿದುಕೊಳ್ಳುವಂತಾದರೆ ಮತ್ತೂ ಸಂತೋಷ.
ಬರೆಯುತ್ತಿರಿ. ಬರುತ್ತಿರುವೆ.
ನನ್ನ ಬ್ಲಾಗ್....
ಮಾನಸ - http://manasa-hegde.blogspot.com/
पंचमि - http://panchami-hegde.blogspot.com/
Many congratulations for your great success. Let this be a milestone for your future endeavours. Wish u all the best.
congrats..... superb dinesha very nice article
Congratulations Dinesh.
Congrats.... :)
Post a Comment