ವರ್ಷ ಸ್ಪಂದನ...
ಮಳೆಯೆಂದರೆ......
ಬೆವೆತುಸಿರಿಗೆ ಸಿಂಚನ
ಸಂಧಿಯೊಳಗಿನ ರಿಂಗಣ
ಭಾವದ ಹನಿ ಚಿಲಿ ಪಿಲಿ
ಗಬ್ಬೆದ್ದ ಸ್ತರಕೆ ಮೋಕ್ಷ
ಕನಸು ಕಾಯಕದ ಮೊಳಕೆ
ಕಾಲ ಚಕ್ರದ ಗಾಲಿ
ಮಿಂಚಿನೊಳಗಿನ ತಂಪುಹಾಡು
ಕವಿಯಕ್ಷರ- ಪಗಡೆ
ಪ್ರೇಮದೊಳು ತುಸು ತಿಲ್ಲಾನ
ನಿರ್ಲಿಪ್ತತತೆಗೆ ಕಾಲ ಬದಲಾವಣಿ!!!!
ಮಳೆಯಿಂದ...........
ನೆಲ-ಬಾಳು ಹಸಿರಾಯ್ತು,
ಸೋರಿನೊಳು ನಗು ಉಕ್ಕಿ
ಹೊರದೇಹ ತಂಪಾಯ್ತು,ಕಣ್ಣು ಕೆಂಪಾಯ್ತು
ಹೊರಸೂಸೊ ಹನಿಹನಿ,
ಮನದೊಳು ಇಬ್ಬನಿ
ಮಂದಿಯೊಳು ಚಡಪಡಿಕೆ,ಇನ್ನೆಲ್ಲೋ ಗುದ್ದಾಟ
ಕುಸಿದ ಸೌಧ,ಮುಳುಗೊ ದೇಹದ ಬಯಕೆ
ಜರಿಸಾರಿ,ನಿಲುವಂಗಿ;ಮಡಚಿಟ್ಟ ಪುಸ್ತಕ
ಬದುಕಿನೊಳು ಭಾವ,ಭಾವ ಬದುಕಲ್ಲ
ಕಿಂಡಿಯೊಳಗಿನ ಹನಿ ಕೂಡ ದೊಡ್ಡ ಹಳ್ಳ!!!
ಓ ಮಳೆಯೇ.....
ಹೊಯ್ದು ಬಿಡು ಕೊಳೆತೊಳೆಯೇ..
ನೀನಾಗು ಕೈ ನೀಡೊ ಕರಸಿಂಚನ
ಕೊಳೆಯ ಮೂಲ ತಲುಪಲಿ ನೀರಬಳುಕು
ಬೆವೆತ ದೇಹದ ಉಸಿರಾಗು
ಕನಸ ಬೆಳೆಯುವ ಮನದ ಕಸುವಾಗು
ಹುಯ್ಯೋ ಹುಯ್ದು ಬಿಡು
ಕಣ್ಣೀರು ಕಾಣದಷ್ಟು
ಇತಿಹಾಸ ಉಳಿಯದಷ್ಟು!?
ರಚನೆ: ದಿನು
No comments:
Post a Comment