ನೆನಪಾಗುತಿದೆ.......
ಅದೇ ಹಳೆರಸ್ತೆಯ ಗುಳಿಹಾಡು
ಕೆನ್ನೆ ಮುದ್ದಿಸುತಿದ್ದ ಕೈಗಳು
ಮಣ್ಣ ಮದ್ಯೆ ರಂಗಾಗುತಿದ್ದ ಬಿಳಿಅಂಗಿ
ಕೆಂಪು ರಿಬ್ಬನ್ ಮದ್ಯೆ ತೇಲುತಿದ್ದ ಜುಟ್ಟು
ಒಂಟಿ ಕೊಡೆಯಡಿಯ ಮೈಶಾಖ
ಸಂತೆಯಿಂದ ಅಪ್ಪ ತರುತಿದ್ದ ಕಡಲೆ
ನಗು ತರಿಸುತಿದ್ದ ತೆರೆದ ಚಡ್ಡಿ
ಕೈಚುಚ್ಚಿ ಓಡುತಿದ್ದ ಮುದ್ದು ಹುಡುಗಿ
ಗಂಜಿ ನಡುವಿನ ಅನ್ನದಗಳು
ಮೊದಲ ಜಾತ್ರೆಯ ತೊಟ್ಟಿಲಾಟ
ತೊದಲು ತೊದಲಿ ಗೆದ್ದ ಆಶುಭಾಷಣ
ಸ್ವಾತಂತ್ರ್ಯ ದಿನ ಸಿಗುತಿದ್ದ ಮುಷ್ಟಿಯಷ್ಟು ಸಿಹಿ
ಅಮ್ಮನ ಕೈಗಿಟ್ಟು ಕುಣಿದ ಬಹುಮಾನದ ಲೋಟ
ಹಾಡಲೆತ್ನಿಸಿ ನಕ್ಕ ಮುಗ್ದ ದನಿ
ಪುಸ್ತಕದಡಿ ಇತಿಹಾಸವಾದ ಪ್ರೇಮಪತ್ರ
ಪುಟಗಳ ನಡುವಿರುತಿದ್ದ ನವಿಲುಗರಿ
ಅಳಿದಿಳಿದ ಅಜ್ಜನಂಗಡಿಯ ಶುಂಠಿ ಚಾಕಲೇಟ್
ಕಳೆದಂತೆ ಮಳೆಯಾದ ಕಣ್ಣೀರು
ನೋವಲ್ಲಿ ನಲಿವಾಗುತಿದ್ದ ಅಪ್ಪನಪ್ಪುಗೆ
ಚಕ್ರಕ್ಕೆ ಕಲ್ಲಿಡುತಿದ್ದ ದೀಪಾಲಿ ಬಸ್ಸು
ಚಿಕ್ಕಪ್ಪ ತಂದಿಟ್ಟ ಮೊದಲ ಪ್ಯಾಂಟು
ಪೇಪರ್ ನಲ್ಲಿ ಮೂಡಿದ್ದ ಕಪ್ಪು-ಬಿಳುಪು ಪೋಟೊ
ಎಲ್ಲವೂ ನೆನಪಾಗುತಿದೆ................................
ಬದುಕು ಸತ್ವ ಪಡೆದಂತೆ.ಎಲ್ಲೊ ಕಳೆದಂತೆ
ಇತಿಹಾಸ ಬದುಕಾಗಿ,ಬದುಕು ಇತಿಹಾಸವಾದಂತೆ
ಕನಸು ನನಸಾಗಿ ಇನ್ನೆಲ್ಲೋ ಸವಿದಂತೆ
ಸತ್ಯ,ಕಹಿಸತ್ಯ....ಬದುಕು ಬರಿ ನೆನಪ ಕಂತೆ....?
ರಚನೆ: ದಿನು
ಅರ್ಪಣಿ: ಬಾಲ್ಯ ಬದುಕಾದ ಎಲ್ಲ ಮನಸುಗಳಿಗೆ......
3 comments:
ಕವನ super ದಿನು. ಬಾಲ್ಯದ ನೆನಹುಗಳನ್ನು ಬಲು ಚೆನ್ನಾಗಿ ರೂಪಿಸಿದ್ದೀರಿ.
ಬ್ಲಾಗಿನ ಪ್ರಪಂಚಕ್ಕೆ ಸ್ವಾಗತ!
It has comeout so natural...
While reading,I went back to my childhood days...
Miss those days...
Were just like heaven...
Post a Comment