ಹೆಣ್ಣು ಸಲಿಲ......
ಗುಡಿ ಗರ್ಭದ ಸೊಗಸಲ್ಲಿ
ಬದುಕ ಮೂಲದ ಬೆಳಕು
ತೊಡೆವುಸಿರ ಸೊಬಗಲ್ಲಿ
ಸುಪ್ತ ಪರಿಧಿಯ ಹೊಸಕು,
ಜಡ ಮೂಲಕೆ ಬಲವಾಗು
ಬೆಳವಣಿಗೆಯ ಉಸಿರಾಗು
ಕೊಡು ಜೀವ,ಅದೇ ಭಾವ
ಹೆಣ್ಣೀ ನೀನಾಗು ಮಾತಾ.........
ನುಡಿಗಳಿಗೆ ಅಡಿಯಾಗು
ಗುಡಿಸಲಿನ ನಗೆಯಾಗು
ಬೆರಳ ಸಂಧಿನ ಗೆರೆಯ
ಇತಿಹಾಸ ನಿನದಾಯ್ತು!!
ಬಿದ್ದ ಕ್ಷ್ಣಣದಲಿ ಎದ್ದು
ಮುದ್ದಿನ ನೆನಪಾಯ್ತು
ಏಳಬಯಸುವ ಮೊಳಕೆ
ಕೈಯೆತ್ತು ಒಮ್ಮೆ ಪಕ್ಕ
ಹೆಣ್ಣೀ ನೀನಾಗು ಅಕ್ಕ.........
ಎದ್ದಿರುವ ಉಸುಕಲ್ಲಿ
ಮೆದ್ದಬಯಸುವ ಭಾವ
ಗಂಭೀರ ಸೆಲೆಯಲ್ಲಿ
ಜೀವ-ಸತ್ಯ ಮೇವ!
ಬಂದೊಮ್ಮೆ ಅಪ್ಪಿಬಿಡು
ಕಣ್ಮುಚ್ಚಿ ಓಡಿಬಿಡು
ಉಸಿರ ನೆಲೆ ಬದಿಗಿಟ್ಟು
ಕೆಳಮಾಡೊ ಒಳ ಅಂಗಿ
ಹೆಣ್ಣೀ ನೀನಾಗು ತಂಗಿ..........
ಇರುಳ ಕನಸು,ಹಗಲ ಕಸುವು
ಮುಕ್ತ ಭಾವಕೆ ತತ್ವ
ಇದ್ದ ಭಕ್ತಿಗೆ ಸತ್ವ.....
ಕನಸ ಕಚಗುಳಿ
ಹೊಸತೆನ್ನುವ ಜಗಕೆ
ತುಂತುರು ಮಳೆ
ಹರಿದಂತೆ ಹರಿವ
ಬೆರೆತಂತೆ ಬೆರೆವ
ಇಲ್ಲದಿರೆ ಇನ್ನಿಲ್ಲ
ವ್ಯಕ್ತವಾಕ್ಯವು ಸಲ್ಲ
ಬಿಟ್ಟ ಮನಸಿನ ಕೆಳದಿ
ಹೆಣ್ಣೀ ನೀನಾಗು ಮಡದಿ.........
ಗುಂಗುರು ಕೂದಲ ಗೆರೆ
ಸಂಧಿಯೊಳಗೆ ಕನಸ ಸೆರೆ
ನಡೆಯೋ ಹೆಜ್ಜೆಯ ಗಣನೆ
ತಿಳಿ ಹೇಳಲೊಲ್ಲದ ಕಲ್ಪನೆ
ಬಿಟ್ಟರೂ ಬಿಡಲಾಗದ ಸ್ಥಿತಿ
ಹೆಣ್ಣೀ ನೀನಾಗು ಗೆಳತಿ..........
ಅದೆ ನೋಡು ಹೆಣ್ಣು ನೀ ಸಲಿಲ
ಬಂಧನದ ಗೂಡೊಳಗೆ ತಳಮಳ
ಹೊದ್ದುಬಿಡು ನಿನ್ನ ಅಕ್ಕರೆಯ ಹೊದಿಕೆ
ನಿನ್ನದೀ ಧರೆ,ಯಾಕಿಷ್ಟು ಹೋಲಿಕೆ?
ನಿನ್ನಿರುಳ ಗರ್ಭದಲಿ ನನ್ನೀ ಹೊಂದಿಕೆ....
ದಿನು
2 comments:
Nice to see you blogging Dinu..
keep it up.
nimma baravanige heege munduvareyali.... Shubhavaagali..
Madhu
I know u have respect for girls....
But here u expressed ur feelings so truely...
Just superb....
Keep writting...
Post a Comment