ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Wednesday, April 23, 2008

ಆತ್ಮ ನೀ ಮಾತಾಡು..!

[ಕನಸು ಕೈಗಿಟ್ಟು ,ನೆನಪುಗಳನ್ನ ಮನಸಿಗಿಟ್ಟು , ಬೌತಿಕವಾಗಿ ಮರೆಯಾದ ತಂದೆಯವರ ನೆನಪಿಗೆ.....]
ಆತ್ಮ ನೀ ಮಾತಾಡು!
ಹೆಗಲಂಚಿನ ಆ ಸ್ಪರ್ಶ
ಬೆರಳು ಸಂದಿಯ ಇತಿಹಾಸ
ಒಂದಿನಿತು ಅರ್ಥವಾಗುತ್ತಿಲ್ಲ
ಮಾತಾಡು ಆತ್ಮವೆ ಮೌನ ಏಕೆ?

ಹುಸಿಗೋಪದರ್ಥ ಅರಿವಾಯ್ತು
ತುಸುಗೆಂಪ ಸಿಟ್ಟು ತಿಳಿದೋಯ್ತು
ಎಂತು ಸಾಂತ್ವನಗೈದಿರಿ ಕಷ್ಟದಲೆಗೆ
ಬಾಳಿ ತೋರಿದಿರಿ ಬದುಕ ದೀವಿಗೆ

ತಂಗಾಳಿ ಬಿಸಿಯಾಗೆ,ಬದುಕು ಉಬ್ಬು
ನೀವಿಲ್ಲದಿಲ್ಲ ದ್ರಡತೆ,ತಬ್ಬಿಬ್ಬು
ಅಂದು ಬೈದವರಲ್ಲ,ಇಂದು ಮಾತೇ ಇಲ್ಲ
ಮೌನದೊಳು ಅಷ್ಟು ಸುಖ ಸಲ್ಲ !

ನಾ ಕಳೆದದ್ದು ಎರಡು,ಇನ್ನರ್ದ ದಶಕ
ಹೇಗೆ ಬದುಕಿದಿರಿ ನೀವಷ್ಟು ಸಾರ್ಥಕ
ಗುರಿಯ ಕರೆಗೆ ದನಿ ಶಾಂತ
ಮಾತಾಡುತಿರು ಆತ್ಮ ಅನವರತ

ಎಂದು ನೋಯಿಸಲಿಲ್ಲ,ಕಷ್ಟ ಹೇಳಲೆ ಇಲ್ಲ
ಎಂತು ಗೈದಿರಿ ಕಾರ್ಯ,ಅರಿಯೆ ನಾ ಕೈಂಕರ್ಯ
ಉದ್ದೇಶ ಬದುಕಾಯ್ತು,ಸಂತೋಷ ನೀಡಾಯ್ತು
ಹೇಳಿ ಹೋಗಲೆ ಇಲ್ಲ,ಅದ ನಾ ಕ್ಷಮಿಸೊಲ್ಲ

ಅಂದು ನೀವಂದದ್ದು ಬದುಕು ಹೋರಾಟ
ಆದರೂ ಗೈದಿರಿ,ನಿಮಗೆಷ್ಟು ಹಠ !
ಇಂದು ನನಗನಿಸುತಿದೆ ನೀವೆ ದನ್ಯ
ದಿನವು ಹೋರಾಟ,ಬದುಕು ಅಗಮ್ಯ

ಸಾಕಿನ್ನು ಈ ಮೌನ,ಅದುವೆ ಗಹನ
ಹೇಳಿಕೊಡಿ ಬದುಕು ಎಂತು ಚಲನ?
ನೀವಿಲ್ಲದೀ ಬದುಕು ಮೊದಲೇ ಶೂನ್ಯ
ಕೊನೆ ಪಕ್ಷ ಒಂದು ಮಾತು,ಅದುವೆ ಮಾನ್ಯ।

ನಿಮ್ಮ ಕುಡಿ,ದಿನು
मिस उ पापा............एवर मिस उ........

1 comment:

Anonymous said...

Around the corner,definately he is watching u...& he'll be proud to have a son like u...