{ಕಳೆದ ಬಾಲ್ಯದ ನಗುವನ್ನು ನೆನೆದು.............. }
ನಗಬೇಕು ಮತ್ತೊಮ್ಮೆ......
ನಗಬೇಕು ಮತ್ತೊಮ್ಮೆ......
ಅಂದೊಮ್ಮೆ ನಕ್ಕಿದ್ದೆ.....
ಸಂತಸದ ಸೋನೆ
ಮನ ಬಿಚ್ಚಿ ಒಸರಿತ್ತು
ತನಗರಿಯೆ ತಾನೆ
ನಯನದೊಳು ನಲಿವಿತ್ತು
ಮೌನದೊಳು ಸೊಗಸಿತ್ತು
ಬೀಸೊ ಗಾಳಿಯು ಕೂಡ
ನಸುಗಂಪ ತರಿಸಿತ್ತು
ಕಳೆದ ನಿನ್ನೆಯ ಶೂನ್ಯ
ತೊದಲು ಬಾವದಿ ಅನನ್ಯ
ನಾಳೆ ಎಂಬುದ ಕಾಣಿ
ಬರಿ ಬಿಚ್ಚು ಮನಸಿನ ವೀಣೆ
ಮೈಗೆ ಸ್ಪರ್ಶವು ಸಾಕು
ಕಿಂಡಿ ಬೆಳಕಿಗು ತಳಕು
ಶಬ್ದ ಸರಿದರು ಸೆಳೆತ
ಖಾಲಿ ನಗುವಿನ ಕುಣಿತ
ನಿನ್ನೆ ಮತ್ತೆ ನಕ್ಕಿದ್ದೆ....
ಅದೆ ಜೀವ ಬದಲಾದ ಬಾವ!
ಅವರು ನಕ್ಕರು,ನಾನು ನಕ್ಕೆ
ಕುಣಿದಿಲ್ಲ ಮನ,ನಾನರಿಯೆ ಕಾವ
ಮೌನದೊಳು ಗುಣಿತ ; ವ್ಯವಕಲನ
ಮಾತಿನೊಳು ಕಾಗುಣಿತ ; ಸಂಕಲನ
ಮುಖ ನಗುತಿರೆ, ಮನದವಸರ
ಕಾರ್ಯ ಮುಗಿಸಿದ ಬಾವ: ಅತ್ರಪ್ತ
ನಗಬೇಕು ಮತ್ತೊಮ್ಮೆ ಹಳೆ ನಗು
ಜಗವೆದ್ದು ಕೂಗಲಿ ತ್ರಪ್ತ ಕೂಗು
ಇನ್ನು ನನಗದರದೆ ಕಾತರ.....
ದನಿ :: ದಿನು
No comments:
Post a Comment