ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Tuesday, April 29, 2008

ನೋವಿನೊಳೊಂದು ವಿನಂತಿ......


ನೋವಿನೊಳೊಂದು ವಿನಂತಿ......


ಅತ್ತು ಬಿಡು ಓ ಮನಸೇ

ಕನಸು ಮುಳುಗುವ ತನಕ

ಆರಿ ಹೋಗುವುದೆ ನೋಡು

ಹೊತ್ತಿ ಉರಿಯುವ ನೆನಪ


ಬತ್ತಿ ಹೋಗಲಿ ಒಮ್ಮೆ

ಉಕ್ಕಿ ಹರಿಯುವ ನೋವು

ಮತ್ತೆ ಬಾರದು ಬಾಷ್ಪ

ಇರಲಿ ಬೇಸಗೆ ಸ್ವಲ್ಪ


ಕತ್ತು ಹಿಸುಕಲೆ ನಿನ್ನ

ಮನ- ಒದ್ದೆಯಾಗುವ ಮುನ್ನ

ಮತ್ತೆ ಕಾಡದು ತಾನೆ

ಸತ್ತ ನಿನ್ನೆಯ ಬೇನೆ?


ಸಾಕು ನಿನ್ನದೀ ತಾಣ

ಕೊಟ್ಟು ಬಿಡು ಒಂದು ಕ್ಷಣ

ನಗಬೇಕು ನನಗೊಮ್ಮೆ

ಜಗನಕ್ಕು ಕುಣಿವನಕ......

ದನಿ : ದಿನು

1 comment:

Unknown said...
This comment has been removed by the author.