ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, March 11, 2010

ಮರೆತು ಬಿಟ್ಟ ಸತ್ಯವನ್ನು ಹುಡುಕ ಹೊರಟು......?


(ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಖಾಯಂ ಕಾಲಂ ಬರೆಯುತ್ತಿದ್ದ ಸಂದರ್ಭದಲ್ಲಿ ಬರೆದಿದ್ದ ಒಂದು ಬರಹ.....ಕಾಲಂ ಶೀರ್ಷಿಕೆ : ಸಿಂಗಲ್ ವಿಷ್ಯ)
ದಿನಾಲೂ ಬದುಕಿನ ಕನ್ನಡಿ ಮುಂದೆ ನಿಂತಾಗಲೆಲ್ಲಾ ಮತ್ತದುವೇ ಪ್ರತಿಬಿಂಬ ನಮ್ಮನ್ನು ಅಣಕಿಸುತ್ತೆ. ಹಳೆಯ ನೆನಪುಗಳೇ ಮತ್ಯ್ಯಾಕೆ ಕಾಡುತ್ತವೆ ಎಂಬ ಪ್ರಶ್ನೆ ಪ್ರತಿದಿನವೂ ಕಾಡುತ್ತದೆಯಾದರೂ ಉತ್ತರ ಸಿಗೊಲ್ಲ. ಎಷ್ಟೋ ಅಗೋಚರ ಎಂಬಂತಿರುವ ಬದಲಾವಣಿ. ಮೂಲ ಅಸ್ಥಿಪಂಜರ ಮಾತ್ರ ಅದುವೇ. ಹೊರಗೆಲ್ಲ ಬಗೆ ಬಗೆಯ ಹೊದಿಕೆಗಳು. ಬೆಳಿಗ್ಗೆ ಎದ್ದು ಕಣ್ತೆರೆದ ಗಳಿಗೆಯಿಂದಲೂ ಹುಡುಕುತ್ತೇವೆ. ಅದೇ ರಾತ್ರಿ ಬಂದಾಗ ನಾಳೆ.....ಗಾಗಿ ಮುಂದೂಡಿ ಕಣ್ಮುಚ್ಚಿ ಮಲಗುತ್ತೇವೆ. ಅದುವೇ ಸತ್ಯವನ್ನು......

ಮರೆತು ಬಿಟ್ಟ ಸತ್ಯಕ್ಕಾಗಿ ಪ್ರತಿ ದಿನವೂ ಒಂದು ಗಳಿಗೆಯನ್ನಾದರೂ ವ್ಯಯಿಸಿಯೇ ವ್ಯಯಿಸುತ್ತೇವೆ. ಪ್ರತಿ ಬಾರಿ ವ್ಯಯಿಸಿದಾಗಲೂ waste ಅನ್ನಿಸುವ ಬದಲು ನಾಳೆಗಾದರೂ ಉತ್ತರ ಸಿಗುತ್ತೆ ಅನ್ನುವ ಆಶಾಭಾವ ತಾಳುತ್ತೇವೆ. ಆಗೆಲ್ಲಾ ನೆನಪಾಗುವಂತದ್ದು, ಛೀ! ನೀನು ಯಾಕಾದ್ರೂ ಹುಟ್ಟಿದ್ದಿ ಎಂಬ ಅಮ್ಮನ ಮೂದಲಿಕೆ, ನೆನಗೆ ನನ್ನ ಭಾವನೆಗಳೇ ಅರ್ಥವಾಗೊಲ್ಲ ನೀನು light ಕಂಬ ಎಂಬ ಸಂಗಾತಿಯ ಗೋಗೆರತ, ನಿನಗೆ sentiment ಅನ್ನೋದೇ ಇಲ್ಲ ಎನ್ನುವ ಸ್ನೇಹಿತರ ಮಾತು, ನೀನು sensitive ಆಗಿದ್ದು ಹೆಚ್ಚಾಯ್ತು ಎನ್ನುವ ಹತ್ತಿರದವರ ಬುದ್ದಿವಾದ, you should concentrate on your studies ಎಂಬ ಗುರುಗಳ ಗಂಭೀರ ಮಾತು, ಕೇವಲ ಕಡ್ಡಿ, ಪೆನ್ನು, ಪೆನ್ಸಿಲಿಗಾಗಿ ಜಗಳವಾಡುತ್ತಿದ್ದ ಗಳಿಗೆಗಳು........ಹೀಗೆ ಯಾವುದೋ ಒಂದು ಸ್ಥಿತಿಯತ್ತ ಮನಸು ವಾಲುತ್ತೆ. ಆಗ ನಾವ್ಯಕೆ ಎಲ್ಲರೂ ಆಗೊಲ್ಲ ಎನ್ನುವ ಮೂರ್ಖ ಪ್ರಶ್ನೆ ಕಾಡುತ್ತೆ. ಯಕಶ್ಚಿತ್ ದೇಹದಲ್ಲಿರುವ ಐರು ಬೆರಳುಗಳೇ ಸರಿಯಿಲ್ಲದಿರುವಾಗ ಯಾಕಾದ್ರೂ ಇಷ್ಟು ದೊಡ್ಡ ಯೋಚನೆ ಮಾಡುತ್ತೇವೆ ಅನ್ನಿಸುತ್ತೆ. ಆದರೂ ನಾವ್ಯಕೆ ಒಮ್ಮೆಲೇ ಭಾವನೆಗಳಲ್ಲಾದರೂ ಪ್ರೈಮರಿ ಶಾಲೆ ಮೇಷ್ಟ್ರು, ಎಲ್ಲರಿಗೊಪ್ಪುವ ಸ್ನೇಹಿತ, ಸಂಗಾತಿಗೊಪ್ಪುವ ಪ್ರೀಯತಮ, ಗುರುಗಳಿಗೊಪ್ಪುವ ವಿದ್ಯಾರ್ಥಿ, ಸಮಾಜಕ್ಕೊಪ್ಪುವ ವ್ಯಕ್ತಿಯಾಗಿ ಬಿಡೊಲ್ಲ ಅನ್ನಿಸುತ್ತೆ. ಇದು ಅಸಾದ್ಯವಲ್ಲ!!. ನಮ್ಮ ಭಾವನೆಗಳಿಗೋಸ್ಕರ ನಾವು ಬದುಕುವುದನ್ನು ಬಿಟ್ಟು ಬಿಡುವಂತವರಾಗಬೇಕು. Some what flexible ಎಂಬಂತಹ ಬದುಕು ಇದ್ದಾಗ ಎಲ್ಲವೂ ಒಮ್ಮೆಲೆ ಆಗೋಕೆ ಸಾಧ್ಯ!.

ಹೀಗಾಗಿ ಬದುಕು ಸುಂದರವಾಗಬೇಕಾದರೆ ನಮ್ಮ ನಡವಳಿಕೆಗಳ ಉತ್ಖನನ ದಿನವೂ ನಡೆಯಬೇಕು. ಆಗ ಸಿಗುವ ಅಮೂಲ್ಯ ವಸ್ತುಗಳನ್ನು ಭವಿಷ್ಯಕ್ಕಾಗಿ ಶೇಖರಿಸುವಂತವರಾಗಬೇಕು. ನಾವ್ಯಾವ ರೀತಿಯಲ್ಲಿ ಯೋಚಿಸಿದರೂ ಎಲ್ಲೋ ಒಂದೆಡೆ ನಮ್ಮದೇ ನೆಲೆಯಲ್ಲಿ ಯೋಚಿಸುತ್ತೇವಲ್ವಾ...ಅದು ದೊಡ್ಡ ತಪ್ಪು. ನಾವು ಏಕ ವ್ಯಕ್ತಿಗಳಾಗಿ ಒಂದೇ ಭಾವನೆಗಳಡಿ ಬಿದ್ದು ಬಿಡುತ್ತೇವಲ್ವಾ..ಅದುವೇ ನಮ್ಮನ್ನು ಎಲ್ಲರೂ ಆಗೋಕೆ ಬಿಡದಿರುವ ಅಂಶ. ಎಲ್ಲವನ್ನು ಮರೆತು ಬಿಟ್ಟವರಂತೆ, ಎಲ್ಲವನ್ನು ಪಡೆಯಬೇಕೆಂಬುವವರಂತೆ, ಎಲ್ಲದಕ್ಕೂ ಸ್ಪಂದಿಸುವವರಂತೆ, ಎಲ್ಲರನ್ನೂ ಮಾತನಾಡಿಸುವವರಂತೆ, ಎಲ್ಲ ಅಭಿಪ್ರಾಯಗಳನ್ನು ಮನ್ನಿಸುವಂತೆ ಒಂದೈದು ದಿನ ಇದ್ದು ಬಿಡೋಣ.... ಆಗ ನಾವು ನಾವಾಗಿರುವ ಬದಲು ಅವರಾಗಿ ಬಿಟ್ಟಿರುತ್ತೇವೆ ಅನ್ಸುತ್ತೆ ಅಲ್ವಾ?!. ಅದರಲ್ಲಿ ಏನೋ ಖುಷಿಯಿದೆ. ಸ್ವಂತಿಕೆಗೆ ಬೆಲೆಯಿದೆಯಾದರೂ ಅದರಲ್ಲಿ ಅಭಿಮಾನವಿದೆ. ಅಭಿಮಾನದ ಪ್ರಶ್ನೆ ಬಂದಾಗ ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಡುತ್ತೆ. ಆಗ ಒಂಥರಾ ನಿರ್ಬಂದ ಮನಸನ್ನು ತಟ್ಟುತ್ತೆ. ಆದರೆ ಎಲ್ಲವನ್ನು ಸ್ಥಿತಪ್ರಜ್ನರಾಗಿ ಸ್ವೀಕರಿಸಿದರೆ ....ಎಲ್ಲವೂ ಹೊಸದಾಗುವ ಬದಲು ಬರಿ ಬದಲಾವಣಿ ಅನ್ನಿಸುತ್ತೆ ಅಷ್ಟೆ. ಆದರೆ ಪ್ರತಿ ಬಾರಿ ನಾವು ಅವರಾಗಿ ಯೋಚಿಸುವಾಗ ಒಂದು ಮಾತು...ಅದು dependency ಆಗಬಾರದು. ಬದಲಾಗಿ ನಾವೇ ಸಂಪೂರ್ಣ ಅವರಾಗಿ ಬಿಡುವಂತದ್ದು. ಎಲ್ಲವನ್ನು, ಎಲ್ಲರನ್ನು ಒಂದೆಡೆ ಸೇರಿಸಿ ಬಿಡುತ್ತೆ. ಆಗ ನಾನು ಏಕಾಂಗಿ ಅನ್ನಿಸೋದೆ ಇಲ್ಲ. ಒಮ್ಮೆ ಒಂದಾಗಿದ್ದ ಸ್ಥಿತಿ ಇನ್ನೊಮ್ಮೆ ಇನ್ನೊಂದಾಗಿರುತ್ತೆ. ಒಂಥರಾ ಶೀಘ್ರ ಬದಲಾವಣಿ...!. ಹೀಗೆ ನಮ್ಮ ಬದಲಾವಣಿಗಳನ್ನು ನಾವೇ ನಿರ್ಮಿಸಿಕೊಂಡಾಗ ಪ್ರತಿಕ್ಷಣದ ಪರಿವರ್ತಕರು ನಾವೇ ಅನ್ನಿಸುವಷ್ಟು ನಿರಾಳತೆ. ಅಲ್ಲಿಯೂ ಅಸ್ಪಷ್ಟ ಕಾಡಿದರೆ ನಾವ್ಯಾಕೆ ಎಲ್ಲರ್ ಅಗೊಲ್ಲ ಎಂಬ ಪ್ರಶ್ನೆ ಬದಿಗಿಟ್ಟು ಕಡೇ ಪಕ್ಷ ನಾವು ನಾವಾಗಿಯಾದರೂ ಬದುಕುವಷ್ಟು ಸಹನಶೀಲರಾಗೋಣ ಅನ್ನಿಸುತ್ತೆ ಅಲ್ವಾ?...
nimma
dinu




2 comments:

Anantharama said...
This comment has been removed by the author.
Anantharama said...

Every individual is unique in this world, But tries to copy one another so they loose" avarathana".

naavu nammathana vannu ulisikondaaga bereyavaru nammalli nammathanavannu kaanuththaare...

time sikre ond kannada dictionary kalsi kodi kaaamba..