(ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಖಾಯಂ ಕಾಲಂ ಬರೆಯುತ್ತಿದ್ದ ಸಂದರ್ಭದಲ್ಲಿ ಬರೆದಿದ್ದ ಒಂದು ಬರಹ.....ಕಾಲಂ ಶೀರ್ಷಿಕೆ : ಸಿಂಗಲ್ ವಿಷ್ಯ)
ಅದು ಹೊಸ ಮನೆಯ ಪ್ರವೇಶಕ್ಕಾಗಿ ಕಾದಿದ್ದ ರಾತ್ರಿ......
ಕತ್ತಲಿಗೆ ಸವಾಲಾಗುವಂತಿದ್ದ ಬೆಳಕು, ಬೇರೆ ಬೇರೆ ಕಡೆಗಳಲ್ಲಿ ವ್ಯತ್ಯಾಸ ಗುರುತಿಸುವಂತಿದ್ದ ಕಾರ್ಯಗಳು, ನೂರಕ್ಕೂ ಅಧಿಕ ಜನ. ಆ ಸಂದರ್ಭದ ಖುಷಿಯಲ್ಲಿ ಯಾವುದೋ ಅವ್ಯಕ್ತ ಅನುಭವ ಅನುಭವಿಸುತ್ತಿರುವವರ ಒಂದು ಗುಂಪು. ಆ ರಾತ್ರಿ ನಾನು ಅಲ್ಲಿದ್ದ ಹೆಚ್ಚಿನ ಹೊತ್ತು ಆ ವ್ಯಕ್ತಿ ಕುಣಿಯುತ್ತಲೇ ಇದ್ದ!. ಅದು ಅವನ ಕಲ್ಪನೆ.....ಒಂಟಿ ಕಾಲು ಮೇಲೆತ್ತಿದರೆ ಇನ್ನೊಂದರಲ್ಲಿ ನಿಲ್ಲುವ ಸ್ಥಿತಿಯಲ್ಲಿ ಅವನಿರಲಿಲ್ಲ. ಬಾಯಿ ತೊದಲುತ್ತಿತ್ತು. ಅವನದೇ ಸಿಳ್ಳೆ, ತೊದಲುವ ಯಾವ್ಯಾವುದೋ ಪ್ರೇರಕ ಮಾತುಗಳು, ಜೊತೆಗೆ ಹಿಮ್ಮೇಳ.....ಹೀಗೆ ಅವನದೇ ಆದ ವಾತಾವರಣ. ಕೈಯಲ್ಲೊಂದೊ ಕೊಳಲು...ಸುತ್ತ ಮುತ್ತ ಪೈಬರ್ ಕುರ್ಚಿ ಬಳಸಿ ಕುಳಿತ್ತಿದ್ದ ಜನ....ಒಮ್ಮೊಮ್ಮೆ ಬಳುಕುತ್ತಾ ನಮಸ್ಕಾರ ಮಾಡುತ್ತಿದ್ದ. ತನ್ನ ದೇಹದ ನಿಯಂತ್ರಣವಿಲ್ಲದ ಸ್ಥಿತಿಯಲ್ಲೂ ದೇಹದ ಮೇಲ್ಭಾಗ ಕುಣಿಸುತ್ತಿದ್ದ....ಜೊತೆಗೆ ಕಾಲು ಸಹ ಕುಣಿಯುತ್ತಿದೆ ಎಂಬ ಭ್ರಮೆಯಲ್ಲಿದ್ದ!.....
ನನಗಾಗ ಪ್ರಶ್ನೆಯಾದದ್ದು ಅವನ ಸ್ಥಿತಿಯನ್ನು ನೋಡಿ ಅದರಲ್ಲೇ ಸಂತೋಷ ಪಡುವ ಜನರ ಮನಸ್ಥಿತಿ. ಅವನನ್ನು ಆ ಸ್ಥಿತಿಗೆ ತಳ್ಳಿದ ವಸ್ತುವನ್ನೇ ಮತ್ತೆ ಮತ್ತೆ ನೀಡಿ ಕುಣಿಯಲು encouragement ಬೇರೆ! ಅವನ ಕುಣಿತಕ್ಕೆ, ಅವನ ಹಿಮ್ಮೇಳಕ್ಕೆ, ಅವನ ಕೊಳಲಿನಿಂದ ಹೊರಡುವ ಸ್ವರಕ್ಕೆ....ಅದರದ್ದೇ ಆದ ಲಯವಿದೆ. ಅವನು ಸರಿಯಾದ ರೀತಿಯಲ್ಲಿ ಕುಣಿದರೆ ಅದಕ್ಕೆ ಅದರದ್ದೆ ಆದ ಸೌಂದರ್ಯವಿದೆ. ದೇಹದ ಹಿಡಿತವಿಲ್ಲದಿದ್ದರೂ ಕೊಳಲಿನ ದನಿಗೆ ಹಿಡಿತವಿದೆ. ಆದರೆ......ಸ್ವರವನ್ನು, ಪ್ರತಿಭೆಯನ್ನು, ಸಂಪ್ರದಾಯವನ್ನು ಜನರು ಬಳಸಿಕೊಳ್ಳುವ ರೀತಿ, ಅದಕ್ಕೆ ಒದ್ದಿಕೊಂಡಿರುವ ಅವನ ಮನಸ್ಸು, ಕಲೆಗಾಗಿ ಮದ್ಯವನ್ನು ಮಾತ್ರ ಕೇಳುವ ಮನ:ಸ್ಥಿತಿ ಬೆಳೆಸಿಕೊಂಡ ಅವನ ಸಂಕುಚಿತ ಭಾವ...ಎಲ್ಲವೂ ನನಗೆ ಈ ಶತಮಾನದ ಸವಾಲುಗಳೆನಿಸುವಷ್ಟು ದೊಡ್ಡದಾಗಿ ಕಂಡವು. ಆದರೆ ಸತ್ಯ ಕೊಳಲಿಗೆ ಮಾತ್ರ ತಿಳಿದಿತ್ತು!. ಅವನು ಕುಣಿಯುವಾಗ ಕೊಳಲು ಅಳುತ್ತಿತ್ತು....!
ಅದೇನೆ ಇರಲಿ....ಕೆಲವು ಸಂಪ್ರದಾಯವನ್ನು ಬದುಕಿನ ಗಳಿಕೆಗಾಗಿ ಬಳಸಿಕೊಳ್ಳುತ್ತಿರುವ ಒಂದು ವರ್ಗ ಇನ್ನೂ ಆ ಹಳೆಯ ಮಾಮೂಲು ಮದ್ಯದ ಗುಂಗಿನಿಂದ ಹೊರಬರದಿರುವಂತದ್ದು ಅವರನ್ನು ಹೊಸ ಬೆಳವಣಿಗೆಯಿಂದ ದೂರವಿಟ್ಟಿದೆ. ಇದಕ್ಕೆ ಅನ್ಯರನ್ನು ದೂರುವ ಹಾಗಿಲ್ಲ. ಅವರಲ್ಲಿ ಕೇಳಿದರೂ, ಮಧ್ಯ ಕುಡಿದರಷ್ಟೆ ಕುಣಿಯಲು ಹುಮ್ಮಸ್ಸು ಬರುತ್ತೆ ಎನ್ನುವ ಉತ್ತರ ಸಿಗುತ್ತೆ. ಆದರೂ...ವಾಸ್ತವವಾಗಿ ವಿಚಾರಿಸಬೇಕಾದ ಅಂಶವೆಂದರೆ, ಇನ್ನೊಬ್ಬರ ದೌರ್ಬಲ್ಯಗಳನ್ನು ಮನರಂಜನೆಯ ಮೂಲವಾಗಿ ಬಳಸಿಕೊಳ್ಳುವ ಜನರ ಮನ:ಸ್ಥಿತಿ. ಅನ್ಯರು ತೊಂದರೆಗೊಳಗಾದಾಗ ಪಡುವ ತೊಳಲಾಟ, ಅನಿರೀಕ್ಷಿತ ಕೆಲವೊಂದು ವಿಚಾರಗಳಿಂದ ಮಾನಸಿಕ ಹಿಡಿತ ಕಳೆದುಕೊಳ್ಳುವ ಸ್ಥಿತಿಗಳನ್ನು ನೋಡುತ್ತಾ ನಗುವ ಜನರನ್ನು ಕಂಡಾಗ, ಸಂತಸ ಪಡಲು ಇದು ಒಂದು ಮಾರ್ಗವೇ? ಎನಿಸದಿರದು. ಯಾವ ನೈತಿಕ ನೆಲೆಯ ಸಂಪ್ರದಾಯವಿದು? ಅನ್ನಿಸದಿರದು. ಇದು ನಮ್ಮದೇ ಪ್ರಶ್ನೆ....ಉತ್ತರಿಸಬೇಕಾದವರೂ ನಾವೇ...! ಹಾದಿ ತಪ್ಪಿ, ಬದುಕಿನ ಬಗೆಗೆ ಸ್ಪಷ್ಟ ಕಲ್ಪನೆಯಿಲ್ಲದೆ, ತಾವು ಅನುಭವಿಸುತ್ತಿರುವ ಅಮಲು ಸುಖವೇ ಅಂತಿಮ ಎಂದರಿತ ಜನತೆಗೆ ಬುದ್ದಿ ಹೇಳಬೇಕಾದ ಅಗತ್ಯತೆ ನಮ್ಮ ಮುಂದಿದೆ. ಕುಡಿದ ಅಮಲಿನಲ್ಲಿ ಎಲ್ಲವನ್ನು ಮಾಡುತ್ತಾರೆಂಬ ಬರವಸೆಯಲ್ಲಿ, ಅದನ್ನೇ ಮಜಾ ಮಾಡುವ ಮಾರ್ಗವಾಗಿ ಬಳಸಿಕೊಳ್ಳುವುದನ್ನು atleast for humanity ಬಿಡುವಂತವರಾಗಬೇಕು. ನಮ್ಮ ದೌರ್ಬಲ್ಯಗಳನ್ನು ನಾವೇ ವ್ಯಂಗ್ಯದ ಮೂಲವಾಗಿಸಿಕೊಂಡಲ್ಲಿ ಮನುಷ್ಯ ಅನ್ನಿಸಿಕೊಳ್ಳುವುದಾದರೂ ಹೇಗೆ?. ಹೀಗಾಗಿ ಯಾವುದೋ ಒಂದು ಕಲ್ಪನೆಯಲ್ಲಿ ಎಡವಿದ ವರ್ಗವನ್ನು ಬುದ್ದಿ ಹೇಳಿ ಎಚ್ಚರಿಸಬೇಕಾದ್ದು, ಕಡೇ ಪಕ್ಷ ಪ್ರಯತ್ನಿಸಬೇಕಾದ್ದು ಮನುಷ್ಯತ್ವ ಅನ್ನಿಸೊಲ್ವಾ ಹೇಳಿ?...
ನಿಮ್ಮ,
ದಿನು
(ಚಿತ್ರ ಮೂಲ: ಗೂಗಲ್)
4 comments:
"ನಮ್ಮ ದೌರ್ಬಲ್ಯಗಳನ್ನು ನಾವೇ ವ್ಯಂಗ್ಯದ ಮೂಲವಾಗಿಸಿಕೊಂಡಲ್ಲಿ ಮನುಷ್ಯ ಅನ್ನಿಸಿಕೊಳ್ಳುವುದಾದರೂ ಹೇಗೆ"
It has taken me too far to think further..nice article. I think education,environment makes difference
"ನಮ್ಮ ದೌರ್ಬಲ್ಯಗಳನ್ನು ನಾವೇ ವ್ಯಂಗ್ಯದ ಮೂಲವಾಗಿಸಿಕೊಂಡಲ್ಲಿ ಮನುಷ್ಯ ಅನ್ನಿಸಿಕೊಳ್ಳುವುದಾದರೂ ಹೇಗೆ"
It has taken me too far to think further..nice article. I think education,environment makes difference
Very nice...!! hats-off to ur thought process..!!
keep going:)
chinni
Too good:)
Post a Comment