ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, August 28, 2008

ನನ್ನದೆನ್ನುವ ಭರದಲ್ಲಿ.........


ನನ್ನದೆನ್ನುವ ಭರದಲ್ಲಿ.........


ಕಳೆದುಹೋದ ಮುದ್ದುಮುಖ
ಬೈಗುಳ ತಿಂದ ಚೆಂಡಿನಾಟ
ಸುಸ್ತೇ ಗೊತ್ತಾಗಿರದ ರಗೋಲಿ
ತುಂತುರು ಮಳೆಯ ಮಂಥನ
ಗೊತ್ತು ಗೊತ್ತೇ ಆಗದ ಹೊತ್ತಿನಾಟ
ಎಲ್ಲರೊಳಗೊಂದು ಎಳೆಬಿಸಿಲ ಉತ್ಸಾಹ.....

ಕಳೆದುಕೊಂಡ ರಂಗೋಲಿ ಹೊಳಪು
ಬೆಂಬಲದ ಸಲುಗೆ ಜೊತೆ ಬೆಸುಗೆ
ತನ್ನದೆನ್ನುವ ಭರವಿಲ್ಲ,ಸ್ವ- ನನದಲ್ಲ!
ನಾಳಿನೊಳು ಅರಿವಿರದ,
ಇಂದಿನೊಳು ಬಿಡುವಿರದ
ವಿಶ್ರಾಂತ,ವಿಪ್ಲವ ಭಾವ.........

ಮುದ್ದು ಮuಖವೇರಿದ ಹುಲ್ಲು
ಗರಿಗೆದರಿದ ಭಾವ.,ಸ್ಥಳ ನಿರೀಕ್ಶೆ
ರಾಗ-ವೈರಾಗ,ಸತ್ಯ-ಅಸತ್ಯ
ಗೊಂದಲದ ಬಿಂಬವಿರೆ,ಶೂನ್ಯ
ಸ್ವ-ಪ್ರತಿಷ್ಟೆಯ ಪ್ರತಿಬಿಂಬ
ಸ್ವಾತಂತ್ರ್ಯ.....ಬಂದನ?????

ಒಳಿತಿನೊಳು ಬಲವಿಲ್ಲ
ಬಲವಿರೆ ಒಳಿತಿಲ್ಲ
ವರ್ತಮಾನದ ಮೊತ್ತ,ಗಣಿಸಿಲ್ಲ
ಕಾಲದೊಳು ಪಡೆದಂತೆ....
ಗಣಿಕೆಯೊಳು........
ಬದುಕೊಂದು ವ್ಯವಕಲನ.........

ದಿನು

ಮನದನ್ನೆ.......


ಮನದನ್ನೆ.......


ಮೌನದೊಳಗಡೆ ಮಾತನಾಡುವ
ಭಾವ ಬಂದುವೇ ಸ್ವಾಗತ
ಪ್ರೇಮ ವೀಣಿಯ ಮೀಟ ಬಯಸುವ
ಹಗಲು ಕನಸಿಗೆ ಸ್ವಾಗತ
ಮನದ ಗೋಡೆಯ ಕೆದಕಿ ಕೇಳುವ
ಮೋಹ ದರ್ಪಕೆ ಸ್ವಾಗತ
ಬಂಧ ಭಾವದ ಬಂದಿಯೊಂದಿಗೆ
ಸುಪ್ತ ಸರಸಕೆ ಸ್ವಾಗತ...

ಅರಿತು ಅರಿಯದೆ ಕಳೆವ ದಿನದಲಿ
ಹುಚ್ಚು ಮನಸಿನ ಕಚಗುಳಿ
ನಮ್ಮದೆನ್ನುವ ಸ್ವಪ್ನ ಲೋಕಕೆ
ನಿನ್ನ ಕನಸೇ ಬಳುವಳಿ
ಮ್ರದುಲ ಸ್ಪರ್ಶ,ತಪ್ತ ಮೌನ
ಪ್ರೇಮ-ಕಾಮದ ಓಕುಳಿ

ಬೆಳೆವ ಸೂರ್ಯ,ಮರಳೊ ಚಂದ್ರ
ಬೀಸೊ ಗಾಳಿಯ ರಿಂಗಣ
ಎಲ್ಲಿ ಹೋದೆ, ಯಾವ ಬೀದಿಗೆ
ನಿಲ್ಲ ಬಯಸಲೆ ಕಂಪನ?
ಬಂದೆ ಬರುವೆ ಭಾವ ಮಡಿಲಿಗೆ
ಇರಲಿ ಕಲ್ಪನೆ,ಜೊತೆ ಚುಂಬನ......

ನಿನ್ನ,ದಿನು

Monday, August 11, 2008

ಹೆಣ್ಣು ಸಲಿಲ......

ಹೆಣ್ಣು ಸಲಿಲ......

ಗುಡಿ ಗರ್ಭದ ಸೊಗಸಲ್ಲಿ
ಬದುಕ ಮೂಲದ ಬೆಳಕು
ತೊಡೆವುಸಿರ ಸೊಬಗಲ್ಲಿ
ಸುಪ್ತ ಪರಿಧಿಯ ಹೊಸಕು,
ಜಡ ಮೂಲಕೆ ಬಲವಾಗು
ಬೆಳವಣಿಗೆಯ ಉಸಿರಾಗು
ಕೊಡು ಜೀವ,ಅದೇ ಭಾವ
ಹೆಣ್ಣೀ ನೀನಾಗು ಮಾತಾ.........

ನುಡಿಗಳಿಗೆ ಅಡಿಯಾಗು
ಗುಡಿಸಲಿನ ನಗೆಯಾಗು
ಬೆರಳ ಸಂಧಿನ ಗೆರೆಯ
ಇತಿಹಾಸ ನಿನದಾಯ್ತು!!
ಬಿದ್ದ ಕ್ಷ್ಣಣದಲಿ ಎದ್ದು
ಮುದ್ದಿನ ನೆನಪಾಯ್ತು
ಏಳಬಯಸುವ ಮೊಳಕೆ
ಕೈಯೆತ್ತು ಒಮ್ಮೆ ಪಕ್ಕ
ಹೆಣ್ಣೀ ನೀನಾಗು ಅಕ್ಕ.........

ಎದ್ದಿರುವ ಉಸುಕಲ್ಲಿ
ಮೆದ್ದಬಯಸುವ ಭಾವ
ಗಂಭೀರ ಸೆಲೆಯಲ್ಲಿ
ಜೀವ-ಸತ್ಯ ಮೇವ!
ಬಂದೊಮ್ಮೆ ಅಪ್ಪಿಬಿಡು
ಕಣ್ಮುಚ್ಚಿ ಓಡಿಬಿಡು
ಉಸಿರ ನೆಲೆ ಬದಿಗಿಟ್ಟು
ಕೆಳಮಾಡೊ ಒಳ ಅಂಗಿ
ಹೆಣ್ಣೀ ನೀನಾಗು ತಂಗಿ..........
ಇರುಳ ಕನಸು,ಹಗಲ ಕಸುವು
ಮುಕ್ತ ಭಾವಕೆ ತತ್ವ
ಇದ್ದ ಭಕ್ತಿಗೆ ಸತ್ವ.....
ಕನಸ ಕಚಗುಳಿ
ಹೊಸತೆನ್ನುವ ಜಗಕೆ
ತುಂತುರು ಮಳೆ
ಹರಿದಂತೆ ಹರಿವ
ಬೆರೆತಂತೆ ಬೆರೆವ
ಇಲ್ಲದಿರೆ ಇನ್ನಿಲ್ಲ
ವ್ಯಕ್ತವಾಕ್ಯವು ಸಲ್ಲ
ಬಿಟ್ಟ ಮನಸಿನ ಕೆಳದಿ
ಹೆಣ್ಣೀ ನೀನಾಗು ಮಡದಿ.........
ಗುಂಗುರು ಕೂದಲ ಗೆರೆ
ಸಂಧಿಯೊಳಗೆ ಕನಸ ಸೆರೆ
ನಡೆಯೋ ಹೆಜ್ಜೆಯ ಗಣನೆ
ತಿಳಿ ಹೇಳಲೊಲ್ಲದ ಕಲ್ಪನೆ
ಬಿಟ್ಟರೂ ಬಿಡಲಾಗದ ಸ್ಥಿತಿ
ಹೆಣ್ಣೀ ನೀನಾಗು ಗೆಳತಿ..........
ಅದೆ ನೋಡು ಹೆಣ್ಣು ನೀ ಸಲಿಲ
ಬಂಧನದ ಗೂಡೊಳಗೆ ತಳಮಳ
ಹೊದ್ದುಬಿಡು ನಿನ್ನ ಅಕ್ಕರೆಯ ಹೊದಿಕೆ
ನಿನ್ನದೀ ಧರೆ,ಯಾಕಿಷ್ಟು ಹೋಲಿಕೆ?
ನಿನ್ನಿರುಳ ಗರ್ಭದಲಿ ನನ್ನೀ ಹೊಂದಿಕೆ....

ದಿನು

ವರ್ಷ ಸ್ಪಂದನ...


ವರ್ಷ ಸ್ಪಂದನ...

ಮಳೆಯೆಂದರೆ......
ಬೆವೆತುಸಿರಿಗೆ ಸಿಂಚನ
ಸಂಧಿಯೊಳಗಿನ ರಿಂಗಣ
ಭಾವದ ಹನಿ ಚಿಲಿ ಪಿಲಿ
ಗಬ್ಬೆದ್ದ ಸ್ತರಕೆ ಮೋಕ್ಷ
ಕನಸು ಕಾಯಕದ ಮೊಳಕೆ
ಕಾಲ ಚಕ್ರದ ಗಾಲಿ
ಮಿಂಚಿನೊಳಗಿನ ತಂಪುಹಾಡು
ಕವಿಯಕ್ಷರ- ಪಗಡೆ
ಪ್ರೇಮದೊಳು ತುಸು ತಿಲ್ಲಾನ
ನಿರ್ಲಿಪ್ತತತೆಗೆ ಕಾಲ ಬದಲಾವಣಿ!!!!

ಮಳೆಯಿಂದ...........
ನೆಲ-ಬಾಳು ಹಸಿರಾಯ್ತು,
ಸೋರಿನೊಳು ನಗು ಉಕ್ಕಿ
ಹೊರದೇಹ ತಂಪಾಯ್ತು,ಕಣ್ಣು ಕೆಂಪಾಯ್ತು
ಹೊರಸೂಸೊ ಹನಿಹನಿ,
ಮನದೊಳು ಇಬ್ಬನಿ
ಮಂದಿಯೊಳು ಚಡಪಡಿಕೆ,ಇನ್ನೆಲ್ಲೋ ಗುದ್ದಾಟ
ಕುಸಿದ ಸೌಧ,ಮುಳುಗೊ ದೇಹದ ಬಯಕೆ
ಜರಿಸಾರಿ,ನಿಲುವಂಗಿ;ಮಡಚಿಟ್ಟ ಪುಸ್ತಕ
ಬದುಕಿನೊಳು ಭಾವ,ಭಾವ ಬದುಕಲ್ಲ
ಕಿಂಡಿಯೊಳಗಿನ ಹನಿ ಕೂಡ ದೊಡ್ಡ ಹಳ್ಳ!!!

ಓ ಮಳೆಯೇ.....
ಹೊಯ್ದು ಬಿಡು ಕೊಳೆತೊಳೆಯೇ..
ನೀನಾಗು ಕೈ ನೀಡೊ ಕರಸಿಂಚನ
ಕೊಳೆಯ ಮೂಲ ತಲುಪಲಿ ನೀರಬಳುಕು
ಬೆವೆತ ದೇಹದ ಉಸಿರಾಗು
ಕನಸ ಬೆಳೆಯುವ ಮನದ ಕಸುವಾಗು
ಹುಯ್ಯೋ ಹುಯ್ದು ಬಿಡು
ಕಣ್ಣೀರು ಕಾಣದಷ್ಟು
ಇತಿಹಾಸ ಉಳಿಯದಷ್ಟು!?

ರಚನೆ: ದಿನು

Friday, August 8, 2008

ನೆನಪಾಗುತಿದೆ.......


ನೆನಪಾಗುತಿದೆ.......


ಅದೇ ಹಳೆರಸ್ತೆಯ ಗುಳಿಹಾಡು
ಕೆನ್ನೆ ಮುದ್ದಿಸುತಿದ್ದ ಕೈಗಳು
ಮಣ್ಣ ಮದ್ಯೆ ರಂಗಾಗುತಿದ್ದ ಬಿಳಿಅಂಗಿ
ಕೆಂಪು ರಿಬ್ಬನ್ ಮದ್ಯೆ ತೇಲುತಿದ್ದ ಜುಟ್ಟು
ಒಂಟಿ ಕೊಡೆಯಡಿಯ ಮೈಶಾಖ
ಸಂತೆಯಿಂದ ಅಪ್ಪ ತರುತಿದ್ದ ಕಡಲೆ
ನಗು ತರಿಸುತಿದ್ದ ತೆರೆದ ಚಡ್ಡಿ
ಕೈಚುಚ್ಚಿ ಓಡುತಿದ್ದ ಮುದ್ದು ಹುಡುಗಿ
ಗಂಜಿ ನಡುವಿನ ಅನ್ನದಗಳು
ಮೊದಲ ಜಾತ್ರೆಯ ತೊಟ್ಟಿಲಾಟ
ತೊದಲು ತೊದಲಿ ಗೆದ್ದ ಆಶುಭಾಷಣ
ಸ್ವಾತಂತ್ರ್ಯ ದಿನ ಸಿಗುತಿದ್ದ ಮುಷ್ಟಿಯಷ್ಟು ಸಿಹಿ
ಅಮ್ಮನ ಕೈಗಿಟ್ಟು ಕುಣಿದ ಬಹುಮಾನದ ಲೋಟ
ಹಾಡಲೆತ್ನಿಸಿ ನಕ್ಕ ಮುಗ್ದ ದನಿ
ಪುಸ್ತಕದಡಿ ಇತಿಹಾಸವಾದ ಪ್ರೇಮಪತ್ರ
ಪುಟಗಳ ನಡುವಿರುತಿದ್ದ ನವಿಲುಗರಿ
ಅಳಿದಿಳಿದ ಅಜ್ಜನಂಗಡಿಯ ಶುಂಠಿ ಚಾಕಲೇಟ್
ಕಳೆದಂತೆ ಮಳೆಯಾದ ಕಣ್ಣೀರು
ನೋವಲ್ಲಿ ನಲಿವಾಗುತಿದ್ದ ಅಪ್ಪನಪ್ಪುಗೆ
ಚಕ್ರಕ್ಕೆ ಕಲ್ಲಿಡುತಿದ್ದ ದೀಪಾಲಿ ಬಸ್ಸು
ಚಿಕ್ಕಪ್ಪ ತಂದಿಟ್ಟ ಮೊದಲ ಪ್ಯಾಂಟು
ಪೇಪರ್ ನಲ್ಲಿ ಮೂಡಿದ್ದ ಕಪ್ಪು-ಬಿಳುಪು ಪೋಟೊ
ಎಲ್ಲವೂ ನೆನಪಾಗುತಿದೆ................................
ಬದುಕು ಸತ್ವ ಪಡೆದಂತೆ.ಎಲ್ಲೊ ಕಳೆದಂತೆ
ಇತಿಹಾಸ ಬದುಕಾಗಿ,ಬದುಕು ಇತಿಹಾಸವಾದಂತೆ
ಕನಸು ನನಸಾಗಿ ಇನ್ನೆಲ್ಲೋ ಸವಿದಂತೆ
ಸತ್ಯ,ಕಹಿಸತ್ಯ....ಬದುಕು ಬರಿ ನೆನಪ ಕಂತೆ....?
ರಚನೆ: ದಿನು
ಅರ್ಪಣಿ: ಬಾಲ್ಯ ಬದುಕಾದ ಎಲ್ಲ ಮನಸುಗಳಿಗೆ......

ಒಂದರೊಳಗೊಂದು........


ಒಂದರೊಳಗೊಂದು........


ಮುಸ್ಟಿಯೊಳಗಿನ ಮರಳು
ಬಿಟ್ಟ ಗಳಿಗೆ.......
ಅಂಟಿದ ಅವಶೇಸ
ತಿಳಿ ಹೇಳುವ ಗತ ಕರ್ತ್ಯ

ಮುಸ್ಟಿಯೊಳಗಿನ ನೀರು
ಬಿಟ್ಟ ಗಳಿಗೆ......
ಸ್ವಾನುಭವದ ಛಾಯೆ
ಅಗಮ್ಯ ಅವಶೇಸ
ಅನುಭವದೊಳಿತು ಗತಕರ್ತ್ಯ..

ಪ್ರೀತಿ ಮರಳು....ಬಿಡಲೊಲ್ಲದು
ಕಳೆದ ಮನಸಿಗೆ...
ಪ್ರಕರ ಭಾವದ ಶೇಸ
ಹೊರಕಾಣುವ ಬಿಂಬ
ಭಾವ ಪ್ರತಿಬಿಂಬ
ಜಗ ನೋಡುವ ಹೊಳಪು....

ಸ್ನೇಹ ನೀರು....ಬಿಡಲೊಲ್ಲದು
ಮಂದ ಭಾವದ ಶೇಸ..
ಹೊರಕಾಣದು ಜಗಕೆ
ಅನುಭವವಿರೆ ಮನಕೆ
ಬಿಟ್ಟರು ಬಿಡಲಾಗದ ಹೊದಿಕೆ...

ದಿನು

Thursday, August 7, 2008

ಯಾಕೆ ಗೆಳತಿ....??


ಯಾಕೆ ಗೆಳತಿ....??

ಒಂದು ಮಾತು ಹೇಳಲಿಲ್ಲ
ಬಿದ್ದ ದನಿಯು ಗೊತ್ತೇ ಇಲ್ಲ
ಕಸುವು ಕದಡಿ,ಸ್ವಪ್ನ ಭಾವ
ಯಾಕೆ ಗೆಳತಿ ಮಾತೇ ಇಲ್ಲ??

ಸ್ನೇಹ ಎಂಬ ಚಿತ್ತಾರಕೆ
ಬಣ್ಣ ಬಳಿದು ರೂಪ ಕೊಟ್ಟೇ
ಬಣ್ಣ ಕದಡಿ ರೂಪ ಬದಲು
ಕರೆದರೆಷ್ಟು?? ಭಾವ ತೊದಲು!!!

ಗೀಚಿ ಹೋದ ಪದಗಳೆಷ್ಟೋ
ಹರಟೆ ಮಾತ ದ್ವಂದ್ವವೆಷ್ಟೋ
ಸ್ನೇಹದೊಲುಮೆ ನಿನದೆ ಗಾನ
ರಾಗ ಸುಳಿಯೇ ನೀನೇ ಮೌನ!!

ದೂರವಾಣಿ ದೂರವಾಯ್ತು
ಪತ್ರ ಕೂಡ ಕಾಣದಾಯ್ತು
ನೆನಪು ನೂರು, ನೋವು ಜೋರು
ಎಲ್ಲೋ ಸೆಳೆತ,ಅದುವೆ ಮಿಳಿತ

ಒಟ್ಟು ತಿಂದ ಮಂಚೂರಿ
ನೀನೆ ಇರದ ಮನಸ ಉರಿ,
yaake, ಏನು...ಪ್ರಶ್ನೆ ಹೇಗೆ??
ಮಾತೇ ಇರದಿರಲದೆಂತು ಹಗೆ??

ನೋಡಬೇಕು ನಿನ್ನ ಒಮ್ಮೆ
ಬೈಯಬೇಕು ಹೀಗೆ ಸುಮ್ನೆ
ಏನೇ ಇರಲಿ ಬದುಕ ಸ್ಪುರಣ
ಹೇಳಿ ಹೋಗು ವಿದಾಯ ಕಾರಣ??
dinu

Thursday, May 29, 2008

ನೀನೊಮ್ಮೆ.....


ನೀನೊಮ್ಮೆ.....


ಇವಳೆನ್ನ ಮನದಾಕೆ,ಹಸಿ ಮರಳ ಸುರಿದಾಳ

ನಸುನಗುತ ನಿಂತವಗೆ ಹುಸಿಕೋಪ...!

ಕದತಟ್ಟಿ ಕರೆವಾಕೆ,ಮನಮುಟ್ಟಿ ನಿಂತಾಳ

ತುಸುನಗುತ ಬಂದವಗೆ ಬಿಸಿ ಶಾಖ...

ಗಲ್ಲಾನ ಹಿಡಿದಾಕೆ,ಕಲ್ಲಾಗಿ ನಿಂತಾಳ

ಕಸುವರಿತು ಬಂದವಗೆ ಕಹಿಯೂಟ...

ಮನಸನ್ನ ಕೊಟ್ಟಾಕೆ,ಮನೆಯೊಳಗೆ ಅತ್ತಾಳ

ಕನಸರಿತು ಇದ್ದವಗೆ,ಮುಂಗೋಪ...

ಕರೆದಾಗ ಬಂದಾಕೆ,ನಡುಕಟ್ಟಿ ಕುಂತಾಳ

ನಡೆಯರಿತ ನಂಬಿಕೆಗೆ ಹಿಡಿಶಾಪ..!


ಇವಳೆನ್ನ...........

nakkante ಅಳುತಾಳ,ಅತ್ತಂತೆ ನಗುತಾಳ

ಕೈಬೀಸಿ ಕರೆದವಗೆ ಆಘಾತ...

ತುಸು ನೋಡಿ ನಡೆದಾಳ,ಕಸಬುರುಕೆ ತಂದಾಳ

ಖುಸಿ ನೋಟ ಬೀರಿದವಗೆ ಸಂಕೋಚ

ಕನಸಲ್ಲೆ ನಡುಗ್ಯಾಳ,ಹೊಸ ಆಸೆ ಹೊತ್ತಾಳ

ಸಿಹಿ ನೆನಪ ಕೊಟ್ಟವಗೆ ಹುಡಿಕನಸು

ಇರುವಲ್ಲೆ ಮರಿತಾಳ,ಹೋದಲ್ಲೆ ನಲಿತಾಳ

ಮನೆ ಆಸೆ ಕಂಡವಗೆ ಆಲಾಪ

ಓಡೋಡಿ ಬರುತಾಳ,ಹೊಸ ಆಶೆ ತರುತಾಳ

ನಿನ್ನೆಯಲಿ ಇದ್ದವಗೆ ಹೊಸನೋಟ

ಏನೆಲ್ಲಾ ಮಾಡ್ಯಾಳ,ಸರಿಯೆಂದು ಕುಳಿತಾಳ

ಮನಬಿಚ್ಚಿ ಕುಂತವಗೆ ಕಾರ್ನೊಟ


ಇವಳೆನ್ನ..........

ಏನಾದ್ರೆ ಏನಾಯ್ತು,ನೀನೆನ್ನ ಮನದನ್ನೆ

ಕಣ್ಮುಚ್ಚಿ ಬಾ ಒಮ್ಮೆ ಕೆನ್ನೆ ಕೊಟ್ಟು..

ಏನಿದ್ದರೆನಂತೆ,ಇದ್ದದ್ದೆ ಈ ಸಂತೆ...

ಬಳಿ ಬಂದು ನಿಂತು ಬಿಡು ಮನಸ ಇಟ್ಟು

ನೀನಂತು ನನ ಕಂದ,ಎಷ್ಟಿದ್ದರೇನಂತೆ..

ಕೊಟ್ಟುಬಿಡು ನೀನೊಮ್ಮೆ ಬಾಹುಬಂಧ..

ಮರೆತಿಡು ಹಿಡಿಕೋಪ,ಬಾ ಒಮ್ಮೆ ಮನದನ್ನೆ

ರಾಶಿಯೊಳು ಆಡೋಣ ಬದುಕಿನಾಟ........

ಮನದಿನಿಯ,ದಿನು

Tuesday, April 29, 2008

ಅಂತಿಮ ಗಳಿಗೆ....



ಅಂತಿಮ ಗಳಿಗೆ....


ನೀನಿರಲು.......


ಒಂದಿರುಳ ಮೌನ


ತುಸುನಕ್ಕ ಮಾತು


ಒಳಕರೆಯ ದನಿ


ನಸುಗೆಂಪ ನಗು


ಬಡಿದೆದ್ದ ಹಸಿಕನಸು


ಕರೆದಳುವ ಹುಸಿ ಕೋಪ


ಅಪ್ಪುಗೆಯ ದ್ವಂದ್ವ


ಮಾತು ತಪ್ಪದ ನಲ್ಮೆ


ಬರೆದದ್ದೇ ಬರಹ


ಮಡಿಲಿದ್ದ ಮನಸು


ಮಾತಾದ ಬದುಕು


ಕಸುವಾದ ನೆನಪು!


ಕೊನೆಗೊಮ್ಮೇ..........


ಮರಳುಗಾಡಿನ ಶೋಭೆ


ಬೆಂಕಿಯೊಳಗಿನ ಸೌಂದರ್ಯ


ಮರೆಯೇ ಯತ್ನ ಸಾಲದು


ಬತ್ತಿರೆ...ಬಯಕೆ ತೀರದು!


ಹುಡುಕೆ ಕಸರತ್ತಿನೊಳು


ಅಪ್ಪಿದ ನಿನ ನೆರಳು


ತಪ್ತ ಮೌನ,ಸಾರ್ಥಕ ಭಾವ!!??


ದನಿ,ದಿನು

ನೋವಿನೊಳೊಂದು ವಿನಂತಿ......


ನೋವಿನೊಳೊಂದು ವಿನಂತಿ......


ಅತ್ತು ಬಿಡು ಓ ಮನಸೇ

ಕನಸು ಮುಳುಗುವ ತನಕ

ಆರಿ ಹೋಗುವುದೆ ನೋಡು

ಹೊತ್ತಿ ಉರಿಯುವ ನೆನಪ


ಬತ್ತಿ ಹೋಗಲಿ ಒಮ್ಮೆ

ಉಕ್ಕಿ ಹರಿಯುವ ನೋವು

ಮತ್ತೆ ಬಾರದು ಬಾಷ್ಪ

ಇರಲಿ ಬೇಸಗೆ ಸ್ವಲ್ಪ


ಕತ್ತು ಹಿಸುಕಲೆ ನಿನ್ನ

ಮನ- ಒದ್ದೆಯಾಗುವ ಮುನ್ನ

ಮತ್ತೆ ಕಾಡದು ತಾನೆ

ಸತ್ತ ನಿನ್ನೆಯ ಬೇನೆ?


ಸಾಕು ನಿನ್ನದೀ ತಾಣ

ಕೊಟ್ಟು ಬಿಡು ಒಂದು ಕ್ಷಣ

ನಗಬೇಕು ನನಗೊಮ್ಮೆ

ಜಗನಕ್ಕು ಕುಣಿವನಕ......

ದನಿ : ದಿನು

Thursday, April 24, 2008

ನುಡಿಯಿಂದ ನುಡಿಗೆ............"

ನುಡಿಯಿಂದ ನುಡಿಗೆ............"ಮಾಮ ಮಾಮ,ಇವತ್ತು ಸ್ಕೂಲಿನಲ್ಲಿ ಸಂಗೀತ ಕುರ್ಚಿ ಇತ್ತು, ಛೀ ನಾನು ಇಬ್ರು ಬಾಕಿ ಇರೊವಾಗ out ಆಗ್ಬಿಟ್ಟೆ ಗೊತ್ತಾ?,ನಿನ್ನ ಪುಟ್ಟಿ good girl ಅಲ್ವಾ?,ಹಾ ಅದಿರ್ಲಿ,ಮಾಮ ನೀನು ಬೆಂಗೂರಿಗೆ ಹೋಗ್ತಿಯಂತೆ..........ಮೋಸ ಅಲ್ವ ಮಾಮ, ನನ್ನನ್ನ ಬಿಟ್ಟು ಹೋಗೊದಾ? ನೀನು ಹೋದ್ರೆ ನಾನು ಮತ್ತೆ ಯಾರ ಜೊತೆ ಊಟ ಮಾಡ್ಲಿ........", ಅದಾಗ ತಾನೆ ಕಾಲೇಜಿನಿಂದ ಬಂದು ಮನೆಯ ಹೊರಗಡೆ ಕಾಲು ಚಾಚಿ ಕುಳಿತಿದ್ದ ನನ್ನ ತೊಡೆಯ ಮೇಲೆ ಓಡೋಡಿ ಬಂದು, ಪುಟಪುಟನೆ ಮಾತನಾಡುತ್ತ ನನ್ನ ತೊಡೆಗಳ ಸಂದಿನ ಮ್ರದುತಲ್ಪದಲ್ಲಿ "Please ಹೋಗ್ಬೇಡಿ ಮಾಮ॥" ಎನ್ನುತಿದ್ದ ಪುಟ್ಟಿಯ ತೊದಲು ನುಡಿಗಳು ಕಣ್ಣನ್ನು ಆದ್ರಗೊಳಿಸಿದ್ದವು। ಕೂಡಲೆ ಕಿಸೆಯಲ್ಲಿದ್ದ ಚಾಕಲೇಟನ್ನು ಅವಳ ಕೈಗಿಟ್ಟೆ...... ಅದನ್ನ ಬಿಡಿಸುವ ಭರದಲ್ಲಿ ಹೊಸ ಲೋಕ ಹುಡುಕಿದಂತೆ ಒದ್ದಾಡುತಿದ್ದ ಪೆದ್ದು ಮುಖ ನೋಡಿ, ಸಿಪ್ಪೆ ತೆಗೆದು ಬಾಯಿಗಿಟ್ಟೆ...ಕೂಡಲೇ ಅದೇನನ್ನೊ ನನ್ನ ಕಿವಿಯಲ್ಲಿ ಉಸುರಿ, ಅಮ್ಮ ಬೈತಾರೆ ಮಾಮ ಎಂದವಳೆ ಮನೆಯತ್ತ ಓಡತೊಡಗಿದಳು.......

ಹಾ , ಪುಟ್ಟಿ ನನ್ನ ಮುಗ್ದ ಮನಸಿನ ,ಭಾವುಕ ಜಗತ್ತಿನ ಒಂದು ಭಾಗವಾಗಿ ಅದೆಷ್ಟೋ ದಿನಗಳೇ ಕಳೆದಿದ್ದವು। ಎಂಟು ವರ್ಷದ ಮುದ್ದು ಹುದುಗಿ। ಅವಳು ಓಡಾಡುತಿದ್ದರೆ ಪೂರ್ವ ಪಶ್ಚಿಮ ಎನ್ನುತಿದ್ದ ಎರಡು ತಲೆಯ ಜುಟ್ಟು ದನಿಯಾಗುತಿತ್ತು!। ನಿಲ್ಲದ ಉತ್ಶಾಹ, ಓಡೋಡಿಕೊಂಡಿರುತಿದ್ದ ಜೀವ। ಎಷ್ಟೋ ಸಂದರ್ಭಗಳಲ್ಲಿ ಕೈಯರಡನ್ನ ಕೆನ್ನೆಗೆ ಅವುಚಿ ಕುಳಿತುಕೊಳ್ಳುತಿದ್ದ ಅವಳು ತತ್ವಜ್ನಾನಿಯಂತೆ ,ಕೋಪ ಬಂದಾಗ ಒಂದು ಬೆರಳನ್ನು ಮುಂದೆ ಚಾಚಿ ’ಮಾಮ ಟೂಟೂ॥’ ಎನ್ನುತಿದ್ದರೆ ಗಟ್ಟಿಗಳು ಎಂಬಂತೆ ಕಾಣುತಿತ್ತು। ನಾನೆಲ್ಲೋ ತಪ್ಪು ಮಾಡಿದಾಗ ಕೈಯನ್ನ ತುಟಿಗಳ ಮೇಲಿಟ್ಟು ಮನದೊಳಗೆ ನಗುತಿದ್ದ, ಕೊನೆಗೆ ಶೇಮ್ ಶೇಮ್ ಎನ್ನುವಾಗ ನನಗೆ ನನ್ನ ಪ್ರೈಮರಿ ಟೀಚರ್ ನೆನಪಾಗುತಿತ್ತು!!. ಅವಳೇನು ನನಗೆ ದೂರದವಳಲ್ಲ, ನಮ್ಮ ಮನೆಯಿಂದ ಒಂದೈದು ನಿಮಿಷದ ಕಾಲುದಾರಿ ಅವಳ ಗೂಡಿಗೆ......ನನ್ನ ದೊಡ್ಡಮ್ಮನ ಮಗಳ ಮಗಳೇ ಈ ಪುಟ್ಟಿ.

ಹಳ್ಳಿಯ ನಗೆ ಹಸುರಿನ ಮಡಿಲಲ್ಲಿ ನನ್ನ ಮನೆ. ಕಾಲು ಹೊರಚಾಚಿದರೆ ಒಂದೆರಡು ಗದ್ದೆ, ಪಕ್ಕದಲ್ಲೇ ಸಿಗುವ ಕೆರೆ, ಕೆರೆಯ ನೀರಿಗೆ ಮುತ್ತಿಕ್ಕಲೆಂಬಂತೆ ಮುಖಮಾಡಿ ಬಾಗಿದ ಮಾವಿನ ಮರ, ಉಪ್ಪಿನಕಾಯಿ ಮಾಡೊ ಸಮಯ ಬಂದಾಗ ಹಳ್ಳಿ ಊರಿನ ಗೆಳತಿ!. ಕೆರೆಯ ಮಗ್ಗುಲಲ್ಲೆ ಹಸಿರು ಹಾಸಿದ್ದ ನಮ್ಮ ತೋಟ. ಅಡಿಕೆ ಮರಗಳ ಸಂದುವಿನಲ್ಲೆ ಕಾಣಿಸುತಿದ್ದುದು ಪುಟ್ಟಿಯ ಮನೆಯಂತಿರುವ ಗೂಡು?!. ಪುಟ್ಟಿಯ ಅಮ್ಮ ಮತ್ತು ಅಜ್ಜಿಯ ದ್ರಷ್ಟಿಯಲ್ಲಿ ನಾನು ,ನಮ್ಮ ಮನೆ ದೂರದ ಶತ್ರು ದೇಶ....ಅದೊಂದು ಹಳೆಯ ಕತೆ. ಚಿಕ್ಕ ಪುಟ್ಟ ನೆವಗಳು ಸೇರಿ ಕೊನೆಗೊಮ್ಮೆ ಜಾಗದ ವಿಷಯ ಗೊಂದಲದ ಪರಾಕಾಷ್ಟೆ ತಲುಪಿ ಸಂಬಂಧಕಲಹ ದ್ವೇಷವಾಗಿತ್ತು............ಆಗ ನನಗಿನ್ನು ಹತ್ತು ವರ್ಷ. ಸಮಯ ಗೊಂದಲದ ಗೂಡಾಗಿತ್ತು, ಅಪ್ಪ ಆವಾಗಷ್ಟೆ ಮುಂದಾಗಿ ಹಣವನ್ನ ಜಾಗದ ವಾರಸುದಾರರ ಕೈಗಿಟ್ಟು ಮನೆಗೆ ಬಂದಿದ್ದರು, ಆದರೆ ಪಕ್ಕದ ಮನೆಯ ನನ್ನ ದೊಡ್ಡಮ್ಮನ ದನಿ ಪುಂಖಾನುಪುಂಖವಾಗಿ ಬೈಗುಳದ ಯಾದಿಯಲ್ಲಿ ನಮ್ಮೆಲ್ಲರ ಕಿವಿಯನ್ನ ತಟ್ಟುತಿತ್ತು, " ಆ ಸತ್ತವರಿಗೆ ಈ ಜಾಗನೆ ಬೇಕಿತ್ತಾ? ಸಾಯ್ಲಿಕ್ಕೆ ಬೇರೆ ಎಲ್ಲೂ ಜಾಗ ಸಿಗ್ಲೆ ಇಲ್ವಾ? ನಾವು ಎಷ್ಟು ವರ್ಷದಿಂದ ಬೇಕು ಅಂತ ಇಷ್ಟಪಟ್ಟ ಜಾಗ......ಅವುಗಳು ಅದನ್ನ ತೆಗೆದುಕೊಂಡು ಮನೆಕಟ್ಟಿದ್ರೆ ಕಂಡಿತಾ ಉದ್ದಾರ ಆಗಲ್ಲ...ನನ್ನ ಮನೆ ದೆವ್ರು ಅವ್ರನ್ನ ಸುಮ್ನೆ ಬಿಡಲ್ಲ.....ರಕ್ತ ಕಾರಿಸಿ ಕೊಲ್ಲಿಸುತ್ತೆ.........."ಮಾತು ಅನಾಗರಿಕ ಜಗತ್ತಿನತ್ತ ಹೊರಳಿತ್ತು. ನನಗಿನ್ನು ಸ್ಪಷ್ಟ ನೆನಪಿದೆ,ನನ್ನಮ್ಮ ಮಡಿಲ ಸೆರಗನ್ನು ಕಣ್ಣಿಗಿಟ್ಟು ಅಳುತಿದ್ದರು...ನಾನೇನೋ ಆಟವಾಡುತಿದ್ದವ ಹೆದರಿ ಅಕ್ಕನ ತೊಡೆಯಲ್ಲಿದ್ದೆ. ಆವಾಗ ನನಗಿನ್ನು ದ್ವೇಷದ ಪರಿವೆ ಇರಲಿಲ್ಲ. ಅದರ ತೀವ್ರತೆ ,ತ್ರಷೆಯ ಬಾವ ಎಲ್ಲವೂ ಅರ್ಥವಾಗತೊಡಗಿದ್ದು ನನ್ನ ಹಾಗು ಪುಟ್ಟಿಯ ಸಂಬಂಧದ ಮೇಲೂ ಅದರ ಪರಿದಿ ವಿಸ್ತರಿಸತೊಡಗಿದಾಗಲೇ....!

ಸಂಬಂದದ ಹಳಸಲು ಬದುಕ ಬಾವದೊಂದಿಗೆ ಮಿಳಿತಗೊಳ್ಳುತ್ತಿರುವಾಗಲೇ ಹುಟ್ಟಿದವಳು ಪುಟ್ಟಿ. ಹೊಸ ಪ್ರಪಂಚದ ಬಗೆಗೆ ಅರಿವಿರದ, ಮನೆಯವರ ಹಗೆಯ ಬಳುವಳಿ ಇರದ ಪುಟ್ಟ ಕೂಸು . ನಡೆದಾಡುವ ಪರಿ ಅರಿತವಳೇ ಕಂಡುಕೊಂಡದ್ದು ನನ್ನ ವಾತ್ಸಲ್ಯ......ಅದಕ್ಕೂ ಕಾರಣಗಳು ಇಲ್ಲದಿಲ್ಲ... ಅವಳ ಮನೆಯವರ ದಾಷ್ಟ್ಯವೇ ಪ್ರೀತಿಯನ್ನ ಪುಟ್ಟಿಯಾಗಿಸಿ ನನ್ನ ಭಾವ ಪ್ರಪಂಚಕ್ಕೆ ಬರಮಾಡಿಸಿತ್ತು. ಅದೇಕೊ ನಾನೆಂದರೆ ಪುಟ್ಟಿಗೆ ಪ್ರಾಣ, ಅಮ್ಮನ ಕಣ್ಣು ತಪ್ಪಿತೆಂದರೆ ಕ್ಷ್ಣಣ ಮಾತ್ರದಲ್ಲಿ ಪುಟ್ಟಿ ನನ್ನ ಎದೆಯ ಮೇಲಿರುತಿದ್ದಳು. ಆಗ ಯಾರ್ಯಾರ ನೆಪದಲ್ಲೊ ಅವಳಮ್ಮನ, ಇಲ್ಲವೇ ಅಜ್ಜಿಯ ಬೈಗುಳದ ಬಳುವಳಿ ಕಟ್ಟಿಟ್ಟದ್ದೆ!, ನಾನು ಮಗುವನ್ನು ವಶಮಾದಿಕೊಳ್ಳುತ್ತೇನೆಂದೋ, ಕೆಟ್ಟದನ್ನ ಹೇಳಿ ಕೊಡುತ್ತೇನೆಂದೋ...ಸಾವಿರ ಸಾವಿರ ಮಾತುಗಳು.ಕೆಲವೊಮ್ಮೇ ಪುಟ್ಟಿಯ ಊಟದ ಬಟ್ಟಲನ್ನು ಬಲವಾಗಿ ಕುಟ್ಟಿಟ್ಟು ಹೊಗುತ್ತಿದ್ದ ದನಿ ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ!. ಒಂದೈದು ವರ್ಷ ಕಳೆದು ಪುಟ್ಟಿ ಮಾತನಾಡಲು ಆರಂಬಿಸಿದ ಮೇಲಂತೂ ಯಾರ ಮಾತನ್ನೂ ಕೇಳಿದವಳಲ್ಲ......ನನಗೆ ರಜೆ ಇದ್ದ ದಿನವಂತೂ ಬೆಳಿಗ್ಗೆ ಹಾಜರು॥ಚಿಕ್ಕ ವಯಸ್ಸಿನಲ್ಲೇ ಅಷ್ಟು ಜವಾಬ್ದಾರಿ ಅವಳಿಗೆ!!. ನಾನು ಹೊಲಕ್ಕೆ ಕೋಣಗಳನ್ನ ಬಿಡುತ್ತಿರಬೇಕಾದರೆ ಓಡೋಡಿ ಬರುತಿದ್ದಳು. ಒಮ್ಮೊಮ್ಮೆ ಅವುಗಳಿಗೆ ಹೊಡೆದಾಗಲೆಲ್ಲ ,’ಅವುಗಳಿಗೆ ಮಾತೇ ಬರಲ್ಲ,ಮತ್ಯಾಕೆ ಹೊಡಿಯೊದು ಮಾಮ॥??? ’ಎನ್ನುತಿದ್ದ ಅವಳನ್ನ ಹಿಡಿದೆತ್ತಿ ಮುದ್ದಿಸುತಿದ್ದೆ. ಒಂದೆಡೆ ಇವಳ ಮುಗ್ದತೆ ಕಣ್ಣು ತೊಯಿಸುತಿದ್ದರೆ, ಅವಳಮ್ಮ ಅಜ್ಜಿಯೊಂದಿಗೆ ಸೇರಿ, ನಮ್ಮ ಮನೆಯ ಚಂದ್ರಿ ದನ ಗದ್ದೆಗೆ ಹೋಯಿತೆಂದೋ, ಕೋಳಿ ಬೀಜ ಹರಡಿತೆಂದೋ, ನಮ್ಮ ಹೊಲಕ್ಕೇ ಕೋಣ ಹೋಗೊವಾಗ ಅಂಚಿನ ಹುಲ್ಲನ್ನ ಮೇಯಿತೆಂದೋ..... ಸಹಸ್ರನಾಮಾರ್ಚನೆ ಆರಂಬಿಸುತಿದ್ದರು. ಆರಂಭದ ಗುಣುಗಾಟ ಜಗಳದ ರೂಪದಲ್ಲಿ ಸಮಾಪ್ತಿಯಾಗುತಿತ್ತು.ಆದರದು ಎಕಮುಖಿ....ಕೆಲವೊಮ್ಮೇ ಕಾರಣಗಲಿಲ್ಲದೆ ಜಗಳ!........ಪುಟ್ಟಿ ನನ್ನೊಂದಿಗೆ ಅಟವಾಡುತ್ತ್ತ್ತಚೀರಾಡಿದನ್ನ ಕೇಳಿಸಿಕೊಂಡರಂತೂ, ಭರಭರನೆ ಓಡಿ ಬಂದು ಮಗುವನ್ನ ನನ್ನ ಕೈತಪ್ಪಿಸಿ ಎಳೆದುಕೊಂಡು ಹೋಗುತ್ತಿದ್ದ ಅವಳಮ್ಮನ ಬಳೆಯ ಸದ್ದು ಬೆಂಗಳೂರಿಗೆ ಕೆಲವೇ ದಿನದಲ್ಲಿ ಹೊರಟು ನಿಂತಿದ್ದ ನನ್ನ ಕಿವಿಗೆ ಅಪ್ಪಳಿಸುತಿತ್ತು. ಉತ್ತರ ಸಿಗದ ಹಗೆಯ ಬಗೆಗಾಗಿ ಓಡಿ ಹೋಗಿ ಅಮ್ಮನ ಮಡಿಲಲ್ಲಿ ಮಲಗಿದ್ದೆ. ಮತ್ತೆ ದಿನಗಳು ಮಳೆಯಾಗಿ ಕಳೆದಿದ್ದವು.....

ಆ ದಿನ ಮನೆಯಿಂದ ಕೆಲಸ ಹುಡುಕ ಹೊರಟವನು ಹಲವು ಬಾರಿ ಊರಿಗೆ ಬಂದಿದ್ದೆನಾದರೂ ಪುಟ್ಟಿ ನೋಡಸಿಕ್ಕಿದ್ದು ಕಡಿಮೆ. ಅದೊಂದು ಬಾರಿ ಊರಿಗೆ ಬಂದವ ಮನೆಯಾಚಿನ ಕೆರೆಯ ದಡದಲ್ಲಿ ಕುಳಿತು, ಸೂರ್ಯ ಕಿರಣಗಳ ಬಿಸಿಯಪ್ಪುಗೆಯಲ್ಲಿ ನಿರೀಕ್ಷೆಯ ಕೊಡ ಹಿಡಿದು ಕುಳಿತಿದ್ದೆ. ಪಟ್ಟಣದ ಬದುಕಿನ ಅಯ್ಯೋ ಎನ್ನೋ ಉಸಿರಿನ ನಡುವೆ ಇದ್ದು ಬಂದವನಿಗೆ, ಹಸಿರು ಗಾಳಿ ಬೀಸುತ್ತಿರಬೇಕಾದರೆ ಉಸಿರು ನನ್ನದೇ ಅನ್ನಿಸುತಿತ್ತು!! . ತಂಪಾದ ಗಾಳಿ ಕೂಡ ಪುಟ್ಟಿಯ ನಿರೀಕ್ಷೆಯಲ್ಲಿ ಬಿಸಿಯಾಗಿತ್ತು. ಸೂರ್ಯ ಇವತ್ತು ಯಾಕಿಷ್ಟು ಕೆಂಪು ಅನ್ನಿಸುವಂತಿದ್ದ. ಒಂದಂತೂ ಸ್ಪಷ್ಟವಾಗಿತ್ತು......ನನ್ನ ಹಾಗು ಪುಟ್ಟಿಯ ಸಂಬಂದದ ಎಳೆಗಳ ಮೇಲೆ ಅದಾಗಲೇ ಅವಳಮ್ಮನ ಒತ್ತಡ ಬಿದ್ದಿತ್ತು. ಚಿಕ್ಕವಳಿದ್ದಾಗ ಓಡಿ ಬರುತಿದ್ದ ನನ್ನ ಪುಟ್ಟಿಗೆ ಪ್ರಾಯ ಬಂದನವಾಗಿದ್ದು ವಾಸ್ತವದ ಬಿಂಬವಾಗಿತ್ತು. ಕಲೆರಹಿತ ಸಂಬಂದ ತೊಳಲಾಟದ ಬಿಂದುವಾಗಿತ್ತು. ಆಗಷ್ಟೇ ಸರಿದ ಹಲಸಿನ ಮರದ ಎಲೆಯ ನಡುವೆ ಕಪ್ಪು ಬಣ್ಣದ ಚೂಡಿ ಧರಿಸಿ ಮನೆಯೆದುರು ಕಸ ಗುಡಿಸುತಿದ್ದ ನನ್ನ ಪುಟ್ಟಿ ಕಣ್ಣಿಗೆ ಬೀಳುತ್ತಿರುವಾಗಲೆ ಎದ್ದು ನಿಂತಿದ್ದೆ. ಎಷ್ಟು ಬದಲಾವಣಿ!!!. ನನ್ನನ್ನೇ ಇಣುಕಿ ನೋಡಿದ ಅವಳ ಕೈಗಳ ಚಲನೆ ಕಮ್ಮಿಯಾಗಿತ್ತು. ಮುಂದಡಿ ಇಟ್ಟ ನನ್ನನ್ನು ನೋಡಿದವಳೇ ಮನೆಯೊಳಗೆ ಓಡಿದ್ದಳು. ಒಂದೆರಡು ನಿಮಿಷ ಗದ್ಗತಿತನಾಗಿ ನಿಂತಿದ್ದೆ. ದೇಹ ಹಿಂದಡಿ ಇಡಬೇಕಾದರೆ ಮನಸು ಅವಳ ಮನೆಯತ್ತ ಕೊನೆಯ ದ್ರಷ್ಟಿ ಹಾಯಿಸಿತ್ತು. ಒಳ ಓಡಿದ ಪುಟ್ಟಿ ಕಿಟಕಿಯ ತುಕ್ಕು ಹಿಡಿದ ಸರಳುಗಳಿಗೆ ಕೈಮುಗಿದು ನನ್ನನ್ನು ಒಂದೇ ಸವನೆ ನೋಡುತಿದ್ದರೆ; ಅದೇ ಮುದ್ದು ಮುಖ, ದಣಿವಾಗದ ಕಣ್ಣು॥ ಪ್ರಾಯಕ್ಕೇನೋ ಎಂಬಂತೆ ಬದಲಾದ ಚರ್ಯೆ......ಕಣ್ಣೀರಿನ ಒಂದು ಹನಿ ಹೆಪ್ಪುಗಟ್ಟಿ ಬೀಳಲೆತ್ನಿಸಿದ್ದು ನನ್ನ ಬಧುಕಿಗೆ ಹೊಸ ಬಾಷ್ಯೆ ಬರೆದಿತ್ತು, ಉತ್ತರ ಮಾತ್ರ ಒಗಟಾಗಿತ್ತು........?,ಸರಸರನೆ ಬಂದವನೆ ಭಾರದ ಮನಸಿನಲ್ಲಿ ಅಮ್ಮನ ಕೈಯೂಟ ಉಣಲಾಗದೆ ದಿಂಬಿಗೆ ತಲೆಯೊಡ್ಡಿದ್ದೆ. ಮತ್ತೆರಡು ದಿನದಲ್ಲಿ ಬೆಂಗಳೂರಿಗೆ ಹೊರಟು ನಿಂತಿದ್ದೆ.

ಕಾಲ ಮತೈದು ಮಳೆ ಕಂಡಿದೆ. ಬಾವುಕ ಬಂಧವನ್ನ ಬಿಡಿಸಿದ ಪುಟ್ಟಿಯ ಅಜ್ಜಿ ಕಲೆಯಿಟ್ಟು ಸತ್ತಿದ್ದರೆ, ಅಮ್ಮ ಇನ್ನೂ ಗಟ್ಟಿಯಾಗಿದ್ದಾರೆ !!. ವಾತ್ಸಲ್ಯದ ಬದುಕಿನ ಕಿರಣಗಳು ಬದುಕಿನ ಬಹು ದೊಡ್ಡ ಬದಲಾವಣಿಗಳನ್ನು ಹಂಚಿಕೊಳ್ಳಲಾರದಷ್ಟು ದೂರಾಗಿದೆ. ನನಗೋ ಮದುವೆ ಆಗಿ ಮಗಳು ಕ್ಷಿಪ್ರ ಪ್ರೀತಿ ರುಜುವಾತು ಮಾಡಿದ್ದರೆ, ಪುಟ್ಟಿ ಸಹ ಮದುವೆಯಾಗಿದ್ದಾಳೆ ಎಂಬ ಸುದ್ದಿ ನಾಲ್ಕು ವರ್ಷಗಳ ಹಿಂದೆಯೇ ನನ್ನ ಕಿವಿ ಮುಟ್ಟಿತ್ತು. ಆದರೂ ಮತ್ತೆ ಮನೆ ಕಡೆ ಹೊರಟ ಹುಚ್ಚು ಮನಸು ಪುಟ್ಟಿಯೊಂದಿಗೆ ಮಾತನಾಡಿ ಕಾರಣ ಕೇಳಬೇಕೆಂದು ಬಯಸಿತ್ತು. ಈ ಬಾರಿ ಒಂದು ವಾರದ ರಜೆ ಹಾಕಿ ಊರ ಕಡೆ ಹೆಜ್ಜೆ ಹಾಕಿದ್ದೆ. ಕ್ಷಿಪ್ರ ಮುದ್ದು ಮುದ್ದಾಗಿ ಪೆದ್ದು ಪೆದ್ದು ಚಟುವಟಿಕೆ ನಡೆಸುತಿದ್ದರೆ ನನಗೆ ಪುಟ್ಟಿಯೊಂದಿಗಿನ ಇತಿಹಾಸ ಮರುಕಳಿಸುತಿತ್ತು. ಪುಟ್ಟಿಯ ಮುದ್ದು ಪ್ರಶ್ನೆಗಳಿಗಾಗಿ ಕ್ಷಿಪ್ರಳ ತೊದಲು ನುಡಿಯನ್ನ ನಿರೀಕ್ಷಿಸುತಿದ್ದೆ !. ತೋಳಿಗೆ ಒರಗಿದ ಮಡದಿ, ಎದೆ ಪರಚುತ್ತಿರುವ ಕ್ಷಿಪ್ರ....ಒಳ ಭಾರ ಕಡಿಮೆಯಾದಂತೆ ಭಾಸವಾಗುತಿತ್ತು !. ಅದಾಗಲೆ ಮನೆ ಸೇರಿ ಎರಡು ದಿನ ಕಳೆದಿತ್ತು. ಪುಟ್ಟಿಯ ಮನೆ ಕಡೆ ಮುಖ ಮಾಡುವ ದೈರ್ಯ ಕೂಡ ಇರಲಿಲ್ಲ. ಮನೆಯ ಅಂಗಣದಲ್ಲಿ ವಾಲು ಕುರ್ಚಿಗೆ ಭಾರವೆಂಬಂತೆ ಕುಳಿತಿದ್ದ ನನಗೆ ’...ಅಮ್ಮ.......;ಎಂಬ ಕ್ಷಿಪ್ರಳ ದ್ವನಿ ಕೇಳಿದೊಡನೆ ತೊಡೆಗೆ ಒರಗಿದ್ದ ಅರ್ದಾಂಗಿಯನ್ನ ಬದಿ ಸರಿಸಿ ದನಿಯ ದಿಸೆಯತ್ತ ಓಡಿದ್ದೆ. ಒಮ್ಮೆ ಶೂನ್ಯ ಭಾವ.....ಕ್ಷಿಪ್ರಳೊಂದಿಗೆ ಆಟವಾದುತಿದ್ದ ಹೆಸರಿಲ್ಲದ ಮಗುವನ್ನು ಪುಟ್ಟಿ ಕೈತಪ್ಪಿಸುತಿದ್ದರೆ ನಾನು ಪುಟ್ಟಿಯನ್ನೇ ನೋಡುವ, ದೂರದ ತೀರಕ್ಕೆ ಕಾರಣ ಹುಡುಕುವ ತವಕದಲ್ಲಿದ್ದೆ ?! ’ಪ್ರೀತಿ......’ ಎಂಬ ದನಿ ಅವಳ ಅಮ್ಮನ ಬಾಯಿಂದ ಬರುತ್ತಲೇ ಕೈಬಿಡಿಸಿ ಹೊರಟ ಪುಟ್ಟಿಯನ್ನೊಮ್ಮೆ ದಿಟ್ಟಿಸಿ ನೋಡತೊಡಗಿದೆ. ಅವಳ ತುಟಿಯ ಅಲುಗಾಟ ನನ್ನ ಪ್ರಶ್ನೆಗೆ ಉತ್ತರವಾಗಿತ್ತು. ಅದುರಿದ ಅಲುಗಾಟ ಬದುಕಿನ ನುಡಿಯಿಂದ ನುಡಿಗೆ....ಅನುರಣನವಾಗಿ ಹಗೆ ಪಸರಿದ ಬಗೆಯ ದನಿಯಾಗಿತ್ತು. ಅಲ್ಲಿಯೆ ಕುಸಿದಿದ್ದ ನನಗೆ ಕ್ಷಿಪ್ರಳ ಬಿಗಿಯಪ್ಪುಗೆ ಆದರವಾಗಿತ್ತು!!!!






ನಗಬೇಕು ಮತ್ತೊಮ್ಮೆ......



{ಕಳೆದ ಬಾಲ್ಯದ ನಗುವನ್ನು ನೆನೆದು.............. }
ನಗಬೇಕು ಮತ್ತೊಮ್ಮೆ......

ಅಂದೊಮ್ಮೆ ನಕ್ಕಿದ್ದೆ.....
ಸಂತಸದ ಸೋನೆ
ಮನ ಬಿಚ್ಚಿ ಒಸರಿತ್ತು
ತನಗರಿಯೆ ತಾನೆ

ನಯನದೊಳು ನಲಿವಿತ್ತು
ಮೌನದೊಳು ಸೊಗಸಿತ್ತು
ಬೀಸೊ ಗಾಳಿಯು ಕೂಡ
ನಸುಗಂಪ ತರಿಸಿತ್ತು

ಕಳೆದ ನಿನ್ನೆಯ ಶೂನ್ಯ
ತೊದಲು ಬಾವದಿ ಅನನ್ಯ
ನಾಳೆ ಎಂಬುದ ಕಾಣಿ
ಬರಿ ಬಿಚ್ಚು ಮನಸಿನ ವೀಣೆ

ಮೈಗೆ ಸ್ಪರ್ಶವು ಸಾಕು
ಕಿಂಡಿ ಬೆಳಕಿಗು ತಳಕು
ಶಬ್ದ ಸರಿದರು ಸೆಳೆತ
ಖಾಲಿ ನಗುವಿನ ಕುಣಿತ

ನಿನ್ನೆ ಮತ್ತೆ ನಕ್ಕಿದ್ದೆ....
ಅದೆ ಜೀವ ಬದಲಾದ ಬಾವ!
ಅವರು ನಕ್ಕರು,ನಾನು ನಕ್ಕೆ
ಕುಣಿದಿಲ್ಲ ಮನ,ನಾನರಿಯೆ ಕಾವ

ಮೌನದೊಳು ಗುಣಿತ ; ವ್ಯವಕಲನ
ಮಾತಿನೊಳು ಕಾಗುಣಿತ ; ಸಂಕಲನ
ಮುಖ ನಗುತಿರೆ, ಮನದವಸರ
ಕಾರ್ಯ ಮುಗಿಸಿದ ಬಾವ: ಅತ್ರಪ್ತ

ನಗಬೇಕು ಮತ್ತೊಮ್ಮೆ ಹಳೆ ನಗು
ಜಗವೆದ್ದು ಕೂಗಲಿ ತ್ರಪ್ತ ಕೂಗು
ಅದರ ಚೆಲ್ಲಲಿ ಹಾಲಿನಿಂಚರ
ಇನ್ನು ನನಗದರದೆ ಕಾತರ.....

ದನಿ :: ದಿನು

Wednesday, April 23, 2008

ಆತ್ಮ ನೀ ಮಾತಾಡು..!

[ಕನಸು ಕೈಗಿಟ್ಟು ,ನೆನಪುಗಳನ್ನ ಮನಸಿಗಿಟ್ಟು , ಬೌತಿಕವಾಗಿ ಮರೆಯಾದ ತಂದೆಯವರ ನೆನಪಿಗೆ.....]
ಆತ್ಮ ನೀ ಮಾತಾಡು!
ಹೆಗಲಂಚಿನ ಆ ಸ್ಪರ್ಶ
ಬೆರಳು ಸಂದಿಯ ಇತಿಹಾಸ
ಒಂದಿನಿತು ಅರ್ಥವಾಗುತ್ತಿಲ್ಲ
ಮಾತಾಡು ಆತ್ಮವೆ ಮೌನ ಏಕೆ?

ಹುಸಿಗೋಪದರ್ಥ ಅರಿವಾಯ್ತು
ತುಸುಗೆಂಪ ಸಿಟ್ಟು ತಿಳಿದೋಯ್ತು
ಎಂತು ಸಾಂತ್ವನಗೈದಿರಿ ಕಷ್ಟದಲೆಗೆ
ಬಾಳಿ ತೋರಿದಿರಿ ಬದುಕ ದೀವಿಗೆ

ತಂಗಾಳಿ ಬಿಸಿಯಾಗೆ,ಬದುಕು ಉಬ್ಬು
ನೀವಿಲ್ಲದಿಲ್ಲ ದ್ರಡತೆ,ತಬ್ಬಿಬ್ಬು
ಅಂದು ಬೈದವರಲ್ಲ,ಇಂದು ಮಾತೇ ಇಲ್ಲ
ಮೌನದೊಳು ಅಷ್ಟು ಸುಖ ಸಲ್ಲ !

ನಾ ಕಳೆದದ್ದು ಎರಡು,ಇನ್ನರ್ದ ದಶಕ
ಹೇಗೆ ಬದುಕಿದಿರಿ ನೀವಷ್ಟು ಸಾರ್ಥಕ
ಗುರಿಯ ಕರೆಗೆ ದನಿ ಶಾಂತ
ಮಾತಾಡುತಿರು ಆತ್ಮ ಅನವರತ

ಎಂದು ನೋಯಿಸಲಿಲ್ಲ,ಕಷ್ಟ ಹೇಳಲೆ ಇಲ್ಲ
ಎಂತು ಗೈದಿರಿ ಕಾರ್ಯ,ಅರಿಯೆ ನಾ ಕೈಂಕರ್ಯ
ಉದ್ದೇಶ ಬದುಕಾಯ್ತು,ಸಂತೋಷ ನೀಡಾಯ್ತು
ಹೇಳಿ ಹೋಗಲೆ ಇಲ್ಲ,ಅದ ನಾ ಕ್ಷಮಿಸೊಲ್ಲ

ಅಂದು ನೀವಂದದ್ದು ಬದುಕು ಹೋರಾಟ
ಆದರೂ ಗೈದಿರಿ,ನಿಮಗೆಷ್ಟು ಹಠ !
ಇಂದು ನನಗನಿಸುತಿದೆ ನೀವೆ ದನ್ಯ
ದಿನವು ಹೋರಾಟ,ಬದುಕು ಅಗಮ್ಯ

ಸಾಕಿನ್ನು ಈ ಮೌನ,ಅದುವೆ ಗಹನ
ಹೇಳಿಕೊಡಿ ಬದುಕು ಎಂತು ಚಲನ?
ನೀವಿಲ್ಲದೀ ಬದುಕು ಮೊದಲೇ ಶೂನ್ಯ
ಕೊನೆ ಪಕ್ಷ ಒಂದು ಮಾತು,ಅದುವೆ ಮಾನ್ಯ।

ನಿಮ್ಮ ಕುಡಿ,ದಿನು
मिस उ पापा............एवर मिस उ........

(ನಾನಿನ್ನು ಮದುವೆ ಎಂಬ ಬಾವ ಚೌಕಟ್ಟಿಗೆ ತುಂಬಿ ಕೊಂಡವನಲ್ಲ। ಕೋರಿದ ಮನಸಿಗಾಗಿ ಕಲ್ಪನೆಯಲ್ಲಿ ಬರೆದ ತೊದಲು.....ತಪ್ಪಿದ್ದರೆ ಅನುಭವ ಉಳ್ಳವರು ದಯವಿಟ್ಟು ಕ್ಷಮಿಸಿ)


ವಿನಂತಿಗೆ ಓಗೊಟ್ಟು..........

ಮೊದಲ ನೋಟದ ಮೆಲುಕು
ಕದಬಿಟ್ಟು ಹೊರಟಿಲ್ಲ
ಅಂದು ಮೂಡಿದ ವಿಶ್ವಾಸ
ಮನ-ಬಿಟ್ಟು ಕೊಟ್ಟಿಲ್ಲ
ಮಾಸಿದ ಕೆನ್ನೆಯ ನಸುಗೆಂಪು
ಸ್ನಿಗ್ದ ಬಾವದೊಳು ತಂಪು

ಕೌತುಕದ ಕಣ್ಣ ರೆಪ್ಪೆಯ ಬಡಿತ
ಇಂದಿನ ದಿನಕು ಅದುವೆ ತುಡಿತ !
ಕಣ್ಮುಂದೆ ಒಣಗಿದ್ದ ಅದರ
ನೆನಪಾದಂತೆಲ್ಲ ಮನಕೆ ಚಾದರ

ನನ್ನದು,ನನ್ನವರು/ಳು ಆದ ಕ್ಷಣ
ಮನದೊಳಗೆ ಪ್ರಶ್ನೆಗಳು ಭಣಭಣ
ಮರೆತಿಲ್ಲ ಆ ಕೌತುಕದ ನೋಟ
ಅರಿತೊ,ಅರಿಯದೆಯೋ ಒಳಕೊಂಡಾಟ

ಇಂದು ಕದಸರಿಯೆ ಅಪ್ಪಣಿ
ಬಾವಗುಂಗಿಗೆ ಸಮಸ್ತ ಮನ್ನಣಿ
ಎದೆಗವುಚಿ ಕೂರಲಿ ದಿವ್ಯಮಣಿ
ಕಂಡ ಕನಸುಗಳೇ ಜೀವಕರ್ಪಣಿ
ಬಾವದೊಳು ಹೊಸೆಯಲಿ ಬಂಧ
ಮದುವೆ....ಅದೇನೋ ಆನಂದ

ದನಿ : ದಿನು